ವಾಣಿಜ್ಯ ವಿಷಯ ಲೆಕ್ಕಕ್ಕೆ ಮಾತ್ರ ಸೀಮಿತವಲ್ಲ;  ಪ್ರೋ. ನಾಗೇಂದ್ರ

Spread the love

ವಾಣಿಜ್ಯ ವಿಷಯ ಲೆಕ್ಕಕ್ಕೆ ಮಾತ್ರ ಸೀಮಿತವಲ್ಲ;  ಪ್ರೋ. ನಾಗೇಂದ್ರ

ಮೂಡಬಿದ್ರೆ: ವಾಣಿಜ್ಯ ವಿಷಯ ಕೇವಲ ಲೆಕ್ಕಕ್ಕೆ ಮಾತ್ರ ಸೀಮಿತವಲ್ಲ.  ಇದು ಸದಾ ಬೆಳವಣಿಗೆ ಹೊಂದುವ ಕ್ಷೇತ್ರ. ಇದನ್ನು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸರಿಯಾಗಿ ಅರಿತುಕೊಂಡು ಜೀವನ ನಡೆಸಿದರೆ ಉತ್ತಮ ಭವಿಷ್ಯವಿದೆ ಎಂದು ಆಳ್ವಾಸ್ ಕಾಲೇಜಿನ ಎಂ.ಬಿ.ಎ ವಿಭಾಗದ ಉಪನ್ಯಾಸಕ ಪ್ರೋ. ಎಸ್.ನಾಗೇಂದ್ರ ಹೇಳಿದರು.

 ಆಳ್ವಾಸ್ ಕಾಲೇಜಿನ ಪುಟ್ಟಣ್ಣಕಣಗಾಲ್ ವೇದಿಕೆಯಲ್ಲಿ ಎಂ.ಕಾಂ ವಿಭಾಗವು ಆಯೋಜಿಸಿದ್ದ ‘ಇನೇರ್ಶಿಯಾ-2019’  ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿ ‘ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಜೀವನ ಪುಸ್ತಕದ ಹುಳುವಿನಂತಾಗಿದ್ದು, ಅನಗತ್ಯವಾಗಿ ತಂತ್ರಜ್ಞಾನಗಳ ಬಳಕೆಗೆ ಮೀಸಲಾಗಿದೆ. ಇದರಿಂದ ಹೊರಬಂದು ವಿಶಾಲವಾದ ಜಗತ್ತಿನ ಜ್ಞಾನವನ್ನು ಮೊದಲು ಅರಿತುಕೊಳ್ಳಬೇಕು. ಕೇವಲ ಕ್ರೀಯಾಶೀಲತೆ ಇದ್ದರೆ ಸಾಲದು ಅದನ್ನು ಪ್ರಸ್ತುತ ಪಡಿಸುವಜ್ಞಾನವಿದ್ದರೆ ಗೆಲುವು ಸಾಧ್ಯಎಂದರು.

ವಿದ್ಯಾರ್ಥಿಗಳು ಉತ್ತಮ ಗುರಿತಲುಪಲು ಕ್ರೀಯಾಶೀಲತೆ, ಸಂವಹನ, ಸಾಮಾನ್ಯಜ್ಞಾನ ಮೂರು ಮುಖ್ಯ ಸಾಧನಗಳು. ಇದನ್ನು ಬಳಸಿಕೊಳ್ಳುತ್ತಾ  ನಿಪುಣತೆಯಿಂದ ಕೆಲಸ ನಿರ್ವಹಿಸಬೇಕು. ಜೀವನವೆಂಬುದು ಸುಲಭದ ಮಾತಲ್ಲ ನಮ್ಮ ಏಳಿಗೆಯ ಕಡೆ ನಾವೇ ಗಮನ ಹರಿಸಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವಾ ‘ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕ್ರೀಯಾಶೀಲತೆಯಿಂತ ಕೂಡಿರುತ್ತಾರೆ. ತಮ್ಮ ಸ್ವಂತಿಕೆಯಿಂದ ಜೀವನದಲ್ಲಿ ಯಶಸ್ಸುಕಾಣುವ ತುಡಿತದಲ್ಲಿರುತ್ತಾರೆ. ಇದರಜೊತೆಗೆ ಈ ರೀತಿಯ ಉತ್ಸವಗಳು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೇ ಪ್ರತಿದಿನವೂ ಇಂತಹ ಉತ್ಸಾಹ ಮುಂದುವರಿಯಬೇಕು’ ಎಂದರು.

ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಟ್ಯಾಕ್ಸಿಂಗ್, ಫಿನಾನ್ಸಿಂಗ್, ಮಾರ್ಕೆಟಿಂಗ್, ರಸಪ್ರಶ್ನೆ, ಬೆಸ್ಟ್ ಮ್ಯಾನೆಜ್‍ಮೆಂಟ್‍ಟೀಮ್ ಮುಂತಾದ ಸ್ಪರ್ಧೆಗಳನ್ನು ಆಯೋಜಿಲಸಲಾಗಿತ್ತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಡಿದ ಆಳ್ವಸ ಪದವಿ ªವಾಣಿಜ್ಯ ವಿಭಾಗದ ಡೀನ್ ಉಮೇಶ ಶೆಟ್ಟಿ ಮಾತನಾಡಿ, ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ ಬಹುಮಾನ ಎಂದು ನಮ್ಮ ಆದ್ಯತೆಯಾಗಬಾರದು. ಇಂತಹ ಸ್ಪರ್ಧೆಗಳಿಂದ ಕಲಿತ ಪಾಠವನ್ನು ಜೀವನದಲ್ಲಿ ಆಳವಡಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.

ಬಹುಮಾನ: ಟೀಮ್ ನಿಮಿತ್ತಾ ಇನೇರ್ಶಿಯಾ-2019 ರ ವಿನ್ನರ್ ಆಗಿ ಹೊರಹೊಮ್ಮಿದರೆ, ಟೀಮ್ ಅಪ್ರಮೇಯ ರನ್ನರ್ಸ್ ಆಪ್ ಪ್ರಶಸ್ತಿಗೆ ಭಾಜನವಾಯಿತು.

ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ವಿಭಾಗದ ಮುಖ್ಯಸ್ಥ ಪ್ರೋ. ಪವನ್‍ಕಿರಣ್‍ಕೆರೆ, ಸಂಯೋಜಕ ಶಿವಕುಮಾರ್ ಉಪಸ್ಥಿತರಿದ್ದರು. ಅನುಷಾ ಶೆಟ್ಟಿ ನಿರೂಪಿಸಿದರು.


Spread the love