ವಾಮಂಜೂರಿನಲ್ಲಿ ಪಂಚೋತ್ಸವ ಕಾರ್ಯಕ್ರಮ
ಮಂಗಳೂರು:ಅಮೃತೇಶ್ವರ ನಾಟ್ಯಾಲಯ ವಾಮಂಜೂರು ಸಮರ್ಪಿಸಿದ “ಪಂಚೋತ್ಸವ” ಕಾರ್ಯಕ್ರಮವು ಚರ್ಚ್‍ಹಾಲ್ ವಾಮಂಜೂರುನಲ್ಲಿ ಇತ್ತೀಚೆಗೆ ಜರಗಿತು. ವಿದುಷಿ ಶ್ರೀಮತಿ ಭಾರತೀ ಸುರೇಶ್‍ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಶಾಸಕ ಕೃಷ್ಣ ಜೆ ಪಾಲೆಮಾರ್ ನಾಟ್ಯಾಲಯದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕುಡುಪು ಅನಂತ ಪದ್ಮನಾಭ ದೇವಾಸ್ಥಾನದ ಆಡಳಿತ ಮೋಕ್ತೇಸರ ನರಸಿಂಹ ತಂತ್ರಿ ಹಾಗೂ ವಾಮಂಜೂರುಅಮೃತೇಶ್ವರ ದೇವಸ್ಥಾನ ದ ಪ್ರಧಾನ ಅರ್ಚಕರಾದ ಗೋಪಾಲ ಕೃಷ್ಣ ಭಟ್ ಆಶೀರ್ವಚನ ನೀಡಿದರು. ಕರ್ನಾಟಕ ವಿದ್ವಾನ್.ಕೆ.ಚಂದ್ರಶೇಖರ ನಾರಡ ಉಪಸ್ಥಿತರಿದ್ದರು.
ಅತಿಥಿಗಳಾಗಿ ಕಾರ್ಪೋರೇಟರ್ ಹೇಮಲತಾ ರಘು ಸಾಲ್ಯಾನ್ ವಾಮಂಜೂರು, ಭೋಜರಾಜ ವಾಮಂಜೂರು, ಜಗದೀಶ ಬಾಳ, ಸತೀಶ್ ಮೂಡು ಜಪ್ಪುಗುತ್ತು, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್.ಶೆಟ್ಟಿ. ಭಾಗವಹಿಸಿದ್ದರು.
ಸಂಸ್ಥೆಯ ಸ್ಥಾಪಕ ನಿರ್ದೇಶಕಿ ವಿದಷಿ ಕುಮಾರಿ ಚಿತ್ರಾಕ್ಷಿ ಸಂಯೋಜನೆಯ ಭರತನಾಟ್ಯ ಹಾಗೂ ಜನಪದ ನೃತ್ಯವು ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಂದ ಜರಗಿತು.
ಹಿಮ್ಮೇಳ ಕಲಾವಿದರಾಗಿ ಸ್ವರಾಗ್ ಕಣ್ಣೂರು, ರಾಜನ್ ಪಯ್ಯನ್ನೂರು, ರಾಹುಲ್ ಕಣ್ಣೂರು,ರಾಕೇಶ್ ಹೊಸಬೆಟ್ಟು, ವಿಜಯ್ ಆಚಾರ್ಯ ಕುಳಾಯಿ, ಹರ್ಷಿತ್ ಸುರತ್ಕಲ್,ಕಮಲ್ ಜೋಗಿ ಕೈಕಂಬ,ಕುಮಾರಿ ರಂಜನಿ ಇವರು ಭಾಗವಹಿಸಿದ್ದರು.