ವಾಹನಗಳ ಬ್ಯಾಟರಿ ಕಳ್ಳತನ ಪ್ರಕರಣದ ಆರೋಪಿಯ ಸೆರೆ ಆರೋಪಿಯಿಂದ ಒಟ್ಟು 3,90,000/ಮೌಲ್ಯದ ಸೊತ್ತು ವಶಕ್ಕೆ

Spread the love

ವಾಹನಗಳ ಬ್ಯಾಟರಿ ಕಳ್ಳತನ ಪ್ರಕರಣದ ಆರೋಪಿಯ ಸೆರೆ ಆರೋಪಿಯಿಂದ ಒಟ್ಟು 3,90,000/ಮೌಲ್ಯದ ಸೊತ್ತು ವಶಕ್ಕೆ

ಮಂಗಳೂರು: ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಯಾಟರಿ ಕಳವು ಮಾಡಿದ ಆರೋಪಿಯನ್ನು ಕೊಣಾಜೆ ಪೊಲೀಸರು ದಸ್ತಗಿರಿ ಮಾಡಿ ಸ್ವಾಧೀನಪಡಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಆರೋಪಿ ರಿಯಾಜ್ ಪ್ರಾಯ (30), ಕೆಳಗಿನ ಮನೆ ವಿಜಯ ಬ್ಯಾಂಕ್ ಬಳಿ ಕಜೆ ತಲಪಾಡಿ ಪೋಸ್ಟ ಸೋಮೇಶ್ವರ, ಉಳ್ಳಾಲ ತಾಲೂಕು.

ದಿನಾಂಕ: 29-01-2024 ರಂದು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿಗಳ ಬ್ಯಾಟರಿಗಳು ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದ ಆರೋಪಿಯನ್ನು ಕೊಣಾಜೆ ಪೊಲೀಸರು ಪತ್ತೆ ಕಾರ್ಯದಲ್ಲಿರುವಾಗ ದಿನಾಂಕ 14-02-2024 ರಂದು ಕೊಣಾಜೆ ಠಾಣಾ ಪಿ.ಎಸ್.ಐ ಅಶೋಕ ರವರು ಸಿಬ್ಬಂದಿಗಳಾದ ಸಂತೋಷ್,ಬಸವನಗೌಡ್ರ ಸುರೇಶ್ ಜೊತೆ ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ರಿಯಾಜ್ ತಲಪಾಡಿನನ್ನು ನಾಟೇಕಲ್ ಬಳಿ ಆರೋಪಿ ಹಾಗೂ ಆತ ಕೃತ್ಯಕ್ಕೆ ಉಪಯೋಗಿದ ಸ್ಕೂಟಿ ನಂಬ್ರ-ಕೆ ಎ 19 ಹೆಚ್ ಜಿ 0399 ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಆರೋಪಿಯಿಂದ ಕೃತ್ಯಕ್ಕೆ ಉಪಯೋಗಿದ ವಾಹನ ಹಾಗೂ ಬ್ಯಾಟರಿಗಳು ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 3,90,000/- ರೂ ಆಗಿರುತ್ತದೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಪತ್ತೆಕಾರ್ಯವನ್ನು ಮಂಗಳೂರು ನಗರ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರವಾಲ್, ಐ.ಪಿ.ಎಸ್‌ರವರ ಮಾರ್ಗದರ್ಶನದಂತೆ ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಶ್ರೀ ಸಿದ್ದಾರ್ಥ ಗೋಯಲ್ ಐ.ಪಿ.ಎಸ್ ಮತ್ತು ಅಪರಾಧ & ಸಂಚಾರ ವಿಭಾಗದ ಡಿಸಿಪಿ ಶ್ರೀ ದಿನೇಶ್‌ಕುಮಾರ್ ನಿರ್ದೇಶನದಂತೆ, ಮಂಗಳೂರು ದಕ್ಷಿಣ ವಿಭಾಗದ ಎ.ಸಿ.ಪಿ. ಶ್ರೀಮತಿ ಧನ್ಯ ಎನ್ ನಾಯಕ ರವರ ನೇತೃತ್ವದಲ್ಲಿ ಈ ಆರೋಪಿಯ ಮತ್ತು ಸೊತ್ತು ಪತ್ತೆಕಾರ್ಯದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ರವೀದ್ರ ಸಿ ಎಂ, ಪೊಲೀಸ್ ಉಪ ನಿರೀಕ್ಷಕರುಗಳಾದ ನಾಗರಾಜ್ ಎಸ್, ಪುನೀತ್ ಗಾಂವಕಾರ್, ಅಶೋಕ್, ಯಲ್ಲಾಲಿಂಗ, ಸಿಬ್ಬಂದಿಗಳಾದ ಸಂಜೀವ್ ASI ,ರೇಶ್ಯಾWHC ಸಂತೋಷ್ ಕೆ ಸಿ ಬಸವನಗೌಡ, ಸುರೇಶ್ ತಳವಾರ್ ರವರು ಶ್ರಮಿಸಿರುತ್ತಾರೆ.


Spread the love