ವಾಹನ ಇಂಜಿನ್ ನಂಬರ್ ಬದಲಿಸಿ ಸಾಲ ಪಡೆಯುತ್ತಿದ್ದ ಜಾಲದ ಐವರ ಬಂಧನ
ಮಂಗಳೂರು: ವಾಹನ ಚಾಸಿಸ್ ಮತ್ತು ಇಂಜಿನ್ ನಂಬರ್ ಬದಲಾಯಿಸುವ ಬೃಹತ್ ಜಾಲವೊಂದನ್ನು ಮಂಗಳೂರು ಬರ್ಕೆ ಪೋಲಿಸರು ಬಂಧಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮಂಗಳೂರು ಪೋಲಿಸ್ ಕಮೀಷನರ್ ಬಂಧಿತರನ್ನು ಅನಿಲ್ ನೊರೊನ್ಹಾ, ಕುಲಶೇಖರ, ಸುಧೀರ್ ಮರೋಳಿ, ನವೀನ್ ನೊರೋನ್ಹಾ ಉಳಾಯಿಬೆಟ್ಟು, ವಲೇರಿಯನ್ ಡಿಸೋಜ ಪಾವೂರು ಮತ್ತು ಜಬ್ಬಾರ್ ಬಂಟ್ವಾಳ ಎಂದು ಗುರುತಿಸಲಾಗಿದೆ.
ಬರ್ಕೆ ಪೋಲಿಸರು ಲಾರಿ ತಪಾಸಣೆ ಮಾಡುತ್ತಿದ್ದ ವೇಳೆ ಆರೋಪಿಗಳಾದ ಅನಿಲ್, ಸುಧಿರ್, ವಲೇರಿಯನ್, ಜಬ್ಬಾರ್ ನವೀನ್ ರಿಂದ ವಿಷಯ ತಿಳಿಯುತ್ತಿದ್ದಂತೆ ನಾಲ್ಕು ಟ್ರಕ್ ಗಳ ಸಹಿತ ನಾಲ್ವರನ್ನು ವಶಕ್ಕೆ ಪಡೆದಾಗ, ಒಂದೇ ವಾಹನಕ್ಕೆ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ತೆಗೆದು ವಂಚನೆ ಮಾಡಿರುವುದಾಗಿ ಮತ್ತು ವಿವಿಧ ಬ್ಯಾಂಕ್ ಗಳಲ್ಲಿ ರೂ 93,94,029 ಸಾಲ ಪಡೆದಿರುವ ಮಾಹಿತಿ ಲಭಿಸಿದೆ ಎಂದರು.
ಆರೋಪಿಗಳನ್ನು ಹಿಡಿಯುವಲ್ಲಿ ಸಹಕರಿಸಿದ ಪೋಲಿಸರಿಗೆ ಕಮೀಷನರ್ ನಗದು ಬಹುಮಾನವನ್ನು ಘೋಷಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಶಾಂತರಾಜು, ಸಂಚಾರ ಮತ್ತು ಕ್ರೈಮ್ ವಿಭಾಗದ ಡಿಸಿಪಿ ಡಾ ಸಂಜೀವ್ ಪಾಟೀಲ್, ಎಸಿಪಿ ಉದಯ್ ನಾಯಕ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.