ವಾಹನ ಕಳ್ಳತನ ಪ್ರಕರಣದ ಕುಖ್ಯಾತ ಆರೋಪಿಯ ಸೆರೆ – ರೂ 68,000/- ಮೌಲ್ಯದ ಸೊತ್ತು ವಶಕ್ಕೆ

Spread the love

ವಾಹನ ಕಳ್ಳತನ ಪ್ರಕರಣದ ಕುಖ್ಯಾತ ಆರೋಪಿಯ ಸೆರೆ – ರೂ 68,000/- ಮೌಲ್ಯದ ಸೊತ್ತು ವಶಕ್ಕೆ

ಮಂಗಳೂರು: ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ ಆರೋಪಿಯನ್ನು ಕೊಣಾಜೆ ಪೊಲೀಸರು ದಸ್ತಗಿರಿ ಮಾಡಿದ ವಾಹನಗಳನ್ನು ಸ್ವಾಧೀನಪಡಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಬಂಧಿತ ಆರೋಪಿಯನ್ನು ಉಳ್ಳಾಲ ನಿತ್ಯಾನಂದ ನಗರ ನಿವಾಸಿ ಜಾಹೀದ್ (24) ಎಂದು ಗುರುತಿಸಲಾಗಿದೆ

ದಿನಾಂಕ: 22-10-2023 ರಂದು ಕೊಣಾಜೆ ಪೊಲೀಸ್ ಠಾಣೆಯ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ತಿಲಕನಗರ ಎಂಬಲ್ಲಿ ಐಸಮ್ಮ ಎಂಬವರ ಬಾಬ್ತು KA-19- EV-2761 ನೇ ಹೋಂಡಾ ಡೀಯೋವನ್ನು ವಾಹನ ಕಳ್ಳತನ ಮಾಡಿದ ಬಗ್ಗೆ ಐಸಮ್ಮ ರವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.

ದಿನಾಂಕ 16.11.2023 ರಂದು ಕೊಣಾಜೆ ಪೊಲೀಸ್ ಠಾಣೆಯ ವ್ಯಾಪ್ತಿಯ ದೇರಳಕಟ್ಟೆಯ ಗ್ರೀನ್ ಗ್ರೌಂಡ್ ಬಳಿ ಗುಲಾಮ್ ಹುಸೇನ್ ಎಂಬವರು ನಿಲ್ಲಿಸಿದ ತನ್ನ ಬಾಬ್ತು KA-20-EG-7272 ನೇ ನೋಂದಣಿ ಸಂಖ್ಯೆ ಹೋಂಡಾ ಆಕ್ಟಿವಾ ವಾಹನ ಕಳವಾದ ಬಗ್ಗೆ ಗುಲಾಮ್ ಹುಸೇನ್ ರವರು ನೀಡಿದ ದೂರಿನಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿರುತ್ತದೆ.

ಈ ಎರಡೂ ಪ್ರಕರಣಗಳ ಆರೋಪಿಯನ್ನು ಕೊಣಾಜೆ ಪೊಲೀಸರು ಹುಡುಕುತ್ತಿರುವಾಗ ದಿನಾಂಕ 01.12.2023 ರಂದು ಕೊಣಾಜೆ ಠಾಣಾ ಪಿ.ಎಸ್.ಐ ಅಶೋಕ ರವರು ಸಿಬ್ಬಂದಿಗಳ ಜೊತೆ ಈ ಪ್ರಕರಣಕ್ಕೆ ಸಂಬAಧಿಸಿದ ಓರ್ವಆರೋಪಿ ಹುಸೇನ್ ಜಾಯಿದ್ ನನ್ನು ಅಂಬ್ಲಮೊಗರು ಹಾಗೂ ದೇರಳಕಟ್ಟೆಯಲ್ಲಿ ವಾಹನ ಕಳ್ಳತನ ಮಾಡಿದ್ದ KA-19- EV-2761 ನೇ ಹೋಂಡಾ ಡೀಯೋವನ್ನು, KA-20-EG-7272 ನೇ ನೋಂದಣಿ ಸಂಖ್ಯೆ ಹೋಂಡಾ ಆಕ್ಟಿವಾ ವಾಹನಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ

ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 68,000/- ರೂ ಆಗಬಹುದು. ಆರೋಪಿಗಳನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಪತ್ತೆಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್, ಐ.ಪಿ.ಎಸ್ರವರ ಮಾರ್ಗದರ್ಶನದಂತೆ, ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್ ಐ.ಪಿ.ಎಸ್ ಮತ್ತು ಅಪರಾಧ & ಸಂಚಾರ ವಿಭಾಗದ ಡಿಸಿಪಿ ದಿನೇಶ್ಕುಮಾರ್ ನಿರ್ದೇಶನದಂತೆ, ಮಂಗಳೂರು ದಕ್ಷಿಣ ವಿಭಾಗದ ಎ.ಸಿ.ಪಿ. ಧನ್ಯ ಎನ್ ನಾಯಕ ರವರ ನೇತೃತ್ವದಲ್ಲಿ ಈ ಆರೋಪಿಗಳ ಮತ್ತು ಸೊತ್ತು ಪತ್ತೆಕರ್ಯದದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರಾದ ಬಾಲಕೃಷ್ಣ, ಪೊಲೀಸ್ ಉಪ ನಿರೀಕ್ಷಕರುಗಳಾದ ನಾಗರಾಜ್ ಎಸ್, ಪುನೀತ್ ಗಾಂವಕಾರ್, ಅಶೋಕ್, ವಿನೋದ್, ಸಿಬ್ಬಂದಿಗಳಾದ ಸಂತೋಷ್ ಕೆ ಸಿ, ಸುರೇಶ್ ತಳವಾರ್ ರವರು ಶ್ರಮಿಸಿರುತ್ತಾರೆ.


Spread the love