Home Mangalorean News Kannada News ವಾಹನ ಚಾಲಕರು ಸಾರ್ವಜನಿಕ ಜೀವ ರಕ್ಷಕರು : ಡಾ. ಜುಲಿಯಾನ್ ಸಲ್ದಾನ

ವಾಹನ ಚಾಲಕರು ಸಾರ್ವಜನಿಕ ಜೀವ ರಕ್ಷಕರು : ಡಾ. ಜುಲಿಯಾನ್ ಸಲ್ದಾನ

Spread the love

ವಾಹನ ಚಾಲಕರು ಸಾರ್ವಜನಿಕ ಜೀವ ರಕ್ಷಕರು : ಡಾ. ಜುಲಿಯಾನ್ ಸಲ್ದಾನ

ಮಂಗಳೂರು : ಸಂತ ಕ್ರಿಸ್ಟೋಫರ್ ವಾಹನ ಚಾಲಕ ಮಾಲಕರ ಎಸೋಸಿಯೇಷನ್ ಮಂಗಳೂರು ಇದರ ವತಿಯಿಂದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅರ್ಥಿಕ ಹಿಂದುಳಿದ ಮಕ್ಕಳಿಗೆ ಅರ್ಥಿಕ ಸಹಾಯ ವಿತರಣಾ ಕಾರ್ಯಕ್ರಮ  ರುಜಾರಿಯೋ ಕಲ್ಚರಲ್ ಹಾಲ್‍ನಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವೆನ್‍ಲಾಕ್ ಅಸ್ಪತ್ರೆಯ ಸರ್ಜನ್   ಡಾಕ್ಟರ್ ಜುಲಿಯಾನ್ ಸಲ್ದಾನಾ ಪ್ರತಿಬಾ ಪುರಸ್ಕರ ನೆರವೇರಿಸಿ ಮಾತನಾಡಿ, ವಾಹನ ಚಾಲಕರು ಚಿಕ್ಕ ವಾಹನವಾಗಲಿ ದೊಡ್ಡ ವಾಹನವಾಗಲಿ ತನ್ನ ವಾಹನದಲ್ಲಿ ಕುಳಿತಿರುವ ಪ್ರಯಾಣಿಕರ ಹಾಗೂ ವಾಹನ ಚಲಾಯಿಸುವಾಗ ರಸ್ತೆಯಲ್ಲಿ ನಡೆದು ಹೋಗುವ ಜೀವ ರಕ್ಷಕರು ಎಂಬುದು ಅರಿತುಕೊಳ್ಳುವುದು ಅತ್ಯಗತ್ಯ ಹಾಗೂ ವಾಹನ ಚಾಲಕರು ಪ್ರಯಾಣಿಕರ ಒಳ್ಳೆಯ ಸಂಬಂಧ ಮೂಲಕ ಸಮಾಜದಲ್ಲಿ ಒಳ್ಳೆಯ ವಾತಾವರಣ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷ ವಹಿಸಿದ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ದಾನ ಮಾತಾನಾಡಿ ಮನುಷ್ಯರು ವ್ಯಕ್ತಿ ವ್ಯಕ್ತಿಗಳ ಮಧ್ಯೆ ಹಾಗೂ ವ್ಯಕ್ತಿ ಹಾಗೂ ವಸ್ತುಗಳನ್ನು ಅತ್ಯಂತ ಹೊಂದಿಕೊಂಡು ಇರುವುದು ಸಾಮಾನ್ಯ. ಆದರೆ ಆ ಮದ್ಯದಲ್ಲಿ ದೇವರನ್ನು ಸ್ಮರಿಸಿ ಅವರ ಮುಖಾಂತರ ಬೇರೆಯವರನ್ನು ಕಾಣುವುದು ಉತ್ತಮ. ಸಂತ ಕ್ರಿಸ್ತೋಫರ್ ಎಸೋಸಿಯೇಷನ್ ಕಳೆದ 52 ವರುಷಗಳಲ್ಲಿ ತಮ್ಮ ಸದಸ್ಯರಿಗೆ, ಸದಸ್ಯರ ಕುಟುಂಬದವರಿಗೆ ಸಮಾಜಕ್ಕೆ ಕೊಡುವ ಸೇವೆ ಇತರ ಸಂಘಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ಎಸೋಷಿಯೇಷನಿನ ಅಧ್ಯಾತ್ಮಿಕ ನಿರ್ಧಶಕರಾದ ವಂದನೀಯ ಜೆ.ಬಿ. ಕ್ರಾಸ್ತರವರು ಶುಭವನ್ನು ಹಾರ್ಯಸಿದರು.

ಗೌರವ ಅದ್ಯಕ್ಷರಾದ ಸುಶೀಲ್ ನೊರೊನ್ಹರವರು ವಿಶೇಷ ಸಾಧನೆಗೈದ ಜೋನ್ ಎಡ್ವರ್ಡ್ ಡಿಸಿಲ್ವ ಹಾಗೂ ಪ್ರಿಮಲ್ ಡಿಸೋಜ ಇವರ ವ್ಯಕ್ತಿ ಪರಿ ಪರಿಚಯವನ್ನು ನೀಡಿದರು.

ಎಸೋಸಿಯೇಷನಿನ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಸ್ವಾಗತಿಸಿ ಕಾರ್ಯದರ್ಶಿ ನೈಜಿಲ್ ಪಿರೇರ ಹಾಗೂ ಉಪಾಧ್ಯಕ್ಷರಾದ ಸೆಬೆಸ್ಟಿಯನ್ ನೊರೊನ್ಹ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹ ಕಾರ್ಯದರ್ಶಿ ಲೀನಾ ಡಿಸೋಜ ಧನ್ಯವಾದಗೈದರು. ಶ್ರೀಯುತ ಜೋನ್ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version