Home Mangalorean News Kannada News ವಿಂಶತಿಯವಿಜೃಂಭಣೆಯಲ್ಲಿ -ಯು. ಎ. ಇ. ಬ್ರಾಹ್ಮಣ ಸಮಾಜ, ದುಬೈ

ವಿಂಶತಿಯವಿಜೃಂಭಣೆಯಲ್ಲಿ -ಯು. ಎ. ಇ. ಬ್ರಾಹ್ಮಣ ಸಮಾಜ, ದುಬೈ

Spread the love

ವಿಂಶತಿಯವಿಜೃಂಭಣೆಯಲ್ಲಿ -ಯು. ಎ. ಇ. ಬ್ರಾಹ್ಮಣ ಸಮಾಜ, ದುಬೈ

ಪ್ರಥಮಗಮನಕ್ಕೆ:

ಸಮುದಾಯ ಸಂಘಟನೆಯ ಚಟುವಟಿಕೆಗಳು ಇಲ್ಲಿನ ಸ್ಥಾನೀಯಕಾ ಯಿದೆಯಪ್ರಕಾರ ಕಠಿಣ ನಿರ್ಬಂಧಗಳಿಗೆ ಬದ್ದವಾಗಿದೆ. ಸಾರ್ವಜನಿಕ ಕಾರ್ಯಕ್ರಮಕ್ಕೆ ಪರವಾನಿಗೆ ಕಡ್ಡಾಯ. ಸ್ಥಳೀಯ ಕಾನೂನಿನ ಪರಿಪಾಲನೆ ಅನಿವಾರ್ಯ.

ಇಂತಹ ಪ್ರತಿಕೂಲ ವಾತಾವರಣದಮದ್ಯೆ ಲಾಭರಹಿತ ಸಮಾಜಸಂಘಗಳ ನಿರ್ವಹಣೆ ಒಂದು ನಿರಂತರ ಸಾಹಸ.ಸಾಮಾನ್ಯವಾಗಿ ವರ್ಷಒಂದರಲ್ಲಿ ಗರಿಷ್ಠ ಮೂರು-ನಾಲ್ಕು ಕಾರ್ಯಕ್ರಮಗಳಷ್ಟೇ ನಡೆಸುವದಕ್ಕೆ ಸಾಧ್ಯವಾಗುತ್ತಿರುವ ವಾಸ್ತವ್ಯದಲ್ಲಿ ಯುಎಈ ಬ್ರಾಹ್ಮಣಸಮಾಜಶೋಭಕೃತ್ಸಂವತ್ಸರದಉದ್ದಕ್ಕೂ20ಮೌಲ್ಯಭರಿತ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಅಭೂತಪೂರ್ವ ದಾಖಲೆ.

ಉದ್ಯೋಗಾರ್ಥವಾಗಿ,ಯು.ಎ.ಇ.ಯಲ್ಲಿ ನೆಲಸಿರುವ ಕರ್ನಾಟಕ ಕರಾವಳಿ ಮೂಲದ ಸಮಗ್ರ ಬ್ರಾಹ್ಮಣರ ವೇದಿಕೆ -ಯು.ಎ.ಇ.ಬ್ರಾಹ್ಮಣ ಸಮಾಜ. ಇಲ್ಲಿ, ಶಿವಳ್ಳಿ, ಹವ್ಯಕ, ಕೋಟ, ಸ್ಮಾರ್ಥ, ವೈಷ್ಣವ…..ಹೀಗೆ ಎಲ್ಲ ವರ್ಗದ ಸಮಾನಮನಸ್ಕ ಬ್ರಾಹ್ಮಣರಿಗೆ ಪ್ರವೇಶ. ಸದಸ್ಯತ್ವಕ್ಕೆ ಶುಲ್ಕ ವಿಲ್ಲ. ಭಾಗವಹಿಕೆಗೆ ನಿರ್ಬಂಧವಲ್ಲ. ಅನುಕೂಲಕ್ಕೆ ಅನುಗುಣವಾಗಿ ಸೇರಿಕೊಳ್ಳಬಹುದಾದ ಮುಕ್ತ ಕುಟುಂಬವೇದಿಕೆ.

ಧ್ಯೇಯವಾಕ್ಯ

“ಸರ್ವೇಜನಃಸುಖಿನೋಭವಂತು ” ಎನ್ನುವ ಧ್ಯೇಯವಾಕ್ಯದ ಪಥದಲ್ಲಿ –  ಸಮಸ್ತ ಮಾನವ ಕುಲಕ್ಕೆ ಒಳಿತನ್ನು ಬಯಸುವ ಇತರ ಸಮಾನಮನಸ್ಕ ಸಮಾಜದ ಕಾರ್ಯಕ್ರಮಗಳಲ್ಲೂ ತಮನ್ನು ತೊಡಗಿಸಿಕೊಳ್ಳಲು ಯು. ಎ. ಇ. ಬ್ರಾಹ್ಮಣ ಸಮಾಜ ಸದಾ ಸಿದ್ಧ. ಸೌಹಾರ್ದತೆಯ ನೆಲೆಯಲ್ಲಿ ಸಹ ಸಮುದಾಯಗಳನ್ನು ಜೊತೆಗೂಡಿಸಿಕೊಳ್ಳಲು ಸದಾ ಬದ್ಧ.

ಉದ್ದೇಶ -ಚಟುವಟಿಕೆ

2003 ರಿಂದ ಸದಾ ಚಟುವಟಿಕೆಯಲ್ಲಿರುವ ಈ ಸಮಾಜದ ಪ್ರಾಥಮಿಕ ಉದ್ದೇಶ – ನಮ್ಮ ಸಂಸ್ಕ್ರತಿ – ಸಂಪ್ರದಾಯಗಳನ್ನು ಜಾಗ್ರತವಾಗಿರಿಸುವುದು – ತನ್ಮೂಲಕ ಇಲ್ಲಿ ಹುಟ್ಟಿ ಬೆಳೆಯುತ್ತಿರುವ ನಮ್ಮ ಮುಂದಿನ ಪೀಳಿಗೆಗೆ ಅವುಗಳ ಅರಿವು ಮೂಡಿಸುವುದು – ದೂರದಲ್ಲಿದ್ದರೂ ಅವುಗಳಿಂದ ವಂಚಿತರಾಗದಂತೆ, ಆಚರಣೆಗೆ -ಅನುಷ್ಠಾನಕ್ಕೆ ಎಲ್ಲರಿಗೂ ಅವಕಾಶ ಮಾಡಿ ಕೊಡುವುದು.

ಯುಗಾದಿ ಸಂದರ್ಭದಲ್ಲಿ ಸತ್ಯನಾರಾಯಣ ಪೂಜೆ, ನವರಾತ್ರಿಯಲ್ಲಿ ದುರ್ಗಾ ನಮಸ್ಕಾರ, ವಾರ್ಷಿಕ ವಿಹಾರಕೂಟ  – ಹೀಗೆ ನಿಗದಿತ ಕಾರ್ಯಕ್ರಮಗಳಿಂದ ಆರಂಭಗೊಂಡು, ಮುಂದೆ ಸದಸ್ಯರ ಉತ್ತೇಜನದಿಂದ ಕಾಲ ಕ್ರಮೇಣ … ಉಪಾಕರ್ಮ, ಮಕರ ಮಾಸದಲ್ಲಿ ಶನಿಪೂಜೆ, ರಂಜಾನ್ತಿಂಗಳಿನಲ್ಲಿ ರಕ್ತದಾನ ಶಿಬಿರ, ಪ್ರತಿಭಾ ಅನ್ವೇಷಣೆ, ವಿದ್ಯಾಪುರಸ್ಕಾರ, ಊರಿನಿಂದ ಬರುವ ನಮ್ಮ ಸಮಾಜದಗಣ್ಯ, ಕಲಾವಿದರುಗಳಿಗೆ ವೇದಿಕೆ – ಸಂಮಾನ, ವಿಶಿಷ್ಟ ಕಾರ್ಯಕ್ರಮಗಳಿಗೆ ಧನಸಹಾಯ,  … ಹೀಗೆ ವೈದಿಕದಜೊತೆ ಸಾಮಾಜಿಕ ಹಾಗು ಸಾಂಸ್ಕ್ರತಿಕ ಚಟುವಟಿಕೆಗಳನ್ನು ವೃದ್ಧಿಸಿಕೊಂಡು ವರ್ಷದಲ್ಲಿ ಸರಾಸರಿ6/7ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಕಳೆದ 20 ವರ್ಷಗಳಲ್ಲಿ 150 ಕ್ಕೂ ಮಿಕ್ಕಿ ಕಾರ್ಯಕಗಳನ್ನು ನೀಡಿದ್ದೆವು – 500 ಕ್ಕೂ ಮಿಕ್ಕಿ ದಸದಸ್ಯ ಕಲಾವಿದರುಗಳಿಗೆ ವೇದಿಕೆ ಕಲ್ಪಿಸಿದ್ದೆವು.

ಕೊರೋನಸವಾಲು

ಕೊರೊನದ ಅವಧಿಯಲ್ಲೂ ವರ್ಷಂಪ್ರತಿಯಪೂಜಾರಾಧನೆಯನ್ನು ನಿಲ್ಲಿಸದೆ, ಪುರೋಹಿತರ ಮನೆಯಲ್ಲಿ ನೆರವೇರಿಸಿ, ಜೊತೆ 20ಕ್ಕೂ ಮಿಕ್ಕಿದ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣ ಮೂಲಕ ಸಂಯೋಜಿಸಲಾಗಿತ್ತು. ಪೇಜಾವರ, ಪುತ್ತಿಗೆ, ಸುಬ್ರಮಣ್ಯ ಶ್ರೀಗಳ ಪ್ರವಚನದ ಸಹಿತ, ಅನೇಕ ವಿದ್ವಾಂಸರ ಭಾಷಣ, ವಿಶಿಷ್ಟ ಕಲಾವಿದರ ಹರಿಕಥೆ, ಸಂಗೀತ, ಅರೋಗ್ಯ ಸಲಹೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಗೃಹಬಂಧನದಲ್ಲಿದ್ದ ನಮ್ಮ ಸದಸ್ಯರ ಆತ್ಮಬಲವನ್ನು ಸದಾ ಜಾಗ್ರತಿಯಲ್ಲಿರಿಸುವ ಪ್ರಯತ್ನ ಮಾಡಲಾಗಿತ್ತು.

ಹುಟ್ಟೂರಸಂಬಂಧಸೇತು

ಪೇಜಾವರ ಹಿರಿಯ ಶ್ರೀಗಳ ಪರ್ಯಾಯ ಅವಧಿಯಲ್ಲಿ ಪಾಜಕದಲ್ಲಿನ ವಿದ್ಯಾರ್ಥಿಕೇಂದ್ರಕ್ಕೆ ರೂಪಾಯಿ 10ಲಕ್ಷ ದೇಣಿಗೆ, ಪಲಿಮಾರು ಶ್ರೀಗಳ ಪರ್ಯಾಯ ಅವಧಿಯಲ್ಲಿ ಕೃಷ್ಣ ಗುಡಿಯ ಮೇಲ್ಛಾವಣಿಗೆ ಚಿನ್ನದ ಹೊದಿಕೆಗಧನ ಸಹಾಯ, ಕಳೆದ 5ವರ್ಷಗಲ್ಲಿ 2ಭಾರಿ ಭೇಟಿ ನೀಡಿದ ಪುತ್ತಿಗೆ ಶ್ರೀಗಳ ಯುಎಈ ಸಂಚಾರದ ಉಸ್ತುವಾರಿ, ಉಡುಪಿ ಯತುಶಿಮಾಮ ತಂಡದ ಆನಂದ ತೀರ್ಥಜ್ಞಾನ ಯಾತ್ರೆಗೆ ದುಬೈಯಲ್ಲಿ ಆಶ್ರಯ ,…ಕೆಲವು ಉಲ್ಲೇಖನೀಯ.

ಜನ್ಮಭೂಮಿಯ ಸಂಭಂದವನ್ನು ಸುಧ್ರಢವಾಗಿರಿಸುವ ದ್ರಷ್ಟಿಯಲ್ಲಿ, ಹುಟ್ಟೂರಿನ ಸಾಧಕರು ಇತ್ತ ಬಂದಾಗ ಅವರನ್ನು ಗುರುತಿಸಿ ಆಧರಿಸುವ ಕಾರ್ಯಕ್ರಮವನ್ನು ನಮ್ಮ ಸಮಾಜ ಸದಾ ನಡೆಸಿಕೊಂಡು ಬಂದಿದೆ, ಇವರಲ್ಲಿ, ಶ್ರೀಬನ್ನಂಜೆ ಗೋವಿಂದಾಚಾರ್ಯ, ಎಯಸ್ಏನ್ಹೆಬ್ಬಾರ್,  ರಂಗಭೂಮಿ – ಚಲನಚಿತ್ರ ನಟಿ ಜಯಶ್ರೀ, ವಿದ್ಯಾಭೂಷಣ, ಡಾ. ಕೆಪಿ ಪುತ್ತೂರಾಯ,  ಹರಿಕೃಷ್ಣ ಪುನರೂರು, ಹರಿಕಥಾವಿದುಷಿ ರುಕ್ಮಿಣಿಹಂಡೆ, ಕೆಲವು ಪ್ರಮುಖರು.

ವಿಂಶತಿಉತ್ಸವ

ರಾಜರ್ಷಿಶ್ರೀ. ವೀರೇಂದ್ರ ಹೆಗ್ಗಡೆಯವರ ಶುಭ ಹಾರೈಕೆಜೊತೆ- ಶೋಭ ಕೃತ್ಯುಗಾದಿಯ ಸತ್ಯನಾರಾಯಣಪೂಜೆಯೊಂದಿಗೆ ಆರಂಭವಾದ ವಿಂಶತಿ ಉತ್ಸವದಲ್ಲಿ, ಸಂವತ್ಸರದ ಉದ್ದಕ್ಕೂ 20ವಿಭಿನ್ನ, ವೈವಿಧ್ಯ, ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪೂಜಾರಾಧನೆಯ ಜೊತೆ, ಸಮಾಜದ ಎಲ್ಲ ವಯೋಮಾನದ ಸದಸ್ಯರ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಚಿಣ್ಣರ ಕರಕುಶಲತೆಗೆ – “ಕಿಶೋರ ಕೌಶಲ್ಯ”, ಮತ್ತು ರಂಗ ಪ್ರದರ್ಶನಕ್ಕೆ – “ಮಕ್ಕಳ ಮನದಂಗಳ”, ಹಿರಿಯ ರನೃತ್ಯಸಾಮರ್ಥ್ಯಕ್ಕೆ – “ನಾಟ್ಯಸಿಂಚನ”, ಸ್ವರವಿಕಸನಕ್ಕೆ – “ಮುಸ್ಸಂಜೆಮಾಧುರ್ಯ”, ಜಾನಪದ ಕಲೆಯ ಉದ್ದೀಪನಕ್ಕೆ “ಯಕ್ಷಮದ್ದಳೆ (ತಾಳಮದ್ದಳೆ), ಡಾ. ಪ್ರಭಾಕರ ಜೋಶಿಯವರ ಉಪನ್ಯಾಸ “ಜೋಶಿಯವರ ಜೊತೆಯಲ್ಲಿ”, “ಸಾಧಕ ಸಮ್ಮಾನ” ವಾಗಿ – ಮಾಜಿ ಶಾಶಕ ರಘುಪತಿಭಟ್, ನೃತ್ಯಗುರು ಕರ್ನಾಟಕ ಕಲಾಶ್ರೀ ವಿದ್ವಾನ್ಚಂದ್ರಶೇಖರ ನಾವಡ, ಹಿರಿಯ ಯಕ್ಷಗಾನ ವೇಷದಾರಿ ಮಧೂರು ರಾಧಾಕೃಷ್ಣ ನಾವಡ, ಚೆಂಡೆವಾದಕ ಪದ್ಮನಾಭ ಉಪಾಧ್ಯಾಯ, ಮದ್ದಳೆ ಗಾರಚೈತನ್ಯ ಪದ್ಯಾಣ, ಬಹುಮುಖ ಪ್ರತಿಭೆಯ ಯಕ್ಷಾರಾಧಕಿ ಸುಮಂಗಲಾರತ್ನಾಕರ, “ಗುರುಗೌರವ” ವಾಗಿವೈದಿಕ ಪುರೋಹಿತರುಗಳ ಸಮ್ಮಾನ, ವಿಶೇಷ ಆರಾಧನೆಯಾಗಿ ವರಮಹಾಲಕ್ಷ್ಮಿ ಪೂಜೆ, ತುಳ ಸಿಹಬ್ಬ, ಸಹಸಮುದಾಯದ ಒಳಗೊಳ್ಳುವಿಕೆಗೆ ರಂಗೋಲಿ ಸ್ಪರ್ಧೆ …ಹೀಗೆ ಮೂಡಿ ಬಂದ ಕಾರ್ಯಕ್ರಮಗಳ ದಿಬ್ಬಣಕ್ಕೆ ಅದ್ದೂರಿಯ ಸಮಾರೋಪವಾಗಿ  “ವಿಂಶತಿವೈಭವ”,  ಈಸಂವತ್ಸರದ ಕೊನೆಯದಿನ – ಏಪ್ರಿಲ್ ೧೩ಕ್ಕೆ ಆಯೋಜಿಸಲಾಗಿದ್ದು, ಭರದ ಸಿದ್ದತೆಗಳು ನಡೆಯುತ್ತಿವೆ.

ಡುಂಡಿರಾಜ್ – ಗೌರವಆತಿಥ್ಯ

ದಿನಪೂರ್ತಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ, ದೇಶದುದ್ದಕ್ಕೂ ನೆಲೆಸಿರುವ ಸದಸ್ಯರ ಸಮಾಗಮದಜೊತೆ, ಸಹಸಮಾಜದ ಪ್ರಮುಖರು ಭಾಗವಹಿಸಲಿದ್ದು, ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ, ವಸ್ತುಪ್ರದರ್ಶನ, ಆರೋಗ್ಯ ತಪಾಸಣೆ ಶಿಬಿರ, ಅದೃಷ್ಟ ಚೀಟಿ, ಬಹುಮಾನ….ಇತ್ತ್ಯಾದಿ ಏರ್ಪಡಿಸಲಾಗಿದೆ. ಕನ್ನಡದ ಅತ್ಯಂತ ಜನಪ್ರಿಯ ಹಾಸ್ಯಪ್ರಹಸನಕಾರ, ಕವಿ, ನಾಟಕಕಾರ – ಶ್ರೀ ಡುಂಡಿರಾಜ್ಗೌರವ ಅತಿಥಿಯಾಗಿ ಭಾಗವಹಿಸಲಿದ್ದು, ವಿಶೇಷ ಕಾರ್ಯಕ್ರಮ-  ಯಕ್ಷಗಾನ -: ದಕ್ಷಾಧ್ವರ” – ದಲ್ಲಿ ಸ್ಥಳೀಯ ಕಲಾವಿದರ ಜೊತೆ ಯಕ್ಷಗಾನದ ಉದಯೋನ್ಮುಖ ಭಾಗವತ ಶ್ರೀ. ಚಿನ್ಮಯ ಭಟ್ಕಲ್ಲಡ್ಕ, ಪ್ರತಿಭಾವಂತ ಕಲಾವಿದೆ ವಿದ್ಯಾ ಕೊಳ್ಳೂರು, ಸರ್ವಸಾಚಿ ಪಾತ್ರದಾರಿ ದೀಪಕ್ಪೇಜಾವರ ಭಾಗವಹಿಸಲಿದ್ದಾರೆ.

ವಿಪ್ರಸ್ಪಂದನ

ಈಇಪ್ಪತ್ತುವರ್ಷದಸವಿನೆನಪುಗಳನ್ನುಜೀವನದುದ್ದಕ್ಕೂಅಭಿಮಾನದಿಂದಕಾದಿರಿಸಿಕೊಳ್ಳುವಸಲುವಾಗಿವಿಂಶತಿವೈಭವದಸ್ಮರಣಸಂಚಿಕೆಯನ್ನು- ವಿಪ್ರಸ್ಪಂದನ – ವಾಗಿಹೊರತರಲುಉದ್ದೇಶಿಸಿದ್ದೇವೆ.ಸಾಹಿತ್ಯಾಸಕ್ತಸದಸ್ಯರಮತ್ತುನಮ್ಮಸದಸ್ಯರೊಂದಿಗೆಸಂಪರ್ಕದಲ್ಲಿರುವಆಹ್ವಾನಿತರಸಾಹಿತ್ಯಪ್ರತಿಭೆಗೂಅವಕಾಶಮಾಡಿಕೊಟ್ಟುಸಂಚಿಕೆಯನ್ನುಸಂಗ್ರಹಯೋಗ್ಯವನ್ನಾಗಿಹೊರತರಲುನಿಶ್ಚಯಿಸಿದ್ದೇವೆ.

ವಿಪ್ರಸಂಚಯ

20ನೇವರ್ಷದ ವಿಶೇಷ ಸಂದರ್ಭದಲ್ಲಿ ಇಲ್ಲಿ ನೆಲಸಿರುವ ಸಮಗ್ರ ಬ್ರಾಹ್ಮಣರ ಕೈಪಿಡಿಯನ್ನು ವಿಪ್ರಸಂಚಯ “ವಾಗಿಹೊರತರುವವಿಶೇಷಯೋಜನೆಯನ್ನುಹಾಕಿಕೊಂಡಿದೆ.ಇದರಲ್ಲಿಕೇವಲಹೆಸರುನೋಂದಾವಣೆಮಾತ್ರವಲ್ಲ, ಬದಲಾಗಿ, ವ್ಯವಹಾರ, ಉದ್ಯೋಗ, ಆಸಕ್ತಿ, ಸಾಧನೆ ..ಹೀಗೆಎಲ್ಲವಿವರಗಳನ್ನುಹಂಚಿಕೊಳ್ಳುವಉದ್ದೇಶವಿದೆ.                                                       ಸರ್ವೇಜನಃಸುಖಿನೋಭವಂತು


Spread the love

Exit mobile version