ವಿಕಸಿತ ಭಾರತಕ್ಕೆ ಮುನ್ನುಡಿ, ಸಮೃದ್ಧ ಭಾರತಕ್ಕೆ ಅಡಿಪಾಯ ಹಾಕಿದ ಬಜೆಟ್ – ಶ್ರೀನಿಧಿ ಹೆಗ್ಡೆ
ಉಡುಪಿ: ಆದಾಯ ತೆರಿಗೆ ವ್ಯಾಪ್ತಿಯನ್ನು ₹ 12 ಲಕ್ಷ ರೂ. ವರೆಗೆ ವಿಸ್ತರಿಸುವ ಮೂಲಕ ಬಡ, ಮದ್ಯಮ ವರ್ಗದ ಜನರ ಆರ್ಥಿಕ ಶಕ್ತಿಗೆ ಕೇಂದ್ರ ಬಜೆಟ್ ಹೊಸ ಚೈತನ್ಯ ನೀಡಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದಾಯ ತೆರಿಗೆ ಮಿತಿಯನ್ನು 12 ಲಕ್ಷ ರೂ.ವರೆಗೆ ವಿಸ್ತರಿಸಿದ್ದರಿಂದ ಮಧ್ಯಮ ವರ್ಗದ ಜನರಿಗೆ ಅನುಕೂಲ ಒದಗಿಸಿರುವ ಜೊತೆಗೆ ಉಳಿತಾಯಕ್ಕೂ ಅವಕಾಶ ಮಾಡಿಕೊಟ್ಟಿದೆ. ಬಜೆಟ್ ನಲ್ಲಿ ತೆರಿಗೆ, ಇಂಧನ ವಲಯ, ನಗರಾಭಿವೃದ್ಧಿ, ಗಣಿಗಾರಿಕೆ, ಹಣಕಾಸು ವಲಯ ನಿಯಂತ್ರಕ ಸುಧಾರಣೆಗಳ ಕ್ರಮಗಳು ನಿಜಕ್ಕೂ ಶ್ಲಾಘನೀಯ.
ಕೃಷಿ, ಶಿಕ್ಷಣ, ಸಂಶೋಧನೆ, ಕೌಶಲ್ಯ ಅಭಿವೃದ್ದಿಗೆ ಆದ್ಯತೆ ನೀಡುವ ಮೂಲಕ ಸರ್ಕಾರ ಯುವ ಜನತೆಯ ಆರ್ಥಿಕ ಬಲ ವರ್ಧನೆಗೆ ಮುಂದಾಗಿದೆ. ಕ್ಯಾನ್ಸರ್ ಚಿಕಿತ್ಸಾ ವೆಚ್ಚ ಕಡಿತ, ಎಐ ಕ್ಷೇತ್ರಕ್ಕೆ ಕೊಡುಗೆ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ದೇಶದ ಪ್ರಭಾವ ಹೆಚ್ಚಿಸುವಲ್ಲಿ ಮುಂದಡಿ ಇಟ್ಟಿದೆ.
ರೈತರ ಕಿಸಾನ್ ಕಾರ್ಡ್ ಸಾಲದ ಮಿತಿ 3 ರಿಂದ 5 ಲಕ್ಷಕ್ಕೆ ಏರಿಕೆ, ಗಿಗ್ ಕೆಲಸಗಾರರಿಗೆ – ನಗರ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ ಆರೋಗ್ಯ ವಿಮೆ ಭಾಗ್ಯ, ಇದರಿಂದ 1 ಕೋಟಿ ಜನರಿಗೆ ಲಾಭ, 50 ಪ್ರವಾಸಿ ತಾಣಗಳ ವಿಶ್ವದರ್ಜೆಯ ಅಭಿವೃದ್ಧಿ, 120 ಹೊಸ ಊರುಗಳಿಗೆ ವಿಮಾನ ಯಾನ ಸೌಲಭ್ಯ, ಯುವ ಕ್ರೀಡಾಪಟುಗಳಿಗೆ, ಸಣ್ಣ ಕೈಗಾರಿಕೆ ಬೆಂಬಲ, ಮುಂದಿನ 3 ವರ್ಷಗಳಲ್ಲಿ ಎಲ್ಲ ಜಿಲ್ಲಾಸ್ಪತ್ರೆಯಲ್ಲಿ ಕ್ಯಾನ್ಸರ್ ಘಟಕ ಸ್ಥಾಪನೆ, ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಭಾರತ್ ನೆಟ್ ನಡಿ ಅಂತರ್ಜಾಲ ಸೇವೆ ವಿಸ್ತರಣೆ, ಬೀದಿ ಬದಿ ವ್ಯಾಪಾರ ನಡೆಸಿ ಬದುಕು ನಡೆಸುವ ವ್ಯಾಪಾರಿಗಳಿಗೆ 30,000 ಸಾವಿರ ಕ್ರೆಡಿಟ್ ಸಾಲದ ಘೋಷಣೆ ಮಾಡುವ ಮೂಲಕ ಸರ್ವ ವ್ಯಾಪಿ, ಸಮೃದ್ಧ ಭಾರತಕ್ಕೆ ಭದ್ರ ಬುನಾದಿಯನ್ನು ಹಾಕಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.