Home Mangalorean News Kannada News ವಿಜಯದಶಮಿ ಸಂಗೀತೋತ್ಸವದಲ್ಲಿ ಸತತ 13 ಗಂಟೆಗಳ ಸಂಗೀತ ಕಾರ್ಯಕ್ರಮ

ವಿಜಯದಶಮಿ ಸಂಗೀತೋತ್ಸವದಲ್ಲಿ ಸತತ 13 ಗಂಟೆಗಳ ಸಂಗೀತ ಕಾರ್ಯಕ್ರಮ

Spread the love

ವಿಜಯದಶಮಿ ಸಂಗೀತೋತ್ಸವದಲ್ಲಿ ಸತತ 13 ಗಂಟೆಗಳ ಸಂಗೀತ ಕಾರ್ಯಕ್ರಮ

ವಿಜಯದಶಮಿಯ ಸಂದರ್ಭದಲ್ಲಿ ಪರ್ಕಳದ ಸರಿಗಮ ಭಾರತಿ ಸಂಸ್ಥೆಯ ವತಿಯಿಂದ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿತ್ತು.

ವಿಧಾನಪರಿಷತ್  ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಂಪರೆಯ ಆಳಕ್ಕೆ ಇಳಿದು ಅದರ ಸತ್ವಗಳನ್ನು ಅರಿತು ಜೀವನದಲ್ಲಿ ಅಳವಡಿಸಕೊಂಡರೆ ನಮ್ಮ ಬದುಕು ಸಾರ್ಥಕವಾಗುತ್ತೆ. ಮುಂದಿನ ಜನಾಂಗಕ್ಕೆ ನಮ್ಮ ಪರಂಪರೆಯನ್ನು ವರ್ಗಾಯಿಸುವ ಕೆಲಸ ಸಂಗೀತ ಶಿಕ್ಷಣದ ಮೂಲಕ ಸಾಧ್ಯ. ಸರಿಗಮ ಭಾರತಿ ಸಂಸ್ಥೆ ಈ ಪುಣ್ಯಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.

ಹಿರಿಯರಾದ ನಾಡೋಜ ಕೆ.ಪಿ.ರಾವ್, ಉದ್ಯಮಿ ಮಂಜುನಾಥ ಉಪಾಧ್ಯ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಪ್ರಾಧ್ಯಾಪಕ ಪ್ರೊ.ಬಾಲಕೃಷ್ಣ ಮುದ್ದೋಡಿ ಅತಿಥಿಗಳಾಗಿ ಭಾಗವಹಿಸಿದ್ದರು.

ಹಿರಿಯ ಸಂಗೀತ ಕಲಾವಿದ ಕೆ.ಆರ್.ರಾಘವೇಂದ್ರ ಆಚಾರ್ಯ ಅವರನ್ನು ಸನ್ಮಾನಿಸಲಾಯ್ತು. ಸರಿಗಮ ಭಾರತಿ ಸಂಗೀತ ವಿದ್ಯಾಲಯದ ಉಮಾಶಂಕರಿ ಮತ್ತು ಡಾ.ಉದಯಶಂಕರ್ ಉಪಸ್ಥಿತರಿದ್ದರು.

ಸತತ 13 ಗಂಟೆಗಳ ಕಾಲ ನಡೆದ ಸಂಗೀತೋತ್ಸವದಲ್ಲಿ ಪುಟಾಣಿಗಳಿಂದ ಪಿಳ್ಳಾರಿ ಗೀತೆಗಳು, ತ್ಯಾಗರಾಜರ ಪಂಚರತ್ನಗೋಷ್ಟಿ ಗಾಯನ, ಶ್ರೀ ದೇವಿಯ ನವಾವರಣ ಕೃತಿಗಳ ಗಾಯನ ನಡೆಯಿತು. ಹಿರಿಯ ಕಲಾವಿದರಾದ ಮೈಸೂರಿನ ಎನ್.ಆರ್.ಪ್ರಶಾಂತ್ ಅವರ ಸಂಗೀತ ಕಚೇರಿ, ರಂಜಿತಾ ಅವಿನಾಶ್ ಅವರ ಭರತನಾಟ್ಯ ಸೇರಿದಂತೆ 14 ಮಂದಿ ಯುವ ಪ್ರತಿಭಾನ್ವಿತ ಕಲಾವಿದರಿಂದ ವಿವಿಧ ಪ್ರಕಾರದ ಸಂಗೀತ ಕಾರ್ಯಕ್ರಮಗಳು ನಡೆದವು.


Spread the love

Exit mobile version