ವಿಜಯಾ ಬ್ಯಾಂಕ್ ವಿಲೀನವನ್ನು ವಿರೋಧಿಸಿ ಪ್ರತಿಭಟನೆಗೆ ಉಡುಪಿ ಜಿಲ್ಲಾ ಜೆಡಿಎಸ್ ಬೆಂಬಲ

Spread the love

ವಿಜಯಾ ಬ್ಯಾಂಕ್ ವಿಲೀನವನ್ನು ವಿರೋಧಿಸಿ ಪ್ರತಿಭಟನೆಗೆ ಉಡುಪಿ ಜಿಲ್ಲಾ ಜೆಡಿಎಸ್ ಬೆಂಬಲ

ಉಡುಪಿ: ಫೆಬ್ರವರಿ 2ರಂದು ಮುಲ್ಕಿಯಲ್ಲಿ ಕಾರ್ನಾಡಿನ ಗಾಂಧಿ ಮೈದಾನದಲ್ಲಿ ವಿಜಯಾ ಬ್ಯಾಂಕ್ ವಿಲೀನವನ್ನು ವಿರೋಧಿಸಿ ನಡೆಯಲಿರುವ ಪ್ರತಿಭಟನೆಗೆ ಉಡುಪಿ ಜಿಲ್ಲಾ ಜನತಾದಳವು ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಉಡುಪಿ ಜಿಲ್ಲಾ ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಯೋಗೀಶ್.ವಿ.ಶೆಟ್ಟಿಯವರು ತಿಳಿಸಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರವು ವಿಜಯಾ ಬ್ಯಾಂಕನ್ನು ಮತ್ತು ದೇನಾ ಬ್ಯಾಂಕನ್ನು ವಿಲೀನಗೊಳಿಸಿ ಬಳಿಕ ಅದೇ ದಿನ ಗಜೆಟ್ ನೊಟಿಫಿಕೇಶನ್ ಹೊರಡಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಅವೈಜ್ಞಾನಿಕವಾಗಿರುತ್ತದೆ.

ಅವಿಭಜಿತ ದ.ಕ , ಉಡುಪಿ ಜಿಲ್ಲೆ ಬ್ಯಾಂಕ್ ಗಳ ತೊಟ್ಟಿಲು. ವಿಜಯಾ ಬ್ಯಾಂಕ್ ನಂತೆ ಅನೇಕ ಬ್ಯಾಂಕ್ ಗಳು ಇಲ್ಲಿ ಹುಟ್ಟಿ ಬೆಳೆದಿರುತ್ತದೆ. ವಿಜಯಾ ಬ್ಯಾಂಕ್ ಸ್ಥಳೀಯ ರೈತರಿಗೆ , ಮಧ್ಯಮ ವರ್ಗದವರಿಗೆ, ಬಡವರಿಗೆ ಸಹಕಾರಿಯಾಗಿ ಬೆಳೆದಿರುತ್ತದೆ. ದೇಶದ ಕೆಲವೇ ಲಾಭದಾಯಕ ಬ್ಯಾಂಕ್ ಗಳಲ್ಲಿ ಒಂದಾದ ವಿಜಯಾ ಬ್ಯಾಂಕನ್ನು ಗುಜರಾತಿನ ನಷ್ಟದಲ್ಲಿರುವ ಬರೋಡಾ ಬ್ಯಾಂಕ್ ನೊಂದಿಗೆ ವಿಲೀನಕ್ಕೆ ಆದೇಶ ಮಾಡಿರುವಂತದು ದುರದೃಷ್ಟಕರ. ಈ ಆದೇಶವನ್ನು ಕೂಡಲೇ ಹಿಂಪಡೆದು ವಿಜಯ ಬ್ಯಾಂಕ್ ನ ಹೆಸರನ್ನು ಉಳಿಸುವ ಹಾಗೆ ಆಗಬೇಕೆಂದು ಅವರು ಆಗ್ರಹಿಸಿದ್ದಾರೆ.


Spread the love