ವಿಜಯಾ ಬ್ಯಾಂಕ್ ವಿಲೀನ ಕುರಿತು ಸುಳ್ಳು ಮಾಹಿತಿ ನೀಡಿದ ಸಂಸದ ನಳಿನ್ ಕ್ಷಮೆಗೆ ವೀರಪ್ಪ ಮೊಯ್ಲಿ ಒತ್ತಾಯ

Spread the love

ವಿಜಯಾ ಬ್ಯಾಂಕ್ ವಿಲೀನ ಕುರಿತು ಸುಳ್ಳು ಮಾಹಿತಿ ನೀಡಿದ ಸಂಸದ ನಳಿನ್ ಕ್ಷಮೆಗೆ ವೀರಪ್ಪ ಮೊಯ್ಲಿ ಒತ್ತಾಯ

ಮಂಗಳೂರು: ವಿಜಯಾ ಬ್ಯಾಂಕ್ ವಿಲೀನ ಕುರಿತಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಸತ್ಯದ ವಿಚಾರವನ್ನು ತಿಳಿದುಕೊಳ್ಳದೇ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಅವರ ಪಾರ್ಲಿಮೆಂಟ್ ಸದಸ್ಯತ್ವಕ್ಕೆ ಸೂಕ್ತವಲ್ಲ. ಕೂಡಲೇ ಸಂಸದ ಕಟೀಲ್ ಕ್ಷಮೆಯಾಚಿಸಬೇಕು ಎಂದು ಸಂಸದೀಯ ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಡಾ. ಎಂ.ವೀರಪ್ಪ ಮೊಯ್ಲಿ ಒತ್ತಾಯಿಸಿದ್ದಾರೆ.

ಈ ಕುರಿತು ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರ ಬರೆದಿರುವ ಮೋಯ್ಲಿ ಅವರು , ತಾನು ವಿಜಯಾ ಬ್ಯಾಂಕ್ನ್ನು ಉಳಿದ ಬ್ಯಾಂಕ್ಗಳೊಂದಿಗೆ ವಿಲೀನಗೊಳಿಸಲು ಪಾರ್ಲಿಮೆಂಟ್ನ ಹಣಕಾಸು ಸ್ಥಾಯಿ ಸಮಿತಿ ಮೂಲಕ ಶಿಫಾರಸು ಮಾಡಿಲ್ಲ. ತಾನು ಅಧ್ಯಕ್ಷನಾಗಿರುವ ಹಣಕಾಸಿನ ಸಮಿತಿಯು ವಿಜಯಾ ಬ್ಯಾಂಕ್ನ್ನು ಯಾವುದೇ ಬ್ಯಾಂಕ್ನೊಂದಿಗೆ ಒಗ್ಗೂಡಿಸುವಂತೆ ಶಿಫಾರಸು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇವಲ ಅಪಪ್ರಚಾರ ಮಾಡುವ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹೆಸರಿನ ಮುಂದೆ ‘ಕಟೀಲ್’ ಎಂಬ ಶಬ್ದವಿದೆ. ಇದು ಪವಿತ್ರ ಸ್ಥಳವಾಗಿದೆ. ಈ ಮೂಲಕ ನೀವೇ ಕಳಂಕ ತರುತ್ತಿದ್ದೀರಿ. ನಳಿನ್ ಕುಮಾರ್ ಓರ್ವ ಸಂಸದರಾಗಿ ಯಾವ ವರದಿಯನ್ನೂ ಓದದೇ ಅನಕ್ಷರಸ್ಥರಂತೆ ಅಪಪ್ರಚಾರಕ್ಕೆ ಇಳಿಯುವುದು ಸೂಕ್ತವಲ್ಲ ಎಂದು ಡಾ.ಎಂ.ವೀರಪ್ಪ ಮೊಯ್ಲಿ ಖಂಡಿಸಿದ್ದಾರೆ.

ವಿಜಯಾ ಬ್ಯಾಂಕ್ ವಿಲೀನಗೊಳಿಸುವ ಬಗ್ಗೆ ನನಗೆ ನೋವಿದೆ. ‘ವಿಜಯಾ’ ಎಂಬ ಹೆಸರು ಉಳಿಸಲು ತಾನು ಪ್ರಯತ್ನ ಮಾಡುತ್ತಿದ್ದೇನೆ. ಇದು ಯುಪಿಎ ಸರಕಾರದ ಕೂಸು. ಹಾಲಿ ಸರಕಾರ ಅದನ್ನು ಅನುಷ್ಠಾನಗೊಳಿಸುತ್ತದೆ. ವಿಲೀನಗೊಳಿಸುವ ಮುನ್ನ ಹಣಕಾಸು ಸಮಿತಿಯ ಮುಂದೆ ಪ್ರಸ್ತಾವವನ್ನು ಕಳುಹಿಸಲಾಗುತ್ತದೆ. ಕಾಂಗ್ರೆಸ್ಸಿಗರೇ ಆದ ಸಂಸದ ಎಂ. ವೀರಪ್ಪ ಮೊಯ್ಲಿ ಈ ಸಮಿತಿಯ ಅಧ್ಯಕ್ಷರು. ಸಮಿತಿಯಲ್ಲಿದ್ದ ಇತರ ಇಬ್ಬರು ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ಕೂಡ ಮೊಯ್ಲಿ ಅದನ್ನು ವಿರೋಧಿಸಲಿಲ್ಲ. ಅದನ್ನು ಮರೆಮಾಚಿ ತನ್ನ ವಿರುದ್ಧ ಕೂಗಾಡುವ ಕಾಂಗ್ರೆಸ್ಸಿಗರು ಮೊದಲು ವೀರಪ್ಪ ಮೊಯ್ಲಿಯ ಮೌನದ ಬಗ್ಗೆ ಏನೆನ್ನುವರು ಎಂದು ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದರು.


Spread the love