ವಿಜಯ ಕರ್ನಾಟಕ ಮುದ್ದು ಕಂದ ಹಾಗೂ ಮುದ್ದು ಕೃಷ್ಣ ಸ್ಪರ್ಧೆಯ ಬಹುಮಾನ ವಿತರಣೆ
ಮಂಗಳೂರು: ವಿಜಯ ಕರ್ನಾಟಕ ಪತ್ರಿಕೆ ಇಂತಹ ಮಕ್ಕಳ ಸ್ಪರ್ಧೆಯನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಪೋಷಕರಿಗೆ ಅವರ ಅಭಿರುಚಿಯನ್ನು ಗುರುತಿಸಲು ನೆರವಾಗುವ ಜತೆಗೆ ಆರೋಗ್ಯವಂತ ಹಾಗೂ ಸಮಾಜಕ್ಕೆ ಸ್ಫೂರ್ತಿದಾಯಕ ನಾಗರಿಕರನ್ನು ನೀಡಲು ಸಹಕಾರಿಯಾಗುತ್ತದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್ ಹೇಳಿದರು.
ಅವರು ಬುಧವಾರ ನಗರದ ಎಸ್ಸಿಡಿಸಿಸಿ ಬ್ಯಾಂಕ್ನ ಸಭಾಂಗಣದಲ್ಲಿ ನಡೆದ ವಿಜಯ ಕರ್ನಾಟಕ ಮುದ್ದು ಕಂದ ಹಾಗೂ ಮುದ್ದು ಕೃಷ್ಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿ, ತಮ್ಮ ಮಕ್ಕಳು ಎಂದಿಗೂ ಆಕರ್ಷಣೀಯವಾಗಿ ಕಾಣಬೇಕು ಎಂದು ಪೆÇೀಷಕರು ಅಂದುಕೊಳ್ಳುತ್ತಾರೆ. ಇದೇ ಕಾರಣದಿಂದ ತಮ್ಮ ಮಕ್ಕಳ ಭಾವಚಿತ್ರಗಳನ್ನು ಇಂತಹ ಸ್ಫರ್ಧೆಗಳಿಗೆ ಸಂಭ್ರಮ ಪಡುತ್ತಾರೆ. ವಿಜಯ ಕರ್ನಾಟಕ ಪತ್ರಿಕೆ ಈ ಹಿಂದೆ ಮಾದಕ ವ್ಯಸನ ಕುರಿತು ಮಾಡಿದ ಅಭಿಯಾನದಿಂದ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಪತ್ರಿಕೆಗಳು ಎಂದಾಗ ಬರೀ ರಾಜಕೀಯ, ಅಪರಾಧ ಸುದ್ದಿಗಳನ್ನು ವೈಭವೀಕರಿಸಿಕೊಂಡು ಓದುಗರನ್ನು ಸೆಳೆಯುವ ಕೆಲಸ ಮಾಡುತ್ತದೆ ಎನ್ನುವ ವಿಚಾರವೇ ಪ್ರಧಾನವಾಗಿ ಬಿಡುತ್ತಿತ್ತು. ಆದರೆ ಪತ್ರಿಕೆಯೊಂದು ಇಂತಹ ಅಭಿಯಾನ, ಸ್ವರ್ಧೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ತಮಗೂ ಒಂದು ಜವಾಬ್ದಾರಿಯಿದೆ ಸಮಾಜದ ಕುರಿತು ವಿಶೇಷವಾದ ಕಾಳಜಿಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ ಎನ್ನುವುದು ಅಭಿನಂದನೀಯ ಎಂದರು.
ಮತ್ತೊಬ್ಬ ಮುಖ್ಯ ಅತಿಥಿ ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ತಾಯಿಯಾದವರು ಪ್ರತಿಯೊಂದು ಮಗುವಿನಲ್ಲೂ ಕೃಷ್ಣನನ್ನು ಕಾಣ ಬಯಸುತ್ತಾರೆ. ಕೃಷ್ಣನಂತೆ ತನ್ನ ಮಗು ಕೂಡ ಇರಬೇಕು ಎಂದು ಕನಸ್ಸು ಕಾಣುತ್ತಾಳೆ ಇದಕ್ಕೆ ಇಂಬುಕೊಡುವಂತೆ ವಿಜಯ ಕರ್ನಾಟಕ ಪತ್ರಿಕೆ ಮುದ್ದು ಕೃಷ್ಣ ಹಾಗೂ ಮುದ್ದು ಕಂದ ಸ್ವರ್ಧೆಗಳನ್ನು ನಡೆಸುವ ಮೂಲಕ ಪೋಷಕರ ಆಸಕ್ತಿ, ಅಭಿರುಚಿಗೆ ವರವಾಗಿ ಕಾಣುತ್ತದೆ. ಮಗುವಿನ ಚಿತ್ರಗಳನ್ನು ನೈಜವಾಗಿ ಸೆರೆ ಹಿಡಿಯುವ ಮೂಲಕ ಛಾಯಾಗ್ರಾಹಕ ಕೂಡ ತಮ್ಮ ಛಾಪು ಒತ್ತಿ ಬಿಡುತ್ತಾನೆ. ಪತ್ರಿಕೆಯೊಂದು ಇಂತಹ ಕಾರ್ಯಕ್ರಮ ಮಾಡುವುದು ಒಳ್ಳೆಯ ಕೆಲಸ ಎಂದರು.
ದ.ಕ.ಜಿ.ಪಂ. ಸಿಇಒ ಡಾ.ಸೆಲ್ವಮಣಿ ಆರ್ ಮಾತನಾಡಿ, ಈ ಸ್ವರ್ಧೆಯಲ್ಲಿ ವಿಜೇತರಾಗುವ ಮಕ್ಕಳಿಗೆ ಅಭಿನಂದನೆ ಸಲ್ಲಿಸುವ ಜತೆಗೆ ಸೋತ ಮಕ್ಕಳಿಗೂ ಅಭಿನಂದನೆ ಸಲ್ಲಿಸಲೇ ಬೇಕು. ಮುಖ್ಯವಾಗಿ ಇಂತಹ ಸ್ವರ್ಧೆಯಲ್ಲಿ ಮಕ್ಕಳು ಭಾಗವಹಿಸುವುದು ಬಹಳ ಮುಖ್ಯ. ಸ್ವರ್ಧೆಗೆ ಬಂದ ಎಲ್ಲ ಮಕ್ಕಳನ್ನು ನೋಡಿದಾಗ ಎಲ್ಲವೂ ಚೆನ್ನಾಗಿದೆ ಅದರಲ್ಲಿ ಆಯ್ಕೆ ಮಾಡುವುದು ಕೂಡ ಕಠಿಣವಾದ ಕೆಲಸ ಅನ್ನಿಸಿಬಿಡುತ್ತದೆ. ಈ ಮಕ್ಕಳು ಬೆಳೆದು ದೊಡ್ಡವರಾದಾಗ ಅವರ ತೆಗೆದ ಚಿತ್ರಗಳು ಮನೆಯ ಮೂಲೆಯಲ್ಲಿ ಸಿಕ್ಕಾಗ ಅವರಿಗೆ ಸಿಗುವ ಖುಷಿ ವರ್ಣಿಸಲು ಅಸಾಧ್ಯ ಎಂದರು.
ಐಡಿಯಲ್ ಐಸ್ಕ್ರೀಮ್ನ ಆಡಳಿತ ಪಾಲುದಾರ ಮುಕುಂದ್ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕಳೆದ 16 ವರ್ಷಗಳಿಂದ ಮುದ್ದುಕಂದ ಹಾಗೂ 7 ವರ್ಷಗಳಿಂದ ಮುದ್ದು ಕೃಷ್ಣ ಸ್ವರ್ಧೆಗೆ ಸಂಸ್ಥೆ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ. ಸ್ವರ್ಧೆಗೆ ಭಾಗವಹಿಸುವ ಮಕ್ಕಳ ಎಟೆನ್ಶನ್(ಮುತುವರ್ಜಿ)ಜಾಸ್ತಿ ಇದ್ದರೆ ಇದರ ಜತೆಗೆ ಹೆತ್ತವರಿಗೆ ಇದರ ಟೆನ್ಶನ್ ಜಾಸ್ತಿಯಿದೆ. ಆದರೆ ನಿಜವಾಗಿಯೂ ಮಕ್ಕಳ ತಾಯಿಯಂದಿರಿಗೆ ಇರುವ ತಾಳ್ಮೆಗೆ ಅಭಿನಂದನೆ ಸಲ್ಲಿಸಬೇಕು ಎಂದರು. ತೀರ್ಪುಗಾರರ ಪರವಾಗಿ ಭರತನಾಟ್ಯ ಕಲಾವಿದರಾದ ಡಾ.ಶೋಭಿತಾ ಸತೀಶ್ ಅವರು ಆಯ್ಕೆ ಕುರಿತು ಮಾತನಾಡಿದರು.
ಈ ಸಂದರ್ಭ ಮುದ್ದು ಕೃಷ್ಣ ಸ್ವರ್ಧೆಯಲ್ಲಿ ವಿಜೇತರಾದ ಮಣಿಪಾಲ ಅನಂತನಗರದ ಮೈರಾ ಶೆಟ್ಟಿ(ಪ್ರ), ಸಿದ್ಧಾಪುರ ಕನ್ಸೂರಿನ ಅನ್ವಿಕಾ ವಿನಾಯಕ ಭಟ್(ದ್ವಿ), ಕಾಸರಗೋಡು ಕುಂಬ್ರಾಜೆಯ ಸಾನ್ವಿಕ ಕೆ. ಭಟ್ ಹಾಗೂ ಮೆಚ್ಚುಗೆ ಪಡೆದ 6 ಮಕ್ಕಳಿಗೆ ಬಹುಮಾನವನ್ನು ಗಣ್ಯರು ನೀಡಿದರು. ಈ ಬಳಿಕ ಮುದ್ದು ಕಂದ 2018 ಸ್ವರ್ಧೆಯಲ್ಲಿ ವಿಜೇತರಾದ ಉಡುಪಿ ತೆಂಕನಿಡಿಯೂರು ಹಿಮಾನಿ ಎಚ್.ಆಚಾರ್ಯ( ಪ್ರ), ಮಂಗಳೂರು ಮಾಡೂರಿನ ಅದ್ವಿಕಾ ಎಸ್ ಶೆಟ್ಟಿ (ದ್ವಿ), ಮಂಗಳೂರು ಲ್ಯಾಂಡ್ಲಿಂಕ್ಸ್ನ ಅನುಜ್ ಕಾಮತ್(ತೃ) ಹಾಗೂ ಮೆಚ್ಚುಗೆ ಪಡೆದ 6 ಮಕ್ಕಳಿಗೆ ಬಹುಮಾನವನ್ನು ಗಣ್ಯರು ನೀಡಿದರು. ಮುದ್ದು ಕಂದ ಸ್ವರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಮಗುವಿನ ಫೆÇೀಟೋ ತೆಗೆದ ಛಾಯಾಗ್ರಾಹಕ ಹರೀಶ್ ಆಚಾರ್ಯ ಅವರಿಗೆ ಬಹುಮಾನ ನೀಡಲಾಯಿತು.
ಸ್ವರ್ಧಾ ವಿಜೇತರ ಪಟ್ಟಿಯನ್ನು ವಿಕದ ಮುಖ್ಯ ವರದಿಗಾರ ಮಹಮ್ಮದ್ ಅರೀಫ್ ಓದಿದರು.
ವಿಕ ಮಂಗಳೂರು ಸ್ಥಾನೀಯ ಸಂಪಾದಕ ಯು.ಕೆ.ಕುಮಾರ್ನಾಥ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ರೆಸ್ಪಾನ್ಸ್ ವಿಭಾಗದ ಸಹಾಯಕ ಮಹಾ ಪ್ರಬಂಧಕ ರಾಮಕೃಷ್ಣ ಡಿ, ಆರ್ಎಂಡಿ ವಿಭಾಗದ ಡೆಪ್ಯುಟಿ ಚೀಪ್ ಮ್ಯಾನೇಜರ್ ನಾರಾಯಣ, ಮಂಗಳೂರು ಎಸ್ಸಿಡಿಸಿಸಿ ಬ್ಯಾಂಕ್ನ ಸಿಇಒ(ಪ್ರಭಾರ) ರವೀಂದ್ರ ಬಿ, ಛಾಯಾಗ್ರಾಹಕ ಕರುಣಾಕರ ಕಾನಂಗಿ, ಶ್ರೀದೇವಿ ನೃತ್ಯ ಕೇಂದ್ರದ ನಿರ್ದೇಶಕರಾದ ಡಾ.ಆರತಿ ಶೆಟ್ಟಿ, ಛಾಯಾಗ್ರಾಹಕರ ಪ್ರಕಾಶ್ ಉಪಸ್ಥಿತರಿದ್ದರು. ವಿಕದ ಮುಖ್ಯ ಉಪಸಂಪಾದಕ ಬಿ.ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿಕದ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ವಂದಿಸಿದರು.