ವಿಟ್ಲ: ಅಂತರ್ ರಾಜ್ಯ ದರೋಡೆ, ಭೂಗತ ದೊರೆಗಳ ಸಹಚರರ ಬಂಧನ

Spread the love

ವಿಟ್ಲ : ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೋಲಿಸರು ಮೂರು ಮಂದಿ ಅಂತರಾಜ್ಯ ದರೋಡೆಕೋರರನ್ನು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾರಡ್ಕ ಚೆಕ್ ಪೋಸ್ಟ್ ಬಳಿ ಮಾರ್ಚ್ 17 ರಂದು ಬಂಧಿಸಿದ್ದಾರೆ.
ಬಂಧಿತರನ್ನು ಬೆಳ್ತಂಗಡಿ ನಿವಾಸಿ ಕೆಂಪಯ್ಯ ಗೌಡ, ಕಾಸರಗೋಡು ಜಿಲ್ಲೆ ಉಪ್ಪಳ ನಿವಾಸಿ ಫಾರೂಕ್ ಹಾಗೂ ಮಂಗಳೂರು ಕಲ್ಲಬೆಟ್ಟು ನಿವಾಸಿ ಸತೀಶ್ ಭಂಡಾರಿ ಎಂದು ಗುರುತಿಸಲಾಗಿದೆ.
ಆರೋಪಿಗಳು ಇನ್ನೋರ್ವ ತಲೆಮರೆಸಿಕೊಂಡ ಆರೋಪಿ ಅಶ್ರಫ್ ಎಂಬಾತನೊಂದಗೆ ಸೇರಿಕೊಂಡು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತೇಶ್ವರ ದೇವಸ್ಥಾನದ ಬಳಿ ಅಡಿಕೆ ಉದ್ಯಮಿಯ ಕ್ವಾಲೀಸ್ ಕಾರುನ್ನು ತಡೆದು ನಿಲ್ಲಿಸಿ, ಮೆಣಸಿನ ಪುಡಿಯನ್ನು ಎರಚಿ, ಮಾರಾಕಾಯುಧಗಳಿಂದ ಬೆದರಿಸಿ ದರೊಡೆಗೆ ವಿಫಲ ಯತ್ನ ನಡೆಸಿರುವುದಾಗಿದೆ.
ಅಲ್ಲದೆ ಸಾಲೆತ್ತೂರು ವೈನ್ ಶಾಫ್ ನ ಬಾಗಿಲಿನ ಬೀಗವನ್ನು ಮುರಿದು ಒಳಗಿದ್ದ ಹಣವನ್ನು ಕಳವು ಮಾಡಿರುವುದಲ್ಲದೇ, ಇತ್ತೀಚೆಗೆ ಕನ್ಯಾನ ವಿಜಯಡ್ಕ ಎಂಬಲ್ಲಿಂದ ಬೈಕೊಂದನ್ನು ಕಳವು ಮಾಡಿರುವುದಾಗಿದೆ.
ಮೂಡಬಿದ್ರೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ವ್ಯಾಪಾರಸ್ಥರೊಬ್ಬರ ಬಾಬ್ತು ವ್ಯಾಪಾರದ ಬಾಬ್ತು ರೂ. ನಾಲ್ಕುವರೆ ಲಕ್ಷ ಹಣವನ್ನು ಬೈಕಿನಲ್ಲಿ ಕೊಂಡು ಹೋಗುತ್ತಿದ್ದ ಸಮಯ ಆರೋಪಿಗಳು ಅವರಿಗೆ ಹತ್ಯಾರಿನಿಂದ ಹಲ್ಲೆಗೈದು ಹಣವನ್ನು ದರೋಡೆಗೈದಿರುವುದಲ್ಲದೇ, ಇನ್ನೋರ್ವ ಕ್ಯಾಂಟೀನ್ ವ್ಯಾಪಾರಿಯೊಬ್ಬರನ್ನು ಮುಂಜಾನೆ ಸಮಯ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಮತ್ತು ಅವರಲ್ಲಿದ್ದ ಹಣವನ್ನು ಸುಲಿಗೆ ಗೈದಿರುವುದಾಗಿದೆ. ಅಲ್ಲದೇ ಮೂಡಬಿದ್ರೆ ಅಮರಶ್ರೀ ಟಾಕೀಸ್ ನ ಬಳಿ ಮತ್ತು ಇನ್ನೋಂದು ಮಸೀದಿ ರಸ್ತೆಯ ಬಳಿ ಪಾರ್ಕ್ ಮಾಡಿದ್ದ ಪಾರ್ಕ್ ಮಾಡಿದ್ದ ಮಾರುತಿ 800 ಕಾರುಗಳೆರಡನ್ನು ಕಳವು ಮಾಡಿರುವುದಾಗಿದೆ. ಮೂಡಬಿದ್ರೆ ಪರಿಸರದಲ್ಲಿ ಬೈಕೊಂದನ್ನು ಕಳವು ಮಾಡಿರುವುದಾಗಿದೆ.
ಇದಲ್ಲದೇ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ನಾಟೆಕಲ್ಲು ಮಸೀದಿ ಬಳಿ ಸಿಗರೇಟು ಲೈನ್ ಸೇಲ್ ನ ವಾಹನವನ್ನು ತಡೆದು ನಿಲ್ಲಿಸಿ, ಅವರಿಗೆ ಮಾರಾಕಾಯಧಗಳಿಂದ ಹಲ್ಲೆ ಮಾಡಿ ಅವರಲ್ಲಿದ್ದ ರೂ. ನಾಲ್ಕುವರೆ ಲಕ್ಷ ಹಣವನ್ನು ದರೋಡೆ ಗೈದಿರುವುದಲ್ಲದೇ, ತೊಕ್ಕೊಟ್ಟುನ ವೈನ್ ಶಾಪ್ ಮಾಲಕರ ಕಾರುನ್ನು ರಾತ್ರಿ ಸಮಯ ತಡೆದು ನಿಲ್ಲಿಸಿ, ಅವರಿಗೂ ಹಲ್ಲೆ ಮಾಡಿ ಅವರಿಂದ ಒಂದುವರೆ ಲಕ್ಷ ಹಣವನ್ನು ದರೋಡೆ ಗೈದಿರುವುದಾಗಿದೆ. ಇದಲ್ಲದೇ ತೊಕ್ಕೊಟ್ಟಿನಲ್ಲಿ ಪಾರ್ಕ್ ಮಾಡಿದ್ದ ಮಾರುತಿ 800 ಕಾರುನ್ನು ಕಳವು ಮಾಡಿರುವುದಾಗಿದೆ.

ಇದಲ್ಲದೇ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರ ದಲ್ಲಿ ಮಾರುತಿ 800 ಕಾರೊಂದನ್ನು ಕಳವು ಮಾಡಿರುವುದಾಗಿದೆ.

ಆರೋಪಿಗಳ ಪೈಕಿ ಕೆಂಪಯ್ಯ ಗೌಡ ಬೆಂಗಳೂರು ಚೆಮ್ಮನ್ನೂರು ಜುವೆಲ್ಲರ್ಸ್, ಹೈದರಬಾದ್ ರಾಜಲಕ್ಷ್ಮೀ ಜುವೆಲ್ಲರ್ಸ್ ಬಣಸವಾಡಿಯಲ್ಲಿ ಎ.ಟಿ.ಎಂ. ದರೋಡೆ ಪ್ರಕರಣದಲ್ಲಿ ಮತ್ತು ಮುಂಬೈಯಲ್ಲಿ 5 ದರೋಡೆ ಪ್ರಕರಣದಲ್ಲಿ ಬಾಗಿಯಾದ ಆರೋಪಿಯಾಗಿದ್ದು, ಸುಮಾರು 8 ವರ್ಷಗಳ ಕಾಲ ಜೈಲಿನಲ್ಲಿದ್ದ ಆರೋಪಿಯಾಗಿರುತ್ತಾನೆ. ಅಲ್ಲದೇ ಮೇಲಿನ ಪ್ರಕರಣದಲ್ಲಿ ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡವನಾಗಿರುತ್ತಾನೆ.

ಸತೀಶ್ ಭಂಡಾರಿಯ ಮೇಲೆ ಮುಂಬೈಯಲ್ಲಿ ದರೋಡೆ, ಕೊಲೆ ಪ್ರಕರಣದ ಆರೋಪಿಯಾಗಿದ್ದುದಲ್ಲದೆ, ಪಣಂಬೂರು ಕೂಳೂರು ನಲ್ಲಿ ಸುಮಾರು 6 ವರ್ಷಗಳ ಹಿಂದೆ ನಡೆದ ಶೂಟೌಟ್ ಪ್ರಕರಣದಲ್ಲೂ ಆರೋಪಿಯಾಗಿರುತ್ತಾನೆ.
ಸತೀಶ್ ಮತ್ತು ಹರೀಶ @ ಕೆಂಪಯ್ಯ @ ರವಿಯು ಭೂಗತ ಪಾತಕಿ ರವಿ ಪೂಜಾರಿಯ ಸಹಚರರಾಗಿರುತ್ತಾರೆ. ಆರೋಪಿ ಉಮ್ಮರ್ ಫಾರೂಕ್ ನು ಕೇರಳದ ಕುಂಬಳೆ ಮತ್ತು ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ದರೋಡೆ ಹಾಗು ಕೊಲೆ ಪ್ರಕರಣದ ಆರೋಪಿಯಾಗಿರುತ್ತಾನೆ.
ಡಾ.ಶರಣಪ್ಪ ಎಸ್.ಡಿ. ಪೊಲೀಸ್ ಅಧೀಕ್ಷಕರು, ದ.ಕ.ಜಿಲ್ಲೆ. ವಿನ್ಸಂಟ್ ಶಾಂತಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಭಾಸ್ಕರ ರೈ, ಡಿ.ವೈ.ಎಸ್.ಪಿ. ಬಂಟ್ವಾಳ ರವರ ಮಾರ್ಗದರ್ಶನದಂತೆ, ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಕೆ.ಯು.ಬೆಳ್ಳಿಯಪ್ಪ ರವರ ನೇತೃತ್ವದಲ್ಲಿ ಪ್ರಕಾಶ್ ದೇವಾಡಿಗ, ಪಿ.ಎಸ್.ಐ. ವಿಟ್ಲ, ಎ.ಎಸ್.ಐ. ಕಿಟ್ಟುಮೂಲ್ಯ, ರುಕ್ಮಯ ಹಾಗು ಸಿಬ್ಬಂದಿಗಳಾದ ಬಾಲಕೃಷ್ಣ, ಪ್ರವೀಣ್ ರೈ, ರಕ್ಷಿತ್ ರೈ, ಭವಿತ್ ರೈ, ಲೋಕೇಶ್, ಪ್ರವೀಣ್ ಕುಮಾರ್ ರಮೇಶ್ ರಾಮಚಂದ್ರ, ಶ್ರೀಧರ. ಜಿನ್ನಪ್ಪ ಬಂಟ್ವಾಳ ವೃತ್ತ ನಿರೀಕ್ಷಕರ ತಂಡದ ಗಿರೀಶ, ಜನಾರ್ಧನ, ನರೇಶ ಇಲಾಖಾ ಚಾಲಕರಾದ ವಿಜಯೇಶ್ವರ, ನಾರಾಯಣ, ಯೋಗೀಶ, ಅಲ್ಲದೇ ಕಂಪ್ಯೂಟರ್ ವಿಭಾಗದ ಪ್ರಶಾಂತ ಎಂ, ಸಂಪತ ಕುಮಾರ್ ಇವರುಗಳು ಈ ಪ್ರಕರಣವನ್ನು ಭೇಧಿಸಲು ಯಶಸ್ವಿಯಾಗಿರುತ್ತಾರೆ.


Spread the love