ವಿಟ್ಲ ಅಪಹರಣ ಪ್ರಕರಣದ ಆರೋಪಿ ರೌಡಿಶೀಟರ್ ಜೋಗಿ ಹನೀಪ್ ಬಂದನ

Spread the love

ವಿಟ್ಲ ಅಪಹರಣ ಪ್ರಕರಣದ ಆರೋಪಿ ರೌಡಿಶೀಟರ್ ಜೋಗಿ ಹನೀಪ್ ಬಂದನ

ಮಂಗಳೂರು: ವಿಟ್ಲ ಗ್ರಾಮದ ಒಕ್ಕೆತ್ತೂರು ಎಂಬಲ್ಲಿಂದ ವ್ಯಕ್ತಿಯೋರ್ವರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೋಲಿಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಬಂಟ್ವಾಳ ಕೇಪು ನಿವಾಸಿ ಹನೀಫ್ ಯಾನೆ ಜೋಗಿ ಹನೀಫ್ (36) ಎಂದು ಗುರುತಿಸಲಾಗಿದೆ.

ಮಾರ್ಚ್ 19 ರಂದು ಮದ್ಯಾಹ್ನ 1-45 ಗಂಟೆಗೆ ವಿಟ್ಲ ಕಸ್ಬಾ ಗ್ರಾಮದ ಒಕ್ಕೆತ್ತೂರು ಎಂಬಲ್ಲಿಂದ ಅಬ್ದುಲ್ ರಜಾಕ್ @ ಮೋನು ಎಂಬವರನ್ನು 3 ಜನರು ಕಾರಿನಲ್ಲಿ ಅಪಹರಣ ಮಾಡಿ ಅಬ್ದುಲ್ ರಜಾಕ್ ರವರಿಗೆ ಆಯುದಗಳಿಂದ ಚುಚ್ಚಿ ಗಾಯಗೊಳಿಸಿ ಆತನಲ್ಲಿದ್ದ 10,000/- ರೂ ಹಣವನ್ನು ಕಸಿದುಕೂಂಡು ಅಲ್ಲದೆ ರೂ 2,00,000/- ಹಣವನ್ನು ನೀಡಿದಲ್ಲಿ ಬಿಡುಗಡೆ ಮಾಡುವುದಾಗಿ ಬೇಡಿಕೆ ಇಟ್ಟ ಬಗ್ಗೆ ಪ್ರಕರಣ ದಾಖಲಾಗಿತು.

ಕೂಡಲೇ ಕಾರ್ಯ ಪ್ರವೃತ್ತ ರಾದ ವಿಟ್ಲ ಪೊಲೀಸರು ಅಪಹರಣಕಾರರು ಕಾರಿನಲ್ಲಿ ಹೋಗುತ್ತಿರುವ ಸ್ಥಳದ ಬಗ್ಗೆ ಮಾಹಿತಿಯನ್ನು ಪಡೆದು ಪತ್ತೆಗೆ ಪ್ರಯತ್ನಿಸುತ್ತಿರುವಾಗ ಮಂಗಳೂರು ದೇರಳಕಟ್ಟೆ ಎಂಬಲ್ಲಿಂದ ಕಾರಿನಲ್ಲಿ ಸಂಚರಿಸುತ್ತಿದ್ದ ಅಪಹರಣ ಕಾರರು ಹಿಂದಿನಿಂದ ಪೊಲೀಸ್ ಜೀಪ್ ಬರುತ್ತಿರುವುದನ್ನು ನೋಡಿ ಕಾರನ್ನು ಮತ್ತು ಅಪಹರಿಸಿದವರನ್ನು ಬಿಟ್ಟು ಓಡಿ ತಪ್ಪಿಸಿಕೊಂಡಿರುತ್ತಾರೆ . ಆರೋಪಿಗಳ ಪತ್ತೆಗೆ ಪ್ರಯತ್ನಿಸುತ್ತಿದ್ದು ಮಾರ್ಚ್ 22 ರಂದು ಸಂಜೆ ಸಮಯ ಹನೀಫ್@ ಜೋಗಿ ಹನೀಫ್ ಎಂಬವನು ಕೊಡಪದವು ಬಸ್ ನಿಲ್ದಾಣದ ಬಳಿ ಇರುವುದಾಗಿ ತಿಳಿದು ಬಂದ ಮೇರೆಗೆ ವಶಕ್ಕೆ ಪಡೆದು ದಸ್ತಗಿರಿ ಮಾಡಿ ಆತನಲ್ಲಿದ್ದ ಅಬ್ದುಲ್ ರಜಾಕ್ ನ ಮೊಬೈಲ್ , 4 ,000/- ರೂ ಹಣ ಹಾಗೂ ಹಲ್ಲೆ ಮಾಡಲು ಉಪಯೋಗಿಸಿದ ಹತ್ಯಾರುಗಳನ್ನು ಸ್ವಾದೀನ ಪಡಿಸಿ ಕೊಳ್ಳಲಾಗಿದೆ .
ಆರೋಪಿಯು ಗಾಂಜಾ ವ್ಯಸನಿಯಾಗಿದ್ದು ಈತನ ಮೇಲೆ ಗಾಂಜಾ ಮಾರಾಟ ಮಾಡುವ ಬಗ್ಗೆ ಕೂಡ ಪ್ರಕರಣ ದಾಖಲಾಗಿದ್ದು ,ಅಲ್ಲದೆ ಹಲವು ಹಲ್ಲೆ ಪ್ರಕರಣರ ಆರೋಪಿಯಾಗಿದ್ದು ವಿಟ್ಲ ಪೊಲೀಸ್ ಠಾಣಾ ರೌಡಿ ಶೀಟರ್ ಆಗಿರುತ್ತಾನೆ. ಈತನ ಜೊತೆ ಅಪಹರಣ ಪ್ರಕರಣದಲ್ಲಿರುವ ಈತನ ಸಹಚರು ಇನ್ನಿಬ್ಬಿರೂ ಆರೋಪಿಗಳು ತಲೆ ಮರೆಸಿಕೊಂಡಿದ್ದು ಪತ್ತೆ ಗೆ ಬಲೆ ಬೀಸಲಾಗಿದೆ
‌‌

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಭೂಷಣ್ .ಜಿ. ಬೊರಸೆ ಮತ್ತು ಹೆಚ್ಚುವರಿ ಅಧೀಕ್ಷಕರಾದ ವೇದಮೂರ್ತಿ ರವರ. ಮಾರ್ಗದರ್ಶನ ದಂತೆ ಶ್ರೀ ರವೀಶ್ .ಸಿ ಆರ್ ಡಿ ವೈ ಎಸ್ ಪಿ ಬಂಟ್ವಾಳ ರವರ ನೇತೃತ್ವದಲ್ಲಿ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕರಾದ ಬಿ.ಕೆ ಮಂಜಯ್ಯ , ನಾಗರಾಜ್ .ಹೆಚ್ .ಇ . ಪಿ ಎಸ್ ಐ ವಿಟ್ಲ ಸಿಬ್ಬಂದಿ ಗಳಾದ ಬಾಲಕೃಷ್ಣ ಗೌಡ, ಪ್ರವೀಣ್ ರೈ, ರಕ್ಷಿತ್ ರೈ ,ಲೋಕೇಶ್ ,ಪ್ರವೀಣ್ ಕುಮಾರ್ , ವೃತ್ತ ನಿರೀಕ್ಷಕರ ಕಛೇರಿ ಯ ಗಿರೀಶ್ ಹಾಗೂ ಚಾಲಕರಾದ ರಘುರಾಮ ,ವಿಜಯೇಶ್ವರ ಈ ಪ್ರಕರಣವನ್ನು ಪತ್ತೆ ಹಚ್ಚುವ ಲ್ಲಿ ಯಶಸ್ವಿಯಾಗಿರುತ್ತಾರೆ


Spread the love