ವಿಟ್ಲ: ಮತ ಚಲಾಯಿಸಿ ಹೊರಬರುತ್ತಿದ್ದಂತೆಯೇ ಮತದಾರರೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಶುಕ್ರವಾರ ಕನ್ಯಾನದಲ್ಲಿ ನಡೆದಿದೆ.
ಮೃತಪಟ್ಟ ವೈಕ್ತಿಯು ಪೊಯ್ಯಗದ್ದೆ ನಿವಾಸಿ ಪಕ್ರು ಬ್ಯಾರಿ ಪುತ್ರ ಅಬ್ದುಲ್ಲ (50) ಎಂದು ಗುರುತಿಸಲಾಗಿದೆ. ಕನ್ಯಾನ ಸರಕಾರಿ ಕಾಲೇಜಿ ಮತಕೇಂದ್ರ ಸಂಖೈ 5 ರಲ್ಲಿ ಮತಚಲಾಯಿಸಿ ಹೊರಬರುತ್ತಿದ್ದಂತೆಯೇ ಕುಸಿದು ಬಿದ್ದ ಅವರನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿ ಪರಿಶೀಲನೆ ನಡೆಸಿದ ವೈದ್ಯರು ಅಬ್ದುಲ್ಲ ಮೃತಪಟ್ಟಿರುವುದಾಗಿ ತಿಳಿಸಿದರು.
ಮೃತರು ಪತ್ನಿ. ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.