ವಿಡಿಯೋ ಗೇಮ್ ಅಡ್ಡೆಗೆ ಸಿಸಿಬಿ ಪೋಲಿಸರ ಧಾಳಿ 24 ಮಂದಿ ಬಂಧನ
ಮಂಗಳೂರು: ನಗರದ ಕಾವೂರು ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ವೀಡಿಯೋ ಗೇಮ್ ಸೆಂಟರಿಗೆ ಧಾಳಿ ನಡೆಸಿದ ಸಿಸಿಬಿ ಪೋಲಿಸರು ಜೂಜಾಟ ಆಡುತ್ತಿದ್ದ 24 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ನವೀನ್ ಚಂದ್ರ(36), ರೋಶನ್(26), ಸುಧೀರ್(32), ಜಾಕಿಚೈನ್(21), ದೀಕ್ಷಿತ್(22), ಮೈಕಲ್ ಪಡುಬಿದ್ರಿ, ವಸಂತ(36), ಪ್ರಕಾಶ್(32), ಸುದರ್ಶನ್(38), ರಮೇಶ್(49), ರವೀಂದ್ರ(40), ಹರ್ಷಿತ್ (28), ) ರಾಜೇಶ್(27), ಧನುಷ್(26), ನಾಗೇಶ್(25), ಅರುಣ್ ಕುಮಾರ್(38), ಅನೀಷ್(22), ರಿತಿನ್,(29) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯನ್ನು ಆಧರಿಸಿ ಅಗೋಸ್ತ್ 1 ರಂದು ರಾತ್ರಿ ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರು ಜಂಕ್ಷನ್ ನ ಶ್ರೀ ಸತ್ಯದೇವತಾ ರಿಕ್ರಿಯೇಶನ್ ಕ್ಲಬ್ ನಲ್ಲಿ ಆರ್ಚರಿ ಎಂಬ ಅದೃಷ್ಠದ ಜೂಜಾಟಕ್ಕೆ ಹಣವನ್ನು ಪಣವಾಗಿಟ್ಟುಕೊಂಡು ಆಟವಾಡುತ್ತಿದ್ದ 18 ಮಂದಿ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತರಿಂದ ಒಟ್ಟು ರೂ. 27,900/- ನಗದು ಹಾಗೂ ಜೂಜಾಟಕ್ಕೆ ಬಳಸಿದ ಆರ್ಚರಿ ಹಾಗೂ ಇತರ ಒಟ್ಟು ರೂ. 30,350/- ಆಗಿರುತ್ತದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ನಗರದ ಹಳೆ ಬಸ್ ನಿಲ್ದಾಣದ ಬಳಿಯ ಶ್ರೀಷ್ ಮಹಲ್ ಲಾಡ್ಜ್ ನ ಒಂದನೇಯ ಮಹಡಿಯಲ್ಲಿರುವ ಶ್ರೀ ದೇವಿ ರಿಕ್ರಿಯೇಶನ್ ಕ್ಲಬ್ ನಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಆಟವಾಡುತ್ತಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ.
ಬಂದಿತರನ್ನು ತೇಜಸ್(29), ಪ್ರಸಾದ್(38), ಲಕ್ಷ್ಮಣ(27), ಶಿವಶೆಟ್ಟಿ(37), ಭರತ್(26), ಅಮೀನ್(41) ಎಂದು ಗುರುತಿಸಲಾಗಿದೆ.
ಬಂಧಿತರಿಂದ ನಗದು ರೂ. 62,900/- ಹಾಗೂ ವೀಡಿಯೋ ಗೇಮ್ ಮೆಶಿನ್ ಒಟ್ಟು 93,900/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.