ವಿದೇಶದಲ್ಲಿ ನೆಲಿಸಿರುವ ಅನಿವಾಸಿ ಕನ್ನಡಿಗರನ್ನು ಕರೆತರಲು ಸಹಾಯ ಮಾಡುವಂತೆ ಕ್ಯಾ. ಕಾರ್ಣಿಕ್ ಮನವಿ

Spread the love

ವಿದೇಶದಲ್ಲಿ ನೆಲಿಸಿರುವ ಅನಿವಾಸಿ ಕನ್ನಡಿಗರನ್ನು ಕರೆತರಲು ಸಹಾಯ ಮಾಡುವಂತೆ ಕ್ಯಾ. ಕಾರ್ಣಿಕ್ ಮನವಿ

ಮಂಗಳೂರು: ವಿದೇಶದಲ್ಲಿ ನೆಲಿಸಿರುವ ಅನಿವಾಸಿ ಕನ್ನಡಿಗರನ್ನು ಕರ್ನಾಟಕಕ್ಕೆ ವಾಪಸ್ ಕರೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಅವರಿಗೆ ಸಹಾಯ ಮಾಡುವಂತೆ ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆಗ್ರಹಿಸಿದ್ದಾರೆ.

ವಿಶ್ವ ವ್ಯಾಪಿಯಾಗಿ ಹರಡುತ್ತಿರುವ ಕೋವಿಡ್ 19 (ಕೊರೊನಾ) ಮಹಾ ಮಾರಿಯಿಂದ ಜಗತ್ತು ತತ್ತರಿಸಿ ಹೋಗಿದೆ. ಈ ರೋಗವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ತನ್ನದೇ ಆದ ಯೋಜನೆಗಳ ಮೂಲಕ ಹಾಗೂ ಜನರಲ್ಲಿ ಜನ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿರುವುದು ಪ್ರಶಂಸನೀಯ. ಆ ಮೂಲಕ ಕೊರೊನಾ ಹರಡುವಿಕೆಯನ್ನು ತಡೆಯಲು ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಸಮರೋಪಾದಿಯ ಕೆಲಸಗಳನ್ನು ಮಾಡುತ್ತಿರುವುದು ನಾಡಿಗೆ ತಿಳಿದಿರುವ ಸಂಗತಿ.

ಕರ್ನಾಟಕದಿಂದ ಉದ್ಯೋಗವನ್ನಾರಸಿ ಲಕ್ಷಾಂತರ ಮಂದಿ ಕನ್ನಡಿಗರು ವಿದೇಶಕ್ಕೆ ತೆರಳಿ ಅಲ್ಲಿ ನೆಲೆಸಿರುತ್ತಾರೆ. ವಿದೇಶಿ ನೆಲದಲ್ಲಿ ನೆಲೆಸಿ ತಾಯ್ನಾಡಿನೊಂದಿಗೆ ನಿರಂತರ ಸಂಪರ್ಕದಲ್ಲಿರುವ ಇವರು ನಮ್ಮ ರಾಜ್ಯದ ಅರ್ಥಿಕತೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುತ್ತಾರೆ. ಪ್ರಸ್ತುತ ವ್ಯಾಪಿಸಿರುವ ಕೊರೊನಾದಿಂದಾಗಿ ಅನಿವಾಸಿ ಕನ್ನಡಿಗರು ತೊಂದರೆಯಲ್ಲಿ ಸಿಲುಕಿಕೊಂಡಿದ್ದು ಅರೋಗ್ಯದ ಸಮಸ್ಯೆ, ಉದ್ಯೋಗದ ಸಮಸ್ಯೆ, ವೀಸಾ ಅವಧಿ ಮುಕ್ತಾಯ ಮುಂತಾದ ಗಂಭೀರ ಸಮಸ್ಯೆಯನ್ನು ಎದುರಿಸುತಿದ್ದು ಇವರನ್ನು ಮತ್ತೆ ತಮ್ಮ ತಾಯ್ನಾಡಿಗೆ ಕರೆಯಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ.

ಕೇಂದ್ರ ಸರ್ಕಾರ ರೂಪಿಸಿರುವ ಅನಿವಾಸಿ ಭಾರತೀಯರನ್ನು ತಾಯ್ನಾಡಿಗೆ ಮರಳಿ ಕರೆಸುವ ಯೋಜನೆಯನ್ವಯ ಕರ್ನಾಟಕ ರಾಜ್ಯದ ಅನಿವಾಸಿ ಕನ್ನಡಿಗರನ್ನು ಮೇ 7 ರಿಂದ 14 ರ ವರೆಗೆ ಹಮ್ಮಿಕೊಂಡಿರುವ ಮೊದಲನೇಯ ಕಂತಿನಲ್ಲಿ ಪರಿಗಣಿಸದಿರುವುದರಿಂದ ಸಾವಿರಾರು ಜನ ಅನಿವಾಸಿ ಕನ್ನಡಿಗರು ಆತಂಕಕ್ಕೀಡಾಗಿದ್ದಾರೆ. ಅದುದರಿಂದ ವಿದೇಶದಲ್ಲಿ ನೆಲಿಸಿರುವ ಅನಿವಾಸಿ ಕನ್ನಡಿಗರನ್ನು ಕರ್ನಾಟಕಕ್ಕೆ ವಾಪಸ್ ಕರೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಅವರಿಗೆ ಸಹಾಯ ಮಾಡುವಂತೆ ಈ ಹಿಂದೆ ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಘಟಕದ ಉಪಾಧ್ಯಕ್ಷನಾಗಿ ಕೆಲಸ ನಿರ್ವಹಿಸಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿಯವರನ್ನು ವಿನಂತಿಸಿದ್ದಾರೆ.


Spread the love