ವಿದೇಶದಿಂದ ಬಂದವರಿಗೆ ಹೊಟೇಲ್ ಕ್ವಾರಂಟೈನ್ ಲೊಪದೋಷ ಸರಿಪಡಿಸುವಂತೆ ಯು.ಟಿ ಖಾದರ್ ಆಗ್ರಹ
ಮಂಗಳೂರು: ವಿದೇಶದಿಂದ ಮರಳಿದ ಅನಿವಾಸಿ ಭಾರತೀಯರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಕುರಿತು ನೊಡೆಲ್ ಅಧಿಕಾರಿ ಹಾಗೂ ಕೆಲವು ಪ್ರಮುಖರೊಂದಿಗೆ ಶಾಸಕ ಯು.ಟಿ ಖಾದರ್ ನೇತೃತ್ವದಲ್ಲಿ ಚರ್ಚೆ ನಡೆಸಿದಾಗ ಆದ ಲೋಪದೋಷಗಳ ಕುರಿತು ಸುಧೀರ್ಘ ಮಾತುಕತೆ ನಡೆಸಲಾಯಿತು.
ಕರಾವಳಿಗರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು.ಒತ್ತಾಯ ಪೂರ್ವಕ ಹೊಟೆಲ್ ಕ್ವಾರಂಟೈನ್ ಕುರಿತು ಆದ ಗೊಂದಲ ಸರಕಾರ ಆದಷ್ಟು ಶೀಘ್ರವಾಗಿ ಸರಿಪಡಿಸಬೇಕು.ಇನ್ನೂ ಕ್ವಾರಂಟೈನ್ ನಲ್ಲಿರುವವರಿಗೆ ವಿಶೇಷವಾಗಿ ನೋಡಿಕೊಳ್ಳುವಂತೆ ಉಸ್ತುವಾರಿಗಳ ನೇಮಕವಾಗಬೇಕು.ಗರ್ಭಿಣಿ ಮಹಿಳೆಯರು, ಹಿರಿಯ ನಾಗರಿಕರು,ಮಕ್ಕಳಿಗೆ ಮನೆಯ ಕ್ವಾರಂಟೈನ್ ಕುರಿತು ಸಲಹೆ ನೀಡಿದಾಗ ಈ ಕುರಿತು ರಾಜ್ಯದ ಆರೋಗ್ಯ ಕಾರ್ಯದರ್ಶಿ ಜಾವೇದ್ ಅಕ್ತರ್ ಮೂಲಕ ದೂರವಾಣಿ ಮೂಲಕ ಸಂಪರ್ಕಿಸಲಾಯಿತು.ಈ ಕುರಿತು ಸ್ಪಷ್ಟನೆ ನೀಡುವ ಭರವಸೆಯನ್ನು ನೀಡಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಆಗದಂತೆ ನೊಡೆಲ್ ಅಧಿಕಾರಿಗಳು ಪ್ರಯತ್ನಿಸುವುದಾಗಿ ಹೇಳಿದರು.
ಕೊವಿಡ್ ಎನ್.ಜಿ.ಓ ಫೌಂಡೇಶನ್ ಸಂಚಾಲಕರು, ಕೋವಿಡ್-19 ಎನ್.ಜಿ.ಒ. ಸಮನ್ವಯ ಸಮಿತಿಯ ಪ್ರತಿನಿಧಿಗಳಾದ ಖಾಸಿಮ್ ಅಹ್ಮದ್ ಹೆಚ್.ಕೆ., ಮಾಜಿ ಮೇಯರ್ ಅಶ್ರಫ್ ಕೆ., ಉಮರ್ ಯು.ಹೆಚ್., ಅಬೂಬಕ್ಕರ್ ಗ್ರೂಪ್ ಮಿಥುನ್ ರೈ,ರಮೇಶ್ ಪೆರ್ಲ ಇನ್ನಿತರರು ಉಪಸ್ಥಿತರಿದ್ದರು.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಖಾದರ್ ವಿದೇಶದಿಂದ ಬರುವ ಪ್ತಯಾಣಿಕರಿಗೆ ಹೋಟೆಲ್ ಕ್ವಾರಂಟೈನ್ ಕಡ್ಡಾಯ ಮಾಡುವುದನ್ನು ಒಪ್ಪಲಾಗುವುದಿಲ್ಲ. ಸರ್ಕಾರಿ ಕ್ವಾರಂಟೈನ್ ಇಚ್ಚಿಸುವವರಿಗೆ ಅದರ ವ್ಯವಸ್ಥೆ ಮಾಡಬೇಕು. ವಿದೇಶದಿಂದ ಬರಬೇಕೆಂಬ ಉದ್ದೇಶದಿಂದ ಅಲ್ಲಿ ಹೋಟೆಲ್ ಕ್ವಾರಂಟೈನ್ಗೆ ಒಪ್ಪುತ್ತೇವೆ ಎಂದು ಸಹಿ ಹಾಕಿ ಬಂದಿರಬಹುದು. ಅದರಲ್ಲಿ ತುಂಬಾ ಮಂದಿ ಕಷ್ಟದಲ್ಲಿ ಸಿಲುಕಿದ್ದಾರೆ. ಬಂಗಾರ ಮಾರಿ ಟಿಕೆಟ್ ಪಡೆದು ಬಂದಿದ್ದಾರೆ. ಮತ್ತೆ ಇಲ್ಲಿ ಬಂದು ದಿನಕ್ಕೆ 1 ಸಾವಿರದಂತೆ 14 ದಿನಕ್ಕೆ 14 ಸಾವಿರ ಕೊಡಲು ಅವರಲ್ಲಿ ಹಣ ಇರಬೇಕಲ್ಲಾ? ಎಂದರು.
ಈ ಮೊದಲೇ ಜಿಲ್ಲಾಡಳಿತದ ಜೊತೆಗೆ ಚರ್ಚಿಸಿದ್ದೆ. ನಿನ್ನೆ ವಿಮಾನ ನಿಲ್ದಾಣಕ್ಕೆ ಹೋಗಲು ಇಚ್ಚಿಸಿದ್ದರೂ ಜಿಲ್ಲಾಧಿಕಾರಿ ಹೋಗುವುದು ಬೇಡ ಎಂದು ಹೇಳಿದ ಕಾರಣಕ್ಕೆ ಅವರ ಮಾತಿಗೆ ಗೌರವ ಕೊಟ್ಟು ಹೋಗಿಲ್ಲ. ಆದರೆ, ನಿನ್ನೆ ರಾತ್ರಿ ನಡೆದ ಅವ್ಯವಸ್ಥೆಯಿಂದ ನನಗೆ ಹಲವು ದೂರವಾಣಿ ಕರೆಗಳು ಬಂದಿದೆ. ಈ ಲೋಪ ಮುಂದೆ ಆಗದಂತೆ ಜಿಲ್ಲಾಧಿಕಾರಿ ಜೊತೆಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.