ವಿದ್ಯಾರ್ಥಿಗಳಿಗೆಲ್ಲ ಪ್ರೀತಿಯ ಅಜ್ಜಿಯಾಗಿದ್ದ ಅಜ್ಜಮ್ಮ ಇನ್ನಿಲ್ಲ
ಉಡುಪಿ: ಹಲವು ವರ್ಷಗಳಿಂದ ಎಂಜಿಎಂ ಕಾಲೇಜು ಸಮೀಪ ಅಜ್ಜಮ್ಮ ಕೆಫೆ ನಡೆಸುತ್ತಿದ್ದ ಅಜ್ಜಮ್ಮ ಯಾನೆ ಕಮಲ ಮೆಂಡನ್ (90) ವಯೋಸಹಜ ಕಾರಣದಿಂದ ಶನಿವಾರ ನಿದನರಾದರು.
ಹಲವು ವರ್ಷಗಳಿಂದ ಕೆಫೆ ನಡೆಸುತ್ತಿದ್ದ ಅಜ್ಜಮ್ಮ ಎಂಜಿಎಂ ಕಾಲೇಜು ವಿದ್ಯಾರ್ಥಿಗಳಿಗೆಲ್ಲಾ ಅಚ್ಚುಮೆಚ್ಚಿನ ಅಜ್ಜಮ್ಮ ಆಗಿದ್ದರು. ತಮ್ಮ ಮನೆಯ ಎದುರು ಚಿಕ್ಕ ತಗಡಿನಡಿಯಲ್ಲಿ ಸ್ವಾವಲಂಬಿ ದುಡಿಮೆಯಾಗಿ ಊಟದ ಹೋಟೆಲ್ ನಡೆಸುತ್ತಿದ್ದ ಅಜ್ಜಮ್ಮ ತನ್ನ ಕಾಲ ಮೇಲೆ ನಿಂತು ಬದುಕು ಸಾಗಿಸಿದವರು.
ವಾಹಿನಿಯ ಮೂಲಕ ಅಜ್ಜಮ್ಮ ಅವರ ಬಗ್ಗೆ ದಾರಿ ದೀಪ ಎನ್ನುವ ಕಾರ್ಯಕ್ರಮದ ಮೂಲಕ ಹನುಮಾನ್ ಗ್ರೂಪ್ ಆಫ್ ಕನ್ಸನ್ರ್ಸ್ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಆಗಿರುವ ಪಿ. ವಿಲಾಸ್ ನಾಯಕ್ ನೇತೃತ್ವದಲ್ಲಿ ಹಲವಾರು ಗಣ್ಯರು ಒಟ್ಟು ಸೇರಿ ಅಜ್ಜಮ್ಮ ಕೆಫೆ ನಿರ್ಮಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದರು.
ಅಜ್ಜಮ್ಮ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಮಾಣಿಕತೆ ಹಾಗೂ ಸ್ವಾವಲಂಭಿ ಜೀವನಕ್ಕೆ ಮಾದರಿಯಾಗಿದ್ದ ಅಜ್ಜಮ್ಮ ನಮ್ಮನ್ನು ಬಿಟ್ಟು ಹೋಗಿರುವುದು ನಿಜಕ್ಕೂ ತುಂಬಲಾರದ ನಷ್ಟ