ವಿದ್ಯಾರ್ಥಿಗಳು ಓದಿದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿ – ಸೋದೆ ಸ್ವಾಮೀಜಿ
ಉಡುಪಿ: ಎಸ್ ವಿ ಎಸ್ ಪ್ರಾಥಮಿಕ ಶಾಲೆಯ ದಶಮಾನೋತ್ಸವ ಹಾಗೂ ಎಸ್ ವಿಎಸ್ ಪ್ರೌಢ ಶಾಲೆ ಇನ್ನಂಜೆ ಇದರ ನೂತನ ಕಟ್ಟಡದ ಉದ್ಘಾಟನೆ ಸಮಾರಂಭ ಸಂಸ್ಥೆಯ ಪೋಷಕರಾದ ಶ್ರೀ ವಿಶ್ವ ವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ವಿದ್ಯಾರ್ಥಿಗಳು ಒದಿನೊಂದಿಗೆ ತಿಳಿದುಕೊಂಡ ಜ್ಙಾನವನ್ನು ಜೀವನವನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ನಮ್ಮ ಸಂಸ್ಕೃತಿಯ ಅರಿವನ್ನು ಪೋಷಕರು ಮಾಡಿದಾಗ ಉನ್ನತ ಬದಲಾವಣೆಯನ್ನು ಕಾಣಬಹುದು.
ಶಾಲೆಯ ಸಂಚಾಲಕರಾದ ಪಾಡಿಗಾರು ಶ್ರೀನಿವಾಸ ತಂತ್ರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಕಾರ್ಯ ಕೇವಲ ಶಾಲೆಯಿಂದ ಮಾತ್ರವಲ್ಲ ಅದು ಮನೆಯಿಂದಲೂ ಕೂಡ ನಡೆಯಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನ ಕುಮಾರ್ ಮಾತನಾಡಿ ಯುವ ಪೀಳಿಗೆಯ ಜೀವನ ಪಥ ಯಾವ ದಿಕ್ಕಿನಲ್ಲಿ ಸಾಗಬೇಕು ಹಾಗೂ ಅವರ ಮನೋಭಾವನೆಯನ್ನು ಅರಿತು ಸನ್ಮಾರ್ಗದಲ್ಲಿ ನಡೆಯುವಂತೆ ಪೋಷಕರು ಮಾರ್ಗದರ್ಶನ ನೀಡಬೇಕು ಎಂದರು.
ಬೆಂಗಳೂರಿನ ಪೂರ್ಣ ಪ್ರಮತಿ ಶಾಲೆ ಇದರ ಸಹ ಪ್ರಾಂಶುಪಾಲರಾದ ರಘುರಾಮ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಆಸಕ್ತಿಯ ಪ್ರತಿಭೆಯನ್ನು ಅರಿತು ಅದಕ್ಕೆ ಪ್ರೋತ್ಸಾಹ ನೀಡಬೇಕು, ಭಾರತೀಯ ಶಿಕ್ಷಣ ಪರಂಪರೆಯನ್ನು ಉಳಿಸುವ ಮನೋಭಾ ಮೂಡಿಸಬೇಕು ಎಂದರು.
ಲಯನ್ಸ್ ಜಿಲ್ಲೆ 317 ಸಿ ಇದರ ರಾಜ್ಯಪಾರಾದ ಲಯನ್ ವಿಜಿ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಕೊಂಡು ಇತರರಿಗೆ ಮಾದರಿಯಾಗುವಂತೆ ಸಲಹೆ ನೀಡಿದರು.
ಸಂಸ್ಥೆಯ ಆಡಳಿತಾಧಿಕಾರಿ ಪ್ರಭಾವತಿ ಎಸ್ ಅಡಿಗರು ಸ್ವಾಗತಿಸಿ ಮುಖ್ಯ ಶಿಕ್ಷಕಿಯರಾದ ಸುಷ್ಮಾ ಮತ್ತು ಮಮತಾರವರು ಉಭಯ ಸಂಸ್ಥೆಗಳ ವಾರ್ಷಿಕ ವರದಿಯನ್ನು ವಾಚಿಸಿದರು. ವಿದ್ಯಾರ್ಥಿಗಳಾದ ಶ್ರೀ ಪ್ರಭಾ, ಅನನ್ಯ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು.
ಬಹುಮಾನ ವಿತರಣೆಯ ಕಾರ್ಯಕ್ರಮವನ್ನು ನಾಗವೇಣಿ, ದಿವ್ಯಾ, ಲತಾ, ಹಾಗೂ ಯಶವಂತೆ ನೆರವೇರಿಸಿದರು. ಸನ್ಮಾನಿತರ ಪರಿಯಚವನ್ನು ಶಿಕ್ಷಕಿಯರಾದ ಉಷಾ, ದಿವ್ಯಾ, ಲವೀನಾ ಮೊಂತೆರೋ ನಡೆಸಿಕೊಟ್ಟರು.
ಅಂಗನವಾಡಿ ಮಕ್ಕಳಿಂದ ಪ್ರಾರಂಭಗೊಂಡು ಪ್ರೌಢಶಾಲೆಯವರೆಗೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೇರವೇರಿದವು. ಶಿಕ್ಷಕ ಸತೀಶ್ ನಾಯಕ್ ಧನ್ಯವಾದವಿತ್ತರು.