ವಿದ್ಯಾರ್ಥಿಗಳು ಸಮಾಜವನ್ನು ಅರಿಯುವ ಪ್ರಯತ್ನ ಮಾಡಬೇಕು: ನಿತೀಶ್ ನಾರಾಯಣನ್
ಮಂಗಳೂರು: ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು ಜನರನ್ನು ಅರಿಯುವ ಅಭ್ಯಾಸ ನಮ್ಮದಾಗಬೇಕು. ಸಮಾಜವನ್ನು ಅರಿಯುವ ಅಭ್ಯಾಸವಾಗಬೇಕು ಮತ್ತು ವಿದ್ಯಾರ್ಥಿಗಳು ಸಮಾಜವನ್ನು ಅರಿಯುವ ಪ್ರಯತ್ನ ಮಾಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ.)ನ ಕೇಂದ್ರಕಾರ್ಯಕಾರಿ ಸಮಿತಿ ಸದಸ್ಯ ನಿತೀಶ್ ನಾರಾಯಣನ್ ಹೇಳಿದರು.
ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ, ವಿದ್ಯಾರ್ಥಿಗಳ ಪ್ರಜಾಸತಾತ್ಮಕ ಹಕ್ಕುಗಳ ರಕ್ಷಣಿಗಾಗಿ ಮತ್ತು ವಿದ್ಯಾರ್ಥಿಗಳ ಐಕ್ಯತೆಗಾಗಿ ನಡೆದ ಎಸ್.ಎಫ್.ಐ.ನ ಎರಡು ದಿನದ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಮಾತಾನಾಡಿದ ಅವರು, ಅಭ್ಯಾಸ ಮತ್ತು ಹೋರಾಟದ ಹಾದಿಯಲ್ಲಿ ನಾವು ಮುನ್ನಡಯೋಣ. ವಿದ್ಯಾರ್ಥಿ ಚಳುವಳಿಯನ್ನು ಬಲಿಷ್ಟಗೊಳಿಸೋಣ ಎಂದರು.
ಅಧ್ಯಕ್ಷತೆ ವಹಿಸಿ ಮಾತಾನಾಡಿದ ಮಾಧುರಿ ಬೋಳಾರ್, ಈ ಜಿಲ್ಲೆಯಲ್ಲಿ ವಿದ್ಯಾರ್ಥಿಐಕ್ಯತೆ ಉಳಿಸುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ರಕ್ಷಣಿಗಾಗಿ ನಾವು ಹೋರಾಡೋಣ. ಕೋಮು ವಿಂಗಡನೆ ಮಾಡಲು ಬಯಸುವ ಶಕ್ತಿಗಳ ವಿರುದ್ಧ ನಿಲ್ಲೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಳೆದ ಹಲವು ವರುಷಗಳಿಂದ ವಿದ್ಯಾರ್ಥಿ ಚಳುವಳಿಯಲ್ಲಿ ಸಕ್ರಿಯರಾಗಿದ್ದ ಎಸ್.ಎಫ್.ಐ ನ ಮಾಜಿ ನಾಯಕರುಗಳಾದ ಮಯೂರಿ ಬೋಳಾರ್, ಹಂಝಕಿನ್ಯಾ, ಹನುಮಂತ್ ಪಂಜಿಮೊಗರು ಮತ್ತುಚರಣ್ ಶೆಟ್ಟಿಯವರನ್ನು ವಿದ್ಯಾರ್ಥಿ ಸಮಿತಿಯಿಂದ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಎಫ್.ಐ.ನ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ, ಎಸ್.ಎಫ್.ಐ.ನ ಜಿಲ್ಲಾ ಕಾರ್ಯದರ್ಶಿ ವಿಕಾಸ್ ಕುತ್ತಾರ್, ಚರಣ್ ಶೆಟ್ಟಿ ಪಂಜಿಮೊಗರುಉಪಸ್ಥಿತರಿದ್ದರು.
ಎಸ್.ಎಫ್.ಐ.ನ ನೂತನ ಜಿಲ್ಲಾ ಸಮಿತಿ
ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಗಾರದಲ್ಲಿ ಎಸ್.ಎಫ್.ಐ.ನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಮಾಧುರಿ ಬೋಳಾರ್, ಕಾರ್ಯದರ್ಶಿಯಾಗಿ ವಿಕಾಸ್ ಕುತ್ತಾರ್ಆಯ್ಕೆಯಾದರು. ಉಪಾಧ್ಯಕ್ಷರಾಗಿ ಚಸ್ಮಿತ, ಶಮಾಝ್, ಸಿನಾನ್ ಬೆಂಗ್ರೆ ಮತ್ತು ಜೊತೆ ಕಾರ್ಯದರ್ಶಿಗಳಾಗಿ ಸಂಜಯ್ ಬಜಾಲ್, ಸಾಗರ್ ಹಾಗೂ ಒಟ್ಟು 23 ಸದಸ್ಯರ ನೂತನ ಸಮಿತಿಯನ್ನು ರಚಿಸಲಾಯಿತು.