Home Mangalorean News Kannada News ‘ವಿದ್ಯಾರ್ಥಿ ಮತದಾರರಿಗೆ ನ್ಯಾಯ ನೀಡಿ’ -ಎಸ್‌ಐಒ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆ

‘ವಿದ್ಯಾರ್ಥಿ ಮತದಾರರಿಗೆ ನ್ಯಾಯ ನೀಡಿ’ -ಎಸ್‌ಐಒ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆ

Spread the love

‘ವಿದ್ಯಾರ್ಥಿ ಮತದಾರರಿಗೆ ನ್ಯಾಯ ನೀಡಿ’ -ಎಸ್‌ಐಒ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆ

ಮಂಗಳೂರು: ರಾಜ್ಯ ಸರ್ಕಾರ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ನಿಷೇಧಿಸಿದ್ದು, ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳನ್ನು ಎದುರಿಸು ವಂತಾಗಿದೆ. ಈ ಸಮಸ್ಯೆಗಳ ಪರಿಹಾರ ಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಸ್ಪಂದಿಸಲಿ ಎಂಬ ಉದ್ದೇಶದಿಂದ ಸ್ಟುಡೆಂಟ್‌ ಇಸ್ಲಾಮಿಕ್‌ ಆರ್ಗನೈಸೇಶನ್‌ ಆಫ್‌ ಇಂಡಿಯಾ ವತಿಯಿಂದ ವಿದ್ಯಾರ್ಥಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಎಸ್‌ಐಒ ಜಿಲ್ಲಾ ಘಟಕದ ಅಧ್ಯಕ್ಷ ತಲ್ಹಾ ಇಸ್ಮಾಯಿಲ್‌ ಹೇಳಿದರು.

ನಗರದ ವುಡ್‌ಲ್ಯಾಂಡ್‌ ಹೋಟೆಲ್‌ ನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ವಿದ್ಯಾರ್ಥಿ ಮತದಾರರನ್ನು ಸೆಳೆಯುವ ಬದಲು ಮತದಾರರನ್ನು ಜಾತಿ, ಧರ್ಮ, ಲಿಂಗದ ಆಧಾರದ ಮೇಲೆ ವಿಭಜಿಸಿ ಮತ ಪಡೆಯುತ್ತಿವೆ ಎಂದು ದೂರಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿ ಮತ ಚಲಾಯಿಸುವ ಶೇ 2.5 ಮತದಾರರಿದ್ದು, ಅವರಿಗೆ ನ್ಯಾಯ ಒದಗಿಸುವ ಸಲುವಾಗಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಶಾಲಾ–ಕಾಲೇಜುಗಳಲ್ಲಿ ಕನ್ನಡಿಗ ವಿದ್ಯಾರ್ಥಿಗಳಿಗೆ ಶೇ 50 ರಷ್ಟು ಸ್ಥಾನ ಮೀಸಲಿಡಬೇಕು. ವಿದ್ಯಾರ್ಥಿಗಳಿಗೆ ಸರ್ಕಾರಿ ಮತ್ತು ಖಾಸಗಿ ಬಸ್‌ಗಳಲ್ಲಿ ಉಚಿತ ಬಸ್‌ಪಾಸ್‌ ವ್ಯವಸ್ಥೆ ಮಾಡಬೇಕು. ಬಸ್‌ ಮತ್ತು ರೈಲು ನಿಲ್ದಾಣಗಳಲ್ಲಿ ಪ್ರತ್ಯೇಕ ವಿದ್ಯಾರ್ಥಿ ಸ್ನೇಹಿ ವಿಶ್ರಾಂತಿ ಕೊಠಡಿ ತೆರೆಯಬೇಕು. ಶಾಲಾ–ಕಾಲೇಜುಗಳ 200 ಮೀಟರ್‌ ಅಂತರದಲ್ಲಿ ತೆರೆಯಲಾಗುವ ಅಮಲು ಪದಾರ್ಥ, ಮದ್ಯ, ತಂಬಾಕು ಮಾರಾ ಟವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

300ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಶಾಲಾ–ಕಾಲೇಜುಗಳಲ್ಲಿ ಡಿ–ಅಡಿಕ್ಷನ್‌ ಸೆಂಟರ್‌, ಕರಿಯರ್‌ ಕೌನ್ಸಿಲ್‌ ಸೆಂಟರ್‌ ತೆರೆಯಬೇಕು. ಲಿಂಗ್ಡೋ ಆಯೋಗದ ವರದಿ ಮತ್ತು ಸುಪ್ರೀಂ ಕೋರ್ಟ್‌ ಆದೇಶದಂತೆ ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಬೇಕು. ಸಾಚಾರ್‌ ಸಮಿತಿ ವರದಿ ಜಾರಿಗೆ ತರಬೇಕು. ವಿದೇಶಿ ವಿದ್ಯಾರ್ಥಿಗಳು, ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ಸುರಕ್ಷತೆ ಭರವಸೆ ನೀಡಲು ಹಾಗೂ ಮಂಗಳೂ ರನ್ನು ವಿಶ್ವದ ವಿದ್ಯಾ ಕೇಂದ್ರವನ್ನಾಗಿ ಆಕರ್ಷಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆ ಯಲ್ಲಿ ಆನ್‌ಲೈನ್‌ ಮತ್ತು ಆಫ್‌ಲೈನ್‌ ಸಹಾಯವಾಣಿ ತೆರೆಯಬೇಕು ಎಂದು ಒತ್ತಾಯಿಸಿದರು.

ಸ್ವಉದ್ಯೋಗ ಪ್ರೋತ್ಸಾಹಿಸಲು ಎಲ್ಲ ಕ್ಯಾಂಪಸ್‌ಗಳಲ್ಲಿ ಇನ್‌ಕ್ಯುಬೇಷನ್‌ ಸೆಂಟರ್‌ಗಳ ಮಾದರಿಯಲ್ಲಿ ಸ್ಟಾರ್ಟ್‌ ಅಪ್‌ ಸೆಲ್‌ ಸ್ಥಾಪಿಸಬೇಕು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂಶೋಧನಾ ಕೇಂದ್ರ ತೆರೆಯಬೇಕು. ಚೈಲ್ಡ್‌ ಹೆಲ್ಪ್‌ ಲೈನ್‌ ಬಲಪಡಿಸಲು ಗ್ರಾಮ ಪಂಚಾ ಯಿತಿ ಹಾಗೂ ತಾಲ್ಲೂಕು ಕಚೇರಿಯಲ್ಲಿ ಕಲ್ಯಾಣ ಅಧಿಕಾರಿ ನೇಮಕ ಮಾಡಬೇಕು. ಮದರಸ ವಿದ್ಯಾರ್ಥಿಗಳನ್ನು ಮುಖ್ಯವಾಹಿ ನಿಗೆ ತರಲು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಲಿಘಡ ವಿಶ್ವವಿದ್ಯಾಲಯ ಹಾಗೂ ಜಾಮಿ ಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಗಳ ಮಾದರಿಯಲ್ಲಿ 6 ತಿಂಗಳ ಬ್ರಿಡ್ಜ್‌ ಕೋರ್ಸ್‌ ಆರಂಭಿ ಸಬೇಕು. ಮತೀಯ ಗೂಂಡಾಗಿರಿ ತಡೆ ಯಲು ಹೊಸ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

ಪದಾಧಿಕಾರಿಗಳಾದ ಅಘ್ನಾನ್‌ ಹಸನ್‌, ಡಾ. ಮಿಸ್‌ಅಬ್‌ ಇಸ್ಮಾಯಿಲ್‌, ಮುಬಿನ್‌ ಇದ್ದರು.


Spread the love

Exit mobile version