ವಿದ್ಯಾವಂತ ಜನರನ್ನು ಅವಹೇಳನ ಮಾಡಿದ ಕುಮಾರಸ್ವಾಮಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ- ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಉಡುಪಿ ಜನರಿಗೆ ತಿಳುವಳಿಕೆ ಕಡಿಮೆ ಎನ್ನುವ ಮೂಲಕ ಮತ್ತೊಮ್ಮೆ ಜಿಲ್ಲೆಯ ಜನತೆಯನ್ನು ಅವಹೇಳನ ಮಾಡುವ ಕೆಲಸ ರಾಜ್ಯ ಮುಖ್ಯಮಂತ್ರಿಗಳು ಮಾಡಿದ್ದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ವಿದ್ಯಾವಂತ ಜನರು ಜೆಡಿಎಸ್ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಮಂಗಳವಾರ ಉಡುಪಿ ಜನರಿಗೆ ತಿಳುವಳಿಕೆ ಕಡಿಮೆ ಇದ್ದು ಯಾವತ್ತೂ ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಾರೆ ಎನ್ನುವ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು ಉಡುಪಿ ಜಿಲ್ಲೆಯ ಜನತೆ ಸದಾ ಪ್ರಜ್ಞಾವಂತರಾಗಿದ್ದ ಕುಟುಂಬ ರಾಜಕಾರಣಕ್ಕೆ ಕರಾವಳಿಗರು ಎಂದೂ ಬೆಲೆ ನೀಡಲ್ಲ. ಜೆಡಿಎಸ್ ಪಕ್ಷಕ್ಕೆ ವಿದ್ಯಾವಂತ ಜನರು ಮತ ಹಾಕಲ್ಲ. ಈ ಚುನಾವಣೆಯಲ್ಲಿ ಜೆಡಿಎಸ್ಗೆ ತಕ್ಕಪಾಠ ಕಲಿಸಲಿದ್ದಾರೆ. ಕುಮಾರ ಸ್ವಾಮಿ ಮಾತಿನಿಂದ ಬಿಜೆಪಿಗೆ ಬಹುಮತ ಬರಲು ಅನುಕೂಲವಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ತಮ್ಮ ಹುದ್ದೆಯ ಘನತೆಗೆ ತಕ್ಕುದಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಕಳೆದ ಬಜೆಟ್ ನಲ್ಲಿ ಕರಾವಳಿ ಜಿಲ್ಲೆಗಳಿಗೆ ಅನ್ಯಾಯ ಮಾಡಿರುವ ಕುಮಾರ ಸ್ವಾಮಿ, ಕರಾವಳಿಗೆ ಅವರ ಕೊಡುಗೆ ಏನು ಎಂಬುದನ್ನು ಮೊದಲು ಹೇಳಲಿ. ರೇವಣ್ಣ ಲೋಕೋಪಯೋಗಿ ಇಲಾಖೆಯಿಂದ ಕರಾವಳಿಗೆ ಏನು ಕೊಟ್ಟಿದ್ದಾರೆ. ಬಂದರು ಅಭಿವೃದ್ಧಿಗೆ ಮುಖ್ಯಮಂತ್ರಿ ಎಷ್ಟು ಅನುದಾರ ನೀಡಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.ಉಡುಪಿ ಜನ ನಿಮ್ಮ ಮುಂದೆ ತಿರುಗಿ ಬಿದ್ದಿದ್ದಾರೆ. ಜೆಡಿಎಸ್ಗೆ ಮತ ಹಾಕಿಲ್ಲ ಎಂಬ ಕಾರಣಕ್ಕೆ ಅವರು ಕರಾವಳಿಯ ಜನರ ಅವಹೇಳನ ಮಾಡುತ್ತಿದ್ದಾರೆ ಎಂದು ದೂರಿದರು.
ಕುಮಾರಸ್ವಾಮಿ ಈ ಕುರಿತು ಹೇಳಿಕೆಯನ್ನು ಕೂಡಲೇ ವಾಪಾಸು ಪಡೆದು ಕ್ಷಮೆ ಕೇಳಬೇಕು. ಕುಮಾರಸ್ವಾಮಿ ಕರಾವಳಿಯನ್ನು ಉದ್ದಾರ ಮಾಡಿಲ್ಲ. ಯಾವ ಮುಖ್ಯಮಂತ್ರಿಗಳು ಕೂಡ ಕುಮಾರಸ್ವಾಮಿಯಷ್ಟು ಕರಾವಳಿಯನ್ನು ಅವಹೇಳನ ಮಾಡಿಲ್ಲ. ಕರಾವಳಿಯ ಅಭಿವೃದ್ಧಿಗೆ ದೇವೇಗೌಡರ ಕುಟುಂಬ ಕಾರಣ ಅಲ್ಲ ಎಂದು ಅವರು ಹೇಳಿದರು.