ವಿದ್ಯುತ್ ಕಾಮಗಾರಿಗಳ ಬಿಲ್ ಪಾಸ್ ಮಾಡಲು ಲಂಚ ಸ್ವೀಕಾರ – ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ

Spread the love

ವಿದ್ಯುತ್ ಕಾಮಗಾರಿಗಳ ಬಿಲ್ ಪಾಸ್ ಮಾಡಲು ಲಂಚ ಸ್ವೀಕಾರ – ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಗಳೂರು: ವಿದ್ಯುತ್ ಕಾಮಗಾರಿಗಳ ಬಿಲ್ ಪಾಸ್ ಮಾಡಿರುವುದಕ್ಕೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲಂಚ ಪಡೆದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ದಿನಾಂಕ 19.09.2024 ರಂದು ಶ್ರೀ ಎಂ.ಆರ್ ಸ್ವಾಮಿ, ಮುಖ್ಯಾಧಿಕಾರಿಗಳು, ಕಿನ್ನಿಗೋಳಿ ಪಟ್ಟಣ ಪಂಚಾಯತ್, ಮುಲ್ಕಿ ತಾಲೂಕು ಇವರು ಪಿರ್ಯಾದುದಾರರಿಂದ ರೂ. 15,000/- (ಹದಿನೈದು ಸಾವಿರ) ಲಂಚ ಪಡೆದ ಬಗ್ಗೆ ಟ್ರ್ಯಾಪ್ ಮಾಡಲಾಗಿದ್ದು, ಅದೇ ದಿನ ಶ್ರೀ ಎಂ.ಆರ್ ಸ್ವಾಮಿ, ಮುಖ್ಯಾಧಿಕಾರಿಗಳು, ಕಿನ್ನಿಗೋಳಿ ಪಟ್ಟಣ ಪಂಚಾಯತ್, ಮುಲ್ಕಿ ತಾಲೂಕು ಇವರ ಮನೆಯನ್ನು ಶೋಧನೆ ಮಾಡಿದಾಗ ವಿದ್ಯುತ್ ಗುತ್ತಿಗೆದಾರರೊಬ್ಬರ ಸಂಸ್ಥೆಯ ಹೆಸರಿರುವ ಎನ್ವಲಪ್ ಕವರಿನಲ್ಲಿ ರೂ 30,000/- ಹಣ ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ಕೈಗೊಂಡಾಗ ಸದರಿ ಹಣವನ್ನು 3 ವಿದ್ಯುತ್ ಕಾಮಗಾರಿಗಳ ಬಿಲ್ ಪಾಸ್ ಮಾಡಿರುವುದಕ್ಕೆ ಶ್ರೀ ಎಂ.ಆರ್ ಸ್ವಾಮಿ, ಮುಖ್ಯಾಧಿಕಾರಿಗಳು, ಕಿನ್ನಿಗೋಳಿ ಪಟ್ಟಣ ಪಂಚಾಯತ್, ಮುಲ್ಕಿ ತಾಲೂಕು ಇವರು ಲಂಚವಾಗಿ ತನ್ನಿಂದ ಪಡೆದುಕೊಂಡಿರುತ್ತಾರೆ ಎಂಬುದಾಗಿ ವಿದ್ಯುತ್ ಗುತ್ತಿಗೆದಾರರು ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2024 ಕಲಂ 7(ಎ) ಭ್ರಷ್ಟಾಚಾರ ನಿರ್ಬಂಧಕ ಕಾಯ್ದೆ, 1988 (ತಿದ್ದುಪಡಿ ಕಾಯ್ದೆ, 2018) ರಡಿ ದಿನಾಂಕ 04. 10.2024 ರಂದು ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ ಎಂಬುದಾಗಿ ಎಂ.ಎ ನಟರಾಜ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಮಂಗಳೂರು ರವರು ತಿಳಿಸಿರುತ್ತಾರೆ.


Spread the love