ವಿಧಾನಸಭೆ ಚುನಾವಣೆ ವೇಳೆ 62 ಲಕ್ಷ ನಗದು ಪತ್ತೆ:ಮಾಜಿ ಸಚಿವ ರಮಾನಾಥ ರೈ ವಿರುದ್ಧ ಪ್ರಕರಣ ದಾಖಲು!

Spread the love

ವಿಧಾನಸಭೆ ಚುನಾವಣೆ ವೇಳೆ 62 ಲಕ್ಷ ನಗದು ಪತ್ತೆ:ಮಾಜಿ ಸಚಿವ ರಮಾನಾಥ ರೈ ವಿರುದ್ಧ ಪ್ರಕರಣ ದಾಖಲು!

ಮಂಗಳೂರು : ವಿಧಾನಸಭೆ ಚುನಾವಣೆ ವೇಳೆ 62 ಲಕ್ಷ ರೂ. ನಗದು ಪತ್ತೆ ಪ್ರಕರಣ ಸಂಬಂಧಿಸಿದಂತೆ ಮಾಜಿ ಸಚಿವ ರಮಾನಾಥ ರೈ ಸೇರಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಬಿಲ್ಡರ್ ಸುಧಾಕರ ಶೆಟ್ಟಿ, ಬೆಂಗಳೂರು ಉದ್ಯಮಿ ಉದಯ ಹೆಗ್ಡೆ, ಮುಗೆರೋಡಿ ಕನ್ ಸ್ಟ್ರಕ್ಷನ್ ಸಿಬಂದಿ ವರುಣ್, ಪ್ರತೀಶ್, ರಮಾನಾಥ ರೈ, ಅವರ ಪಿಎ ಡೆನ್ಸಿಲ್ ಹರ್ಮನ್ ವಿರುದ್ಧ ಕೇಸು ದಾಖಲಾಗಿದೆ.

ಮತದಾರರಿಗೆ ಹಣ ಹಂಚುವ ಉದ್ದೇಶದಿಂದ ಇರಿಸಿಕೊಂಡಿದ್ದ ನಗದು ಹಣ ಎಂದು ಹೇಳಲಾಗುತಿದ್ದು
ಚುನಾವಣೆಗೆ ಮುನ್ನ ಐಟಿ ಅಧಿಕಾರಿಗಳು ದಾಳಿ ನಡೆಸಿ ನಗದು ವಶಪಡಿಸಿಕೊಂಡಿದ್ದರು.

ಆದಾಯ ತೆರಿಗೆ ಇಲಾಖಾಧಿಕಾರಿಗಳು ಒಟ್ಟು ರೂ. 62,೦೦,೦೦೦/-(ಅರುವತ್ತೆರಡು ಲಕ್ಷ) ವನ್ನು ಸ್ವಾಧೀನಪಡಿಸಿಕೊಂಡು ವಿಚಾರಣೆ ನಡೆಸಿದಾಗ 2018 ನೇ ವಿಧಾನ ಸಭಾ ಚುನಾವಣೆಯ ಸಮಯದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ, ಸಾರ್ವಜನಿಕರಿಗೆ ಹಣವನ್ನು ಹಂಚುವ ಉದ್ದೇಶದಿಂದ ಶ್ರೀ ಸುಧಾಕರ ಶೆಟ್ಟಿ ಕಾಂಟ್ರಾಕ್ಟರ್ ಲೋಕೋಪಯೋಗಿ ಇಲಾಖೆ, ಶ್ರೀ ಉದಯ ಹೆಗ್ಡೆ M/s ನಿರ್ಮಾಣ್ ಕನ್‌ಸ್ಟ್ರಕ್ಷನ್ ಬೆಂಗಳೂರು, ಸುಧಾಕರ ಶೆಟ್ಟಿಯ M/s ಮುಗರೋಡಿ ಕನ್‌ಸ್ಟ್ರಕ್ಷನ್ ನ ಸಿಬ್ಬಂಧಿಗಳಾದ ವರುಣ್ ಹಾಗೂ ಪ್ರತೀಶ್, ಸರಕಾರಿ ಉದ್ಯೋಗಿ ಡೆನ್ಸಿಲ್ ಹರ್ಮನ್ ಹಾಗೂ ಶ್ರೀ ರಮನಾಥ ರೈ, ಮಾಜಿ ಸಚಿವರು (ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ) ಹಾಗೂ ಶಾಸಕರು, ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇವರುಗಳೆಲ್ಲರೂ ಕಾನೂನು ವಿರುದ್ಧ ವ್ಯವಹಾರ ನಡೆಸಿರುವುದು ಕಂಡುಬರುತ್ತದೆ ಎಂಬುದಾಗಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಯವರು ದ ಕ ಜಿಲ್ಲೆ ರವರಿಗೆ ವರದಿ ಸಲ್ಲಿಸಿ, ವರದಿಯೊಂದಿಗೆ ಸ್ವಾಧೀನಪಡಿಸಿಕೊಂಡ ನಗದು ಹಾಗೂ ದಾಖಲಾತಿಗಳನ್ನು ಕಾನೂನು ಕ್ರಮಕ್ಕಾಗಿ ಹಸ್ತಾಂತರಿಸಿರುತ್ತಾರೆ.

ಬಂಟ್ವಾಳ ಜೆಎಂಎಫ್ ಕೋರ್ಟ್ ಸೂಚನೆಯಡಿ ಬಂಟ್ವಾಳ ಠಾಣೆಗೆ ದೂರು ನೀಡಲಾಗಿದ್ದು ತಹಸೀಲ್ದಾರ್ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಮತದಾರರಿಗೆ ಲಂಚ ಆರೋಪದಡಿ ಕೇಸು ದಾಖಲಾಗಿದೆ.


Spread the love