ವಿಧಾನಸೌಧದಿಂದ ಎಮ್ ಎಲ್ ಎಗಳನ್ನು ಹೊರಹಾಕಬಹುದು, ನಾಯಿಗಳನ್ನ ಹೊರಗೆ ಹಾಕೋಕೆ ಆಗೋದಿಲ್ಲ!: ಖಾದರ್
ಮಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ನಾಯಿಗಳ ಕಾಟಕ್ಕೆ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಬೇಸತ್ತುಹೋಗಿದ್ದು ಎಮ್ ಎಲ್ ಎ ಗಳನ್ನು ಹೊರ ಹಾಕಬಹುದು, ಆದ್ರೆ ನಾಯಿಗಳನ್ನು ಹೊರ ಹಾಕೋದೆ ದೊಡ್ಡ ಸಮಸ್ಯೆ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ವಿಧಾನಸೌಧದಲ್ಲಿ ನಾಯಿಗಳ ಕಾಟ ತೀವ್ರವಾಗಿದೆ. ನಾಯಿಗಳ ಪರ ಇದ್ದವರು ಇದ್ದಾರೆ, ವಿರೋಧ ಇದ್ದವರು ಇದ್ದಾರೆ. ಅದನ್ನು ಹೊರಗೆ ಹಾಕೋದೆ ದೊಡ್ಡ ಸಮಸ್ಯೆ ಆಗಿದೆ. ನಾಯಿಗಳನ್ನು ಹೊರ ಹಾಕೋದಕ್ಕೆ ಮೀಟಿಂಗ್ ಕರೆದಿದ್ದೇನೆ. ಮೀಟಿಂಗ್ಗೆ ಪ್ರಾಣಿ ದಯಾ ಸಂಘದವರನ್ನು ಕರೆಯುತ್ತೇವೆ. ನಾಯಿಗಳ ಕಾಟದಿಂದ ವಾಕಿಂಗ್ ಮಾಡುವವರಿಗೂ ಸಮಸ್ಯೆ ಆಗುತ್ತಿದೆ ಎಂದು ಹೇಳಿದರು
ಖಾದರ್ ನೇತೃತ್ವದ ನರಿಂಗಾನ ಕಂಬಳದಲ್ಲಿ ಖಾದರ್ಗೆ ಸ್ಪೀಕರ್ ಆಗೋದು ಇಷ್ಟ ಇರಲಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿದ ಅವರು, ನಾನು ಈಗ ಸರ್ಕಾರದಲ್ಲಿ ಇಲ್ಲ, ನನಗೆ ಏನು ನಡಿತಿದೆ ಅಂತ ಗೊತ್ತಾಗಲ್ಲ. ನಾನು ಈಗ ಇರುವ ಪೋಸ್ಟ್ನಲ್ಲಿ ಸಂತೋಷದಿಂದ ಇದ್ದೇನೆ. ಯಾವುದೇ ಅಧಿಕಾರ ಇಲ್ಲದೇ ಇದ್ದರೂ ಸಂತೋಷದಲ್ಲಿ ಇರುತ್ತೇನೆ. ನನಗೆ ಸಂತೋಷದಲ್ಲಿ ಇರುವ ಹುದ್ದೆ ನೀಡಲಿ ಅಂತ ದೇವರಲ್ಲಿ ಕೇಳುತ್ತೇನೆ. ನಾನು ಯಾವಾಗಲೂ ಖುಷಿ ಸಮಾಧಾನದಲ್ಲಿ ಇರುತ್ತೇನೆ. ನಾನು ಸ್ಪೀಕರ್, ನನಗೆ ನಾನೇ ಕಮಾಂಡರ್ ಎಂದು ಯುಟಿ ಖಾದರ್ ಹೇಳಿದ್ದಾರೆ.