ವಿಧಾನ ಪರಿಷತ್ ಪದವೀಧರರ/ಶಿಕ್ಷಕರ ಕ್ಷೇತ್ರದ ಚುನಾವಣೆ :ದ.ಕ. ಜಿಲ್ಲೆಯಲ್ಲಿ ಮತಗಟ್ಟೆಗಳ ವಿವರ

Spread the love

ವಿಧಾನ ಪರಿಷತ್ ಪದವೀಧರರ/ಶಿಕ್ಷಕರ ಕ್ಷೇತ್ರದ ಚುನಾವಣೆ:ದ.ಕ. ಜಿಲ್ಲೆಯಲ್ಲಿ ಮತಗಟ್ಟೆಗಳ ವಿವರ
ಮಂಗಳೂರು : ಭಾರತ ಚುನಾವಣಾ ಆಯೋಗದ ಅಧಿಸೂಚನೆಯಂತೆ ಕನಾಟಕ ನೈರುತ್ಯ ಪದವೀಧರ/ಶಿಕ್ಷಕರ ಕ್ಷೇತ್ರದ ದೈವಾರ್ಷಿಕ ಚುನಾವಣೆಗೆ ಜಿಲ್ಲೆಯಲ್ಲಿ ಕ್ರಮವಾಗಿ ಪದವೀಧರ ಕ್ಷೇತ್ರಕ್ಕಾಗಿ 23 ಮತಗಟ್ಟೆಗಳು ಮತ್ತು ಶಿಕ್ಷಕರ ಕ್ಷೇತ್ರಕ್ಕಾಗಿ 14 ಮತಗಟ್ಟೆಗಳನ್ನು ಅಳವಡಿಸಲಾಗಿದೆ.
ಪದವೀಧರರ ಕ್ಷೇತ್ರ:
ಮುಲ್ಕಿ-ನಗರ ಪಂಚಾಯತ್ ಕಟ್ಟಡ
ಮೂಡಬಿದ್ರೆ-ಪುರಸಭೆ ಕಟ್ಟಡ(2 ಮತಗಟ್ಟೆ),
ಸುರತ್ಕಲ್-ಗೋವಿಂದದಾಸ ಕಾಲೇಜು(2 ಮತಗಟ್ಟೆ),
ಬಜಪೆ-ಪಂಚಾಯತ್ ಕಟ್ಟಡ,
ಗುರುಪುರ- ಸರಕಾರಿ ಪದವಿಪೂರ್ವ ಕಾಲೇಜು,
ಹಂಪನಕಟ್ಟೆ-ಯುನಿವರ್ಸಿಟಿ ಕಾಲೇಜು ಮಂಗಳೂರು-(5 ಮತಗಟ್ಟೆಗಳು),
ಕೊಣಾಜೆ-ವಿಶ್ವ ಮಂಗಳಾ ಇಂಗ್ಲೀಷ್ ಮೀಡಿಯಂ ಸ್ಕೂಲು, ಕೊಣಾಜೆ,
ಬಬ್ಬುಕಟ್ಟೆ-ದ.ಕ ಜಿಲ್ಲಾ ಪಂಚಾಯತ್ ಹೈಯರ್ ಪ್ರೈಮರಿ ಸ್ಕೂಲ್,
ಬಿ.ಸಿ. ರೋಡ್-ಮಿನಿ ವಿಧಾನ ಸೌಧ ತಾಲೂಕು ಕಟ್ಟಡ,(3 ಮತಗಟ್ಟೆ),
ಬೆಳ್ತಂಗಡಿ-ತಾಲೂಕು ಕಚೇರಿ(2 ಮತಗಟ್ಟೆ),
ಪುತ್ತೂರು-ತಾಲೂಕು ಪಂಚಾಯತ್ ಕಚೇರಿ(2 ಮತಗಟ್ಟೆ),
ಸುಳ್ಯ-ತಾಲೂಕು ಕಚೇರಿ,
ಪಂಜ-ನಾಡ ಕಚೇರಿ.
ಶಿಕ್ಷಕರ ಕ್ಷೇತ್ರ:
ಮುಲ್ಕಿ-ನಗರ ಪಂಚಾಯತ್,
ಮೂಡಬಿದ್ರೆ-ಪುರಸಭೆ ಕಟ್ಟಡ,
ಸುರತ್ಕಲ್-ಗೋವಿಂದದಾಸ ಕಾಲೇಜು,
ಬಜಪೆ-ಪಂಚಾಯತ್ ಕಟ್ಟಡ,
ಗುರುಪುರ-ಸರಕಾರಿ ಪದವಿಪೂರ್ವ ಕಾಲೇಜು,
ಹಂಪನಕಟ್ಟೆ-ಯುನಿವರ್ಸಿಟಿ ಕಾಲೇಜು ಮಂಗಳೂರು-(2 ಮತಗಟ್ಟೆಗಳು),
ಕೊಣಾಜೆ-ವಿಶ್ವ ಮಂಗಳಾ ಇಂಗ್ಲೀಷ್ ಮೀಡಿಯಂ ಸ್ಕೂಲು,
ಬಬ್ಬುಕಟ್ಟೆ-ದ.ಕ ಜಿಲ್ಲಾ ಪಂಚಾಯತ್ ಹೈಯರ್ ಪ್ರೈಮರಿ ಸ್ಕೂಲ್,
ಬಿ.ಸಿ. ರೋಡ್-ಸಾಮಥ್ರ್ಯ ಸೌಧ ತಾಲೂಕು ಪಂಚಾಯತ್ ಕಟ್ಟಡ,
ಬೆಳ್ತಂಗಡಿ-ತಾಲೂಕು ಕಚೇರಿ,
ಪುತ್ತೂರು-ತಾಲೂಕು ಪಂಚಾಯತ್ ಕಚೇರಿ,
ಸುಳ್ಯ-ತಾಲೂಕು ಕಚೇರಿ,
ಪಂಜ-ನಾಡ ಕಚೇರಿ.

ಜೂನ್ 8 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮೇಲ್ಕಾಣಿಸಿರುವ ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕ್ಷೇತ್ರದ ಮತದಾರರ ಪಟ್ಟಿಗಳಲ್ಲಿ ಹೆಸರು ನೋಂದಾಯಿಸಿರುವ ಮತದಾರರು ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ ಮತಗಟ್ಟೆಗಳಿಗೆ ತೆರಳಿ ಮತದಾನವನ್ನು ಮಾಡಬಹುದು. ಅಲ್ಲದೆ ಭಾವಚಿತ್ರವಿರುವ ಗುರುತಿನ ಚೀಟಿ ಇಲ್ಲದವರು ಅಧಿಕೃತ ದಾಖಲೆಗಳಲ್ಲಿ ಯಾವುದಾದರೊಂದನ್ನು ಪತಗಟ್ಟೆಯಲ್ಲಿ ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ.
ನೈರುತ್ಯ ಪದವೀಧರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು: ಅರುಣ್ ಕುಮಾರ್-ಜನತಾದಳ(ಜಾತ್ಯಾತೀತ), ಅಯನೂರು ಮಂಜುನಾಥ್-ಭಾರತೀಯ ಜನತಾ ಪಾರ್ಟಿ, ಎಸ್.ಪಿ. ದಿನೇಶ್- ಕಾಂಗ್ರೆಸ್, ಜಿ.ಸಿ. ಪಟೇಲ್-ಸರ್ವ ಜನತಾ ಪಾರ್ಟಿ, ಜಫರುಲ್ಲಾ ಸತ್ತರ್ ಖಾನ್-ಪಕ್ಷೇತರ, ಜಿ.ಎಂ. ಜಯಕುಮಾರ್-ಪಕ್ಷೇತರ, ಬಿ.ಕೆ. ಮಂಜುನಾಥ-ಪಕ್ಷೇತರ.
ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು: ಕ್ಯಾ. ಗಣೇಶ್ ಕಾರ್ಣಿಕ್-ಭಾರತೀಯ ಜನತಾ ಪಾರ್ಟಿ, ಎಸ್.ಎಲ್. ಬೋಜೆಗೌಡ-ಜನತಾದಳ(ಜಾತ್ಯಾತೀತ), ಕೆ.ಕೆ. ಮಂಜುನಾಥ ಕುಮಾರ್ (ಮಾಸ್ಟರ್)- ಕಾಂಗ್ರೆಸ್, ಡಾ: ಅರುಣ್ ಹೊಸಕೊಪ್ಪ-ಪಕ್ಷೇತರ, ಅಲೋಸಿಯಸ್ ಡಿಸೋಜ-ಪಕ್ಷೇತರ, ಕೆ.ಬಿ. ಚಂದ್ರೋಜಿ ರಾವ್-ಪಕ್ಷೇತರ, ಡಿ.ಕೆ. ತುಳಸಪ್ಪ-ಪಕ್ಷೇತರ, ಅಂಪಾರ ನಿತ್ಯಾನಂದ ಶೆಟ್ಟಿ-ಪಕ್ಷೇತರ, ಪ್ರಭುಲಿಂಗ ಬಿ.ಆರ್.-ಪಕ್ಷೇತರ, ಬಸವರಾಜಪ್ಪ ಕೆ.ಸಿ. – ಪಕ್ಷೇತರ, ಎಂ. ರಮೇಶ-ಪಕ್ಷೇತರ, ರಾಜೇಂದ್ರ ಕುಮಾರ್ ಕೆ.ಪಿ. -ಪಕ್ಷೇತರ.
ಚುನಾವಣೆಯ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಎಲ್ಲಾ ಮತದಾರರು ವಿವರಗಳನ್ನು ಜಞ.ಟಿiಛಿ.iಟಿ ವೆಬ್‍ಸೈಟ್ ನಲ್ಲಿ ಪರಿಶೀಲಿಸಿ ಜೂನ್ 8 ರಂದು ತಮ್ಮ ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಸಹಾಯಕ ಚುನಾವಣಾಧಿಕಾರಿ, ಕರ್ನಾಟಕ ನೈರುತ್ಯ ಪದವೀಧರರ/ಶಿಕ್ಷಕರ ಕ್ಷೇತ್ರ ಹಾಗೂ ದ.ಕ. ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


Spread the love