ವಿನಾಃ ಕಾರಣ ಕೆಲಸ ನಿರಾಕರಣೆ ಹಾಗೂ ಕ್ರಿಮಿನಲ್ ಕೇಸು ದಾಖಲು, ಸಮಗ್ರ ತನಿಖೆಗೆ CITU ಒತ್ತಾಯ
ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾಯಿ ಸೆಕ್ಯುರಿಟಿ ಸಂಸ್ಥೆಯ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ವಿನಾಃ ಕಾರಣ ಕೆಲಸದಿಂದ ವಜಾ ಮಾಡಿರುವುದು,ಮಾತ್ರವಲ್ಲದೆ ಅಮಾಯಕ ಬಡಪಾಯಿ ಕಾರ್ಮಿಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿರುವ ಸಾಯಿ ಸೆಕ್ಯುರಿಟಿ ಸಂಸ್ಥೆ ಹಾಗೂ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಅಧೀಕ್ಷಕಿ ಡಾ.ರಾಜೇಶ್ವರಿಯವರ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು CITU ದ.ಕ.ಜಿಲ್ಲಾ ಸಮಿತಿಯು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಒತ್ತಾಯಿಸಿದೆ.
ಕಳೆದ ಒಂದೂವರೆ ವರ್ಷದಿಂದ ಗುತ್ತಿಗೆ ಕಾರ್ಮಿಕರು ವೆನ್ಲಾಕ್ ಆಸ್ಪತ್ರೆಯಲ್ಲಿ ಪೇಟೆಂಟ್ ಕ್ಯಾರ್ ಸಿಬ್ಬಂದಿಗಳಾಗಿ ದುಡಿಯುತ್ತಿದ್ದರು.ಈತನ್ಮಧ್ಯೆ ತಾ.12-10-2018ರಂದು ಸಂದರ್ಶನದ ನೆಪದಲ್ಲಿ ಬೆಳಿಗ್ಗೆ 10 ಗಂಟೆಗೆ ಬರಬೇಕೆಂದು ಸಾಯಿ ಸೆಕ್ಯುರಿಟಿ ಸಂಸ್ಥೆ ತಿಳಿಸಿತು. ಅಂದು ಸಂಜೆ 4 ಗಂಟೆಯಾದರೂ ಕಾರ್ಮಿಕರನ್ನು ಕೇಳುವವರು ಇಲ್ಲ,ರಾತ್ರಿ ಪಾಳಿಯವರು ಮನೆಗೆ ಹೋಗದೆ,ಊಟ ತಿಂಡಿ ಇಲ್ಲದೆ ಕಾದರೂ ಪ್ರಯೋಜನವಾಗಿಲ್ಲ. ಸಹಜವಾಗಿಯೇ ಕಾರ್ಮಿಕರಿಗೆ ಕೋಪ ಬಂದು ಇದನ್ನು ಪ್ರಶ್ನಿಸಿದ್ದಾರೆ.ಇದನ್ನೇ ನೆಪ ಮಾಡಿ 10 ಮಂದಿ ಕಾರ್ಮಿಕರನ್ನು ಯಾವುದೇ ಮುನ್ಸೂಚನೆ ನೀಡದೆ ವಜಾ ಮಾಡಿದರು.ಈ ಬಗ್ಗೆ ಪ್ರಶ್ನಿಸಲು ಹಾಗೂ ಗುತ್ತಿಗೆ ಕಾರ್ಮಿಕರಿಗೆ ಕಾನೂನುಬದ್ದವಾಗಿ ನೀಡಬೇಕಾದ ಸವಲತ್ತುಗಳ ಬಗ್ಗೆ ಬೇಡಿಕೆ ಸಲ್ಲಿಸಲು ಕಾರ್ಮಿಕರು ಕೇಂದ್ರ ಕಾರ್ಮಿಕ ಸಂಘಟನೆಯಾದ CITU ಅಡಿಯಲ್ಲಿ ಸಂಘಟಿತರಾಗಿ ಜಿಲ್ಲಾ ಅಧೀಕ್ಷಕರಿಗೆ,ಸಾಯಿ ಸೆಕ್ಯುರಿಟಿ ಸಂಸ್ಥೆಗೆ,ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿಯನ್ನು ಅರ್ಪಿಸಿ,ಕೂಡಲೇ ಸ್ಪಂದಿಸಬೇಕೆಂದು ಆಗ್ರಹಿಸಿದರು.
ಸಂಘ ರಚನೆ ಮಾಡಿದ ಏಕೈಕ ಕಾರಣಕ್ಕೆ ಕಾರ್ಮಿಕರ ಮೇಲೆ ದಬ್ಬಾಳಿಕೆ,ಮಾನಸಿಕ ಕಿರುಕುಳ ತೀವ್ರವಾಗಿ ಹೆಚ್ಚಾಯಿತು.ನವೆಂಬರ್ ತಿಂಗಳ ಸಂಬಳ ಕಾನೂನು ಪ್ರಕಾರ 6 ತಾರೀಕಿನ ಒಳಗೆ ನೀಡಬೇಕೆಂದಿದ್ದರೂ,16 ತಾರೀಕಿನವರೆಗೆ ನೀಡಿಲ್ಲ.ಬಳಿಕ ಸಂಬಳ ನೀಡಿದ್ದು,ಅದರಲ್ಲೂ ಸಂದರ್ಶನ ಮಾಡಿದ ದಿನದ ಸಂಬಳವನ್ನು ಕಾರ್ಮಿಕರು ಕೆಲಸ ಮಾಡಿದ್ದರೂ, ಅನಾವಶ್ಯಕವಾಗಿ ಕಟ್ ಮಾಡಲಾಗಿತ್ತು.ಇದನ್ನು ಖಂಡಿಸಿ ಕಾರ್ಮಿಕರು ತಾ.22-11-2018ರಂದು ಶಾಂತಿಯುತವಾಗಿ ಪ್ರತಿಭಟನೆ ಮಾಡಿದಾಗ ಸ್ಥಳಕ್ಕೆ ಧಾವಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಪೋಲೀಸರು ಮದ್ಯೆ ಪ್ರವೇಶಿಸಿ ಒಂದು ದಿನದ ಸಂಬಳವನ್ನು ತೆಗೆಸಿಕೊಡುವಲ್ಲಿ ಹಾಗೂ ವಜಾ ಮಾಡಿದ 10 ಕಾರ್ಮಿಕರ ಬಗ್ಗೆ ತಾ.3-12-2018ರಂದು ಕಾರ್ಮಿಕ ಇಲಾಖೆಯಲ್ಲಿ ಸಭೆ ಕರೆಯುವುದಾಗಿ ತಿಳಿಸಿ,ಎಲ್ಲರೂ ಈ ಕೂಡಲೇ ಕೆಲಸ ನಿರ್ವಹಿಸಬೇಕೆಂದು ಅಧಿಕಾರಿಗಳು ಹೇಳಿದರು.
ಅದರೂ ಜಿಲ್ಲಾ ಅಧೀಕ್ಷಕರು ಹಾಗೂ ಸಾಯಿ ಸೆಕ್ಯುರಿಟಿ ಸಂಸ್ಥೆಯ ಮಾಲಕರು ತದ್ವಿರುದ್ದವಾಗಿ ವರ್ತಿಸಿ ಕಾರ್ಮಿಕರನ್ನು ಕೆಲಸ ನಿರ್ವಹಿಸಲು ಬಿಡದೆ ಉಳಿದ ಎಲ್ಲಾ 67 ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದರು.ಮಾತ್ರವಲ್ಲದೆ ತಮ್ಮದೇ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಅಮಾಯಕ ಬಡಪಾಯಿ ಕಾರ್ಮಿಕರ ಮೇಲೆ ಹಾಗೂ ಕಾರ್ಮಿಕರಿಗೆ ಮಾರ್ಗದರ್ಶನ ನೀಡುತ್ತಿದ್ದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರ ಮೇಲೆ ವಿನಾಃ ಕಾರಣ ಕ್ರಿಮಿನಲ್ ಕೇಸ್ ದಾಖಲಿಸಿರುವುದು ಅಕ್ಷಮ್ಯ ಅಪರಾಧವಾಗಿದೆ ಹಾಗೂ ಕಾರ್ಮಿಕರ ನ್ಯಾಯಯುತ ಹೋರಾಟವನ್ನು ಮುರಿಯಲು ನಡೆಸಿದ ವ್ವವಸ್ಥಿತ ಷಡ್ಯಂತ್ರವಾಗಿದೆ ಎಂದು ಅIಖಿU ಆಪಾದಿಸಿದೆ.
ಈ ಬಗ್ಗೆ ಸಮಗ್ರ ತನಿಖೆ ನಡೆಸಿ,ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು, ಕಾರ್ಮಿಕರಿಗೆ ಮರು ಕೆಲಸ ನೀಡಬೇಕು ಹಾಗೂ ಕಾರ್ಮಿಕರ ಮೇಲಿನ ಕ್ರಿಮಿನಲ್ ಕೇಸನ್ನು ವಜಾಗೊಳಿಸಬೇಕೆಂದು CITU ಮಾನ್ಯ ಜಿಲ್ಲಾಧಿಕಾರಿಗಳಲ್ಲಿ,ಜಿಲ್ಲಾ ಉಸ್ತುವಾರಿ ಸಚಿವರಲ್ಲಿ,ಪೋಲೀಸ್ ಆಯುಕ್ತರಲ್ಲಿ ಆಗ್ರಹಿಸಿದ್ದು,ತಪ್ಪಿದಲ್ಲಿ ಜಿಲ್ಲೆಯಾದ್ಯಂತ ತೀವ್ರ ರೀತಿಯ ಪರಿಣಾಮವನ್ನು ಎದುರಿಸಬೇಕಾದೀತು ಎಂದು CITU ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಎಚ್ಚರಿಕೆ ನೀಡಿದ್ದಾರೆ.
ಜೆ.ಬಾಲಕ್ರಷ್ಣ ಶೆಟ್ಟಿ, CITU, ದ.ಕ.ಜಿಲ್ಲಾಧ್ಯಕ್ಷರು