ವಿಫಲ ಉಸ್ತುವಾರಿ ಸಚಿವ ರೈರಿಂದ ಬೇಜವಾಬ್ದಾರಿ ಹೇಳಿಕೆ: ಕಾರ್ಣಿಕ್ ಖಂಡನೆ
ಮಂಗಳೂರು: ಕಳೆದ 4 ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಯಾವೊಂದು ಸಮಸ್ಯೆಗಳನ್ನು ಪರಿಹರಿಸಲಾಗದ, ಮರಳು ಮಾಫಿಯಾ ಹಾಗೂ ಡ್ರಗ್ಸ್ ಮಾಫಿಯಾದ ಕೈಗೊಂಬೆಯಾಗಿ ವರ್ತಿಸುತಿರುವ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ತಮ್ಮ ಬೇಜವಾಬ್ದಾರಿಯುತ ಹೇಳಿಕೆಗಳಿಂದ ಸಮುದಾಯಗಳ ನಡುವೆ ಸಂಘರ್ಷ ಉಂಟುಮಾಡುತ್ತಿದ್ದು, ಅವರ ಇತ್ತೀಚೆಗಿನ ಹೇಳಿಕೆ ಅವರ ವಿಫಲತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
“ಕೋತಿ ಬೆಣ್ಣೆ ತಿಂದು ಮೇಕೆಯ ಬಾಯಿಗೆ ಒರಸಿದಂತೆ” ತಮ್ಮ ರಾಜಕೀಯ ಅಸ್ಥಿತ್ವಕ್ಕಾಗಿ ತಾವೇ ಸೃಷ್ಠಿಸಿದ ಗೊಂದಲ, ಸಂಘರ್ಷ ಹಾಗೂ ಕಾನೂನು ಸುವ್ಯವಸ್ಥೆಯ ವಿಫಲತೆಗಳನ್ನು ಬಿಜೆಪಿ ಹಾಗೂ ಸಂಘಪರಿವಾರದ ಮೇಲೆ ಹೊರಿಸುವ ಮೂಲಕ ಪೆÇಲೀಸ್ ಇಲಾಖೆ ಮತ್ತು ನ್ಯಾಯಧಿಕರಣದ ತೀರ್ಪು ನೀಡುವ ಪ್ರಯತ್ನಕ್ಕೆ ಮುಂದಾಗಿರುವುದು, ನ್ಯಾಯಾಂಗ ಮತ್ತು ಪೆÇಲೀಸ್ ವ್ಯವಸ್ಥೆಯ ಮೇಲೆ ಅವರಿಗಿರುವ ಅಗೌರವಕ್ಕೆ ಸಾಕ್ಷಿಯಾಗಿದೆ.
ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಕೆಲವು ಕೊಲೆ ಪ್ರಕರಣಗಳು ಇನ್ನೂ ವಿಚಾರಣೆಯ ಹಂತದಲ್ಲಿರುವ ಸಂದರ್ಭದಲ್ಲೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ನೀಡಿದ ಬೇಜವಾಬ್ದಾರಿ ಹೇಳಿಕೆ ಅಕ್ಷೇಪಾರ್ಹ. ಈ ಹಿಂದೆ ತಮ್ಮ ಕ್ಷೇತ್ರದ ಪ್ರವಾಸಿ ಮಂದಿರಕ್ಕೆ ಜಿಲ್ಲೆಯ ಪೆÇಲೀಸ್ ಅಧೀಕ್ಷಕರನ್ನು ಕರೆಸಿ ಅನಗತ್ಯವಾಗಿ ಛೀಮಾರಿ ಹಾಕಿ ವರ್ಗಾವಣೆ ಮಾಡಿಸಿ ಜಿಲ್ಲೆಯಲ್ಲಿ ಪ್ರಕ್ಷುಬ್ದ ವಾತಾವರಣ ಸೃಷ್ಠಿಸಿ ನಿರಂತರ 60 ದಿನಗಳ ಕಾಲ ಸೆಕ್ಷನ್ 144 ಹೇರಲು ಕಾರಣೀಕರ್ತರಾದ ಸನ್ಮಾನ್ಯ ರಮಾನಾಥ ರೈಯವರು ತಮ್ಮ ಬೇಜವಾಬ್ದಾರಿ ಹೇಳಿಕೆಗಳಿಗೆ ಬೇಷರತ್ ಕ್ಷಮೆ ಕೋರುವಂತೆ ಹಾಗೂ ಎಲ್ಲಾ ರಂಗದಲ್ಲಿ ವಿಫಲರಾಗಿರುವ ಹಿನ್ನಲೆಯಲ್ಲಿ ತಕ್ಷಣ ರಾಜೀನಾಮೆ ನೀಡುವಂತೆ ಆಗ್ರಹಿಸುತ್ತೇನೆ. ಜಿಲ್ಲೆಯ ಹಿಂದೂ ಸಮುದಾಯದ ಕಾರ್ಯಕರ್ತರಿಗೆ ರಕ್ಷಣೆ ಒದಗಿಸಲು ವಿಫಲರಾಗಿರುವ ಮಾನ್ಯ ಉಸ್ತುವಾರಿ ಸಚಿವರು ಹಿಂದೂ ಸಂಘಟನೆಗಳ ಮೇಲೆ ಹಾಗೂ ಭಾರತೀಯ ಜನತಾ ಪಾರ್ಟಿಯ ಮೇಲೆ ಗೂಬೆ ಕೂರಿಸುವ ಅವರ ಪ್ರವೃತ್ತಿ ಅತ್ಯಂತ ಖಂಡನೀಯ. ಇದು ಚುನಾವಣೆ ಎದುರಾಗುತ್ತಿರುವ ಈ ಸಂದರ್ಭದಲ್ಲಿ ಅವರ ಹತಾಶ ಮನೋಭಾವನೆ ತೋರಿಸುತ್ತದೆ ಎಂದಿದ್ದಾರೆ.