Home Mangalorean News Kannada News ವಿವೇಕಾನಂದ ರಸ್ತೆ ನಾಮಫಲಕ ಪುನರ್ ಸ್ಥಾಪಿಸುವಂತೆ ಕಾರ್ಣಿಕ್ ಆಗ್ರಹ

ವಿವೇಕಾನಂದ ರಸ್ತೆ ನಾಮಫಲಕ ಪುನರ್ ಸ್ಥಾಪಿಸುವಂತೆ ಕಾರ್ಣಿಕ್ ಆಗ್ರಹ

Spread the love

ವಿವೇಕಾನಂದ ರಸ್ತೆ ನಾಮಫಲಕ ಪುನರ್ ಸ್ಥಾಪಿಸುವಂತೆ ಕಾರ್ಣಿಕ್ ಆಗ್ರಹ

ಮಂಗಳೂರು: ಅದೆಷ್ಟೋ ವರ್ಷಗಳಿಂದ ಮಂಗಳೂರಿನ ಸರ್ಕಿಟ್ ಹೌಸ್ ಕದ್ರಿ ಪಾರ್ಕ್ ರಸ್ತೆಯನ್ನು ವಿವೇಕಾನಂದ ರಸ್ತೆ ಎಂದು ಅಧಿಕೃತವಾಗಿ ದಾಖಲಿಸಿರುವ ರಸ್ತೆಯ ನಾಮ ಫಲಕವನ್ನು ಸ್ವಚ್ಛಗೊಳಿಸಿ, ಹೊಸದಾಗಿ ಅನಾವರಣಗೊಳಿಸುವ ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದರ 154ನೇ ಜನ್ಮದಿನದಂದು ಹಮ್ಮಿಕೊಂಡಿದ್ದು ಶ್ಲಾಘನೀಯ.

ವಿವೇಕಾನಂದ ಜಯಂತಿಯ ಆಚರಣೆಯ ಸುಸಂದರ್ಭದಲ್ಲಿ ಕದಳಿ ಜೋಗಿ ಮಠದ ಪೀಠಾಧಿಪತಿಗಳಿಂದ ಅನಾವರಣಗೊಂಡ ನಗರದ ವಿವೇಕಾನಂದ ರಸ್ತೆಯ ಫಲಕವನ್ನು ಸಾರ್ವಜನಿಕ ಹಿತಾಸಕ್ತಿಯನ್ನು ದಿಕ್ಕರಿಸಿ, ಸಾರ್ವಜನಿಕರ ಭಾವನೆಗಳನ್ನು ಅಗೌರವಿಸಿ, ಅಧಿಕಾರಶಾಹಿಯ ಮೂಲಕ ಕಿತ್ತೆಸೆದಿರುವ ಮೇಯರ್ ರವರ ಕ್ರಮ ಸರ್ವತಾ ಖಂಡನೀಯ. ಇದು ದೇಶದ ಯುವಕರಿಗೆ ಆದರ್ಶವಾಗಿರುವ ಸ್ವಾಮಿ ವಿವೇಕಾನಂದರಿಗೆ ಮಾಡಿದ ಅಪಚಾರವೆಂದು ವಿಧಾನ ಪರಿಷತ್ ವಿರೋಧಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ತಿಳಿಸಿದ್ದಾರೆ. ನಗರ ಪ್ರಥಮ ಪ್ರಜೆಯಾದ ಮಾನ್ಯ ಮಹಾಪೌರರು ಯಾವ ಭ್ರಮೆಯಿಂದ ಈ ಉದ್ದಟತನದ ಕಾರ್ಯ ಎಸಗಿದರು ಎನ್ನುವುದು ಮಂಗಳೂರಿನ ಮಹಾಜನತೆಯನ್ನು ಕಾಡುತ್ತಿರುವ ಪ್ರಶ್ನೆ.

ಈಗಲಾದರೂ ಎಚ್ಚೆತ್ತುಕೊಂಡು ವಿವೇಕಾನಂದರ ಪುಣ್ಯಸ್ಮರಣೆಗೆ ಎಸಗಿದ ಅಪಚಾರವನ್ನು ತಿದ್ಧಿಕೊಂಡು ವಿವೇಕಾನಂದ ರಸ್ತೆ ನಾಮಫಲಕವನ್ನು ಪುನರ್ ಸ್ಥಾಪಿಸುವಂತೆ ಕ್ಯಾಪ್ಟನ್ ಕಾರ್ಣಿಕ್ ರವರು ಆಗ್ರಹಿಸಿದ್ದಾರೆ.


Spread the love

Exit mobile version