Home Mangalorean News Kannada News ವಿಶೇಷ ಅಪರಾಧ ಪತ್ತೆದಳದ ಕಾರ್ಯಚರಣೆ- ಇಬ್ಬರು ಗಾಂಜಾ ವ್ಯಸನಿಗಳ ಬಂಧನ

ವಿಶೇಷ ಅಪರಾಧ ಪತ್ತೆದಳದ ಕಾರ್ಯಚರಣೆ- ಇಬ್ಬರು ಗಾಂಜಾ ವ್ಯಸನಿಗಳ ಬಂಧನ

Spread the love

ವಿಶೇಷ ಅಪರಾಧ ಪತ್ತೆದಳದ ಕಾರ್ಯಚರಣೆ- ಇಬ್ಬರು ಗಾಂಜಾ ವ್ಯಸನಿಗಳ ಬಂಧನ

ಮಂಗಳೂರು: ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಂಪಾಡಿ ಗ್ರಾಮದ ಚನಲ್ ಎಂಬಲ್ಲಿ ಸಮಾಜದಲ್ಲಿ ನಿಷೇಧಿಸಲ್ಪಟ್ಟ ಮಾದಕ ದ್ರವ್ಯ ಗಾಂಜಾವನ್ನು ಸೇವಿಸುತ್ತಿರುವುದಾಗಿ ಮಂಗಳೂರು ನಗರ ಉತ್ತರ ಉಪವಿಭಾಗದ ಎಸಿಪಿ  ಶ್ರೀನಿವಾಸ ಗೌಡ ಆರ್.(ಐಪಿಎಸ್) ನೇತೃತ್ವದ ರೌಡಿ ನಿಗ್ರಹ ದಳಕ್ಕೆ ದೊರೆತ ಖಚಿತ ವರ್ತಮಾನದಂತೆ ಕಾರ್ಯಚರಣೆ ನಡೆಸಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಸದ್ರಿಯವರ ಮೇಲೆ NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬಂಧಿತರನ್ನು ಸುರತ್ಕಲ್ ಮುಕ್ಕ ನಿವಾಸಿ ಮೊಹಮ್ಮದ್ ರಾಜಿಜ್ ಯಾನೆ ರಾಜಿಕ್ (32), ಸುರತ್ಕಲ್ ಚೇಳ್ಯಾರು ನಿವಾಸಿ ನಿಖಿಲ್ (19) ಎಂದು ಗುರುತಿಸಲಾಗಿದೆ.

ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಪೊಲೀಸು ಆಯುಕ್ತರಾದ ಡಾ| ಪಿ.ಎಸ್, ಹರ್ಷ ಐ.ಪಿ.ಎಸ್. ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ-ಆಯುಕ್ತರು (ಕಾ & ಸು) ಅರುಣಾಂಶು ಗಿರಿ ಐ.ಪಿ.ಎಸ್. ಪೊಲೀಸ್ ಉಪ-ಆಯುಕ್ತರು(ಅಪರಾಧ & ಸಂಚಾರ) ಲಕ್ಮೀ ಗಣೇಶ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ . ಶ್ರೀನಿವಾಸ ಗೌಡ ಆರ್ (ಐಪಿಎಸ್) ಇವರ ನೇತೃತ್ವ್ವದಲ್ಲಿ ಪಣಂಬೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಅಜ್ಮತ್ ಅಲಿ ಮತ್ತು ಪೊಲೀಸ್ ಉಪನಿರೀಕ್ಷಕರಾದ ಕುಮಾರೇಶನ್ ಹಾಗೂ ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿ/ಸಿಬ್ಬಂದಿಗಳಾದ ಮೊಹಮ್ಮದ್ ಎ.ಎಸ್.ಐ , ಕುಶಲ ಮಣಿಯಾಣಿ, ಸತೀಶ್ ಎಂ. ಇಸಾಕ್ , ಶರಣ್ ಕಾಳಿ ಮತ್ತು ಪಣಂಬೂರು ಪೊಲೀಸರ ಪರಿಶ್ರಮದಿಂದ ನಡೆದಿರುತ್ತದೆ.


Spread the love

Exit mobile version