Home Mangalorean News Kannada News ವಿಶೇಷ ಆರ್ಥಿಕ ವಲಯದಲ್ಲಿ ವಿದ್ಯುತ್ ಗುತ್ತಿಗೆ ನಿರ್ವಹಿಸುವ ಉಪಕರಣಗಳ ಕಳ್ಳತನ – ಇಬ್ಬರ ಬಂಧನ

ವಿಶೇಷ ಆರ್ಥಿಕ ವಲಯದಲ್ಲಿ ವಿದ್ಯುತ್ ಗುತ್ತಿಗೆ ನಿರ್ವಹಿಸುವ ಉಪಕರಣಗಳ ಕಳ್ಳತನ – ಇಬ್ಬರ ಬಂಧನ

Spread the love

ವಿಶೇಷ ಆರ್ಥಿಕ ವಲಯದಲ್ಲಿ ವಿದ್ಯುತ್ ಗುತ್ತಿಗೆ ನಿರ್ವಹಿಸುವ ಉಪಕರಣಗಳ ಕಳ್ಳತನ – ಇಬ್ಬರ ಬಂಧನ

ಮಂಗಳೂರು: ವಿಶೇಷ ಆರ್ಥಿಕ ವಲಯದಲ್ಲಿ ನಡೆದ ಕಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಜಪೆ ನಿವಾಸಿಗಳಾದ ವಿಜಯ ಯಾನೆ ಬಾಬು ಮತ್ತು ಪುನೀತ್ ಎಂದು ಗುರುತಿಸಲಾಗಿದೆ.
ಸಾರಾಂಶಃ ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ವಿದ್ಯುತ್ ಕೆಲಸಗಳನ್ನು ಗುತ್ತಿಗೆ ಆಧಾರದಲ್ಲಿ ನಿರ್ವಹಿಸುವ ಇವಿಯೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಸಂಬಂಧಿಸಿದ ವಿದ್ಯುತ್ ಗುತ್ತಿಗೆ ನಿರ್ವಹಿಸುವ ಉಪಕರಣಗಳನ್ನು ಅಲ್ಲಿಯೇ ತಾತ್ಕಾಲಿಕ ಶೆಡ್ ನಲ್ಲಿ ಬೀಗ ಹಾಕಿ ಇರಿಸಿದ್ದು ದಿನಾಂಕ 20.08.2019 ರಂದು ರಾತ್ರಿವೇಳೆ ಯಾರೋ ಕಳ್ಳರು ಶೆಡ್ಡಿನ ಬೀಗ ಮುರಿದು ವಿವಿಧ ಅಳತೆಯ ಒಟ್ಟು 601 ಕೇಬಲ್ ಗ್ಲಾಂಡ್ ಗಳನ್ನು ಕಳವು ಮಾಡಿದ್ದು ಪ್ರಕರಣ ದಾಖಲಾಗಿತ್ತು.

ಖಚಿತ ವರ್ತಮಾನದ ಮೇರೆಗೆ ದಿನಾಂಕ 16-09-19 ರಂದು ರಾತ್ರಿ 20-00 ಗಂಟೆಗೆ ಮೆಲ್ಲಾರಿನಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಅವರುಗಳಿಂದ ಸುಮಾರು ರೂ. 80,000/- ಮೌಲ್ಯದ 278 ಕೇಬಲ್ ಗ್ಲಾಂಡ್ ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಕೆಎ 19 ಎ 6463 ಪಿಕ್ ಅಪ್ ವಾಹನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಆರೋಪಿ ಶಾಂತಿಗುಡ್ಡೆಯ ಶಮೀರ್ ಎಂಬಾತನನ್ನು ದಿನಾಂಕ 25-8-19 ರಂದು ದಸ್ತಗರಿ ಮಾಡಿ ಆತನಿಂದ 30 ಕೇಬಲ್ ಗ್ಲಾಂಡ್ ಗಳನ್ನು ಮತ್ತು ಒಂದು ಪಿಕ್ ಅಪ್ ವಾಹನ ವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಆರೋಪಿಗಳ ಪತ್ತೆ ಬಗ್ಗೆ ಸುಮಾರು ಒಂದು ತಿಂಗಳಿನಿಂದ ಶ್ರಮ ಪಟ್ಟಿದ್ದು ಈ ಕಾರ್ಯಾಚರಣೆಯಲ್ಲಿ ಬಜಪೆ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಕೆ.ಆರ್. ನಾಯಕ್, ಪಿ.ಎಸ್.ಐ ರವರುಗಳಾದ ಶ್ರೀ ಸತೀಶ್ ಎಂ.ಪಿ, ಶ್ರೀಮತಿ ಕಮಲ, ಸಹಾಯಕ ಉಪನಿರೀಕ್ಷಕರಾದ ಶ್ರೀ ರಾಮ ಪೂಜಾರಿ, ಹೆಚ್.ಸಿ. ಗಳಾದ ಚಂದ್ರಮೋಹನ್, ರಾಜೇಶ್, ಸುಧೀರ್ ಶೆಟ್ಟಿ, ಸಂತೋಷ್ ಸುಳ್ಯ, ಪಿಸಿಗಳಾದ ಮಂಜುನಾಥ, ವಕೀಲ ಲಮಾಣಿ, ಮೋಹನರವರು ಭಾಗವಹಿಸಿದ್ದರು.


Spread the love

Exit mobile version