Home Mangalorean News Kannada News ವಿಶೇಷ ಉಪನ್ಯಾಸಕಾರ್ಯಕ್ರಮ- ಸಸ್ಯಶಾಸ್ತ್ರ ವಿಭಾಗ

ವಿಶೇಷ ಉಪನ್ಯಾಸಕಾರ್ಯಕ್ರಮ- ಸಸ್ಯಶಾಸ್ತ್ರ ವಿಭಾಗ

Spread the love

ವಿಶೇಷ ಉಪನ್ಯಾಸಕಾರ್ಯಕ್ರಮ – ಸಸ್ಯಶಾಸ್ತ್ರ ವಿಭಾಗ

 

ಮೂಡಬಿದಿರೆ: “ನಮ್ಮ ಗುರಿಯ ಬಗೆಗಿನ ಸ್ಪಷ್ಟ ನಿಲುವು ನಮ್ಮಲ್ಲಿದ್ದರೆ, ಯಾರೂ ನಮ್ಮನ್ನು ತಡೆದು ನಿಲ್ಲಿಸಲಾರರು. ಯಾವ ತೊಂದರೆ ಎದುರಾದರೂ ನಾವು ಅದನ್ನು ಸಾಧಿಸಿಯೇ ತೀರುತ್ತೇವೆ” ಎಂದು ಬೆಂಗಳೂರಿನ ಕಾóನ್ವೆಂಕ್ ಲೈಫ್ ಸ್ಕಿಲ್ಸ್ ಸಂಸ್ಥೆಯ ಸಂಸ್ಥಾಪಕ ಡಾ. ಆರ್. ನಂದಕುಮಾರ್ ಅಭಿಪ್ರಾಯಪಟ್ಟರು.

ಆಳ್ವಾಸ್ ಕಾಲೇಜಿನ ಪದವಿ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ಸೋಮವಾರ `ಜೈವಿಕ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗಿರುವ ಉದ್ಯೋಗ ಅವಕಾಶಗಳು’ ಎಂಬ ವಿಷಯದ ಕುರಿತು ಆಯೋಜಿಸಿದ್ದ ಅತಿಥಿಉಪನ್ಯಾಸಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ನಾವು ಉದ್ಯೋಗವನ್ನು ಅರಸಿ ಹೋಗುವಾಗ ಮೂರು ವಿಷಯಗಳ ಮೇಲೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಒಂದು ನಮಗಿರುವ ಉದ್ಯೋಗ ಅವಕಾಶಗಳು, ಎರಡು ಅದರಲ್ಲಿ ಯಾವುದು ನಮಗೆ ಸೂಕ್ತವೆನಿಸುತ್ತದೆ ಮತ್ತು ಮೂರು ಅದನ್ನು ಪಡೆಯುವುದು ಹೇಗೆ. ಈ ಮೂರು ವಿಷಯಗಳನ್ನು ನಾವು ಸಮರ್ಥವಾಗಿ ನಿಭಾಯಿಸಿದ್ದಲ್ಲಿ ನಮ್ಮ ಇಚ್ಛೆಯ ಕೆಲಸದಲ್ಲಿ ತೊಡಗಿಕೊಳ್ಳುವುದು ಕಷ್ಟಕರವಲ್ಲ” ಎಂದು ತಿಳಿಸಿದರು.

ಉದ್ಯೋಗಕ್ಕೂ ಮುನ್ನ ಇರಲಿ ಈಸ್

“ವಿಜ್ಞಾನದಲ್ಲಿ ಪದವಿ ಪಡೆದ ನಂತರ ಮುಂದಿನ ಜೀವನ ರೂಪಿಸಿಕೊಳ್ಳಲು ನಮಗೆ ಸಾಕಷ್ಟು ಅವಕಾಶಗಳಿರುತ್ತವೆ. ಪೈಪೋಟಿಯ ಜೀವನದಲ್ಲಿ ಸ್ಪರ್ಧೆಯ ಜತೆಗೆ ಅವಕಾಶಗಳು ವಿಸ್ತಾರಗೊಳ್ಳುತ್ತಿವೆ. ಅದರ ಬಗೆಗಿನ ಅರಿವಿನ ಕೊರತೆ ನಮ್ಮಲ್ಲಿದೆ ಅಷ್ಟೇ. ಯಾವುದೇ ಉದ್ಯೋಗಕ್ಕೆ ಹೋಗುವ ಮುನ್ನ ಎಲ್ಲಾ ವಿದ್ಯಾರ್ಥಿಗಳು `ಈಸ್’ ಬಗ್ಗೆ ಗಮನ ನೀಡಬೇಕು. ಅಂದರೆ ನಮ್ಮ  ಆರ್ಥಿಕಸ್ಥಿತಿ, ಮನೋವರತ್ತಿ, ಸಂರಕ್ಷಣೆ ಹಾಗೂ ಪ್ರಯತ್ನ. ಈ ವಿಷಯಗಳ ಆಧಾರದಲ್ಲಿ ನಮ್ಮ ಆಯ್ಕೆ ನಿರ್ಧಾರವಾಗಬೇಕು” ಎಂದು ಹೇಳಿ ಪದವಿ ವಿಜ್ಞಾನದ ನಂತರ ಇರುವ ವಿಫುಲ ಅವಕಾಶಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ “ಮುಂದಿನ ದಿನಗಳಲ್ಲಿ ಆಹಾರ ಮತ್ತು ನೀರಿನ ಸಮಸ್ಯೆಗಳು ಅಗಾಧವಾಗಿ ನಮ್ಮನ್ನು ಎದುರುಗೊಳ್ಳಲಿವೆ. ಅದರ ಬಗೆಗೆ ಹೆಚ್ಚು ಆಸ್ಥೆ ವಹಿಸುವುದು ಅನಿವಾರ್ಯ. ಸಸ್ಯಶಾಸ್ತ್ರ ಈ ಎಲ್ಲಾ ಸಮಸ್ಯೆಗಳ ಪರಿಹಾರೋಪಾಯವಾಗಿದೆ. ಹಾಗಾಗಿ ಅದರಲ್ಲಿ ಹೆಚ್ಚೆಚ್ಚು ಸಂಶೋಧನೆಗಳು ಜರುಗಬೇಕು” ಎಂದರು.

ಕಾರ್ಯಕ್ರಮದಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ರಮ್ಯರೈ. ಪಿ. ಡಿ ಹಾಗೂ ಮತ್ತಿತ್ತರ ಉಪನ್ಯಾಸಕರು ಉಪಸ್ಥಿತರಿದ್ದರು. ಪದವಿ ವಿದ್ಯಾರ್ಥಿಗಳಾದ ನಯನಾ ನಿರೂಪಣೆ ನಿರ್ವಹಿಸಿದರೆ, ನೃತ್ಯ ಸ್ವಾಗತಿಸಿ, ಮನಸ್ವಿ ವಂದಿಸಿದರು.

ಬಾಕ್ಸ್‍ಐಟಮ್:

ಉದ್ಯೋಗ ಅರಸುವ ಮುನ್ನ ಸೂಕ್ತ ಯೋಜನೆ ಇರಲಿ. ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಂಡಲ್ಲಿ ಅವು ನಮ್ಮ ತಿಳುವಳಿಕೆಗೆ ಉತ್ತಮ ಆಯಾಮ ಒದಗಿಸಲಿದೆ.


Spread the love

Exit mobile version