ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂದಕುಮಾರ್ ಮಂಗಳೂರು ಕಚೇರಿಗೆ ಭೇಟಿ
ಮಂಗಳೂರು: ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಂದಕುಮಾರ್ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ವಿಶ್ವಕರ್ಮ ನಿಗಮದ ಕಚೇರಿಗೆ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು ವಿಶ್ವಕರ್ಮ ಸಮಾಜದ ಬಂದುಗಳ ಜೊತೆಯಲ್ಲಿ ನಿಗಮದ ಸಾಲ ಸೌಲಭ್ಯಗಳ ಬಗ್ಗೆ ಚರ್ಚಿಸಿದರು . ಮಹಿಳಾ ಸ್ವ ಸಹಾಯ ಸಂಘಗಳಿಗೆ ಹೆಚ್ಚಿನ ರೀತಿಯಲ್ಲಿ ಸಾಲದ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು .ನಿಗಮದಿಂದ ಅರಿವು ವಿದ್ಯಾಭ್ಯಾಸದ ಕಾರ್ಯಕ್ರಮವನ್ನು ಪ್ರತಿ ಗ್ರಾಮಗಳಿಗೆ ತಲುಪಿಸಿ ವಿಶ್ವಕರ್ಮ ಸಮಾಜದ ಮಕ್ಕಳಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಕೊಡುವಂತೆ ಸಲಹೆಯನ್ನು ನೀಡಿದರು .ಚಿನ್ನ ಬೆಳ್ಳಿ ಕೆಲಸಗಾರರಿಗೆ ,ಮರಗೆಲಸ ಮಾಡುವವರಿಗೆ ,ಶಿಲ್ಪಿ ಕೆಲಸ ಮಾಡುವವರಿಗೆ ನಗರ ,ತಾಲೂಕು ಹಾಗು ಗ್ರಾಮಗಳಲ್ಲಿ ಕೌಶಲ್ಯತರಬೇತಿ ಕೇಂದ್ರದಿಂದ ತರಬೇತಿ ಪಡೆದು ಟ್ರೈನಿಂಗ್ ಸರ್ಟಿಫೀಕೆಟ್ಸ್ ಪಡೆದು ನಿಗಮಕ್ಕೆ ನೀಡಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಸಲಹೆಯನ್ನು ನೀಡಿದರು.
ಮಂಗಳೂರಿನ ವಿಶ್ವಕರ್ಮ ಯುವ ಮಿಲನ್(ರೀ)ನ ರಾಜ್ಯಾಧ್ಯಕ್ಷರಾದ ವಿಕ್ರಂ ಐ ಆಚಾರ್ಯರವರು , ಮಂಗಳೂರಿನ ಚಿನ್ನ ಬೆಳ್ಳಿ ಸಂಘದ ಹಾಲಿ ಅಧ್ಯಕ್ಷರು ಮತ್ತು ಮಾಜಿ ಅಧ್ಯಕ್ಷರಾದ ಮೋಹನ್ ಕುಮಾರ್ ಬೆಳ್ಳೂರು ,ಉಪಾಧ್ಯಕ್ಷರಾದ ಕೆ .ಎಲ್ .ಹರೀಶ್, ನಿಗಮದ ಜಿಲ್ಲೆಯ ವ್ಯವಸ್ಥಾಪಕರಾದ ರಾಮಮೂರ್ತಿ ಮಯ್ಯ ಉಪಸ್ಥಿತರಿದ್ದರು.