ವಿಶ್ವವಿಖ್ಯಾತ ತ್ರಾಸಿ ಸಮುದ್ರದಲ್ಲಿ ಟೂರಿಸ್ಟ್ ಬೋಟ್ ಪಲ್ಟಿ: ರೈಡರ್ ನಾಪತ್ತೆ

Spread the love

ವಿಶ್ವವಿಖ್ಯಾತ ತ್ರಾಸಿ ಸಮುದ್ರದಲ್ಲಿ ಟೂರಿಸ್ಟ್ ಬೋಟ್ ಪಲ್ಟಿ: ರೈಡರ್ ನಾಪತ್ತೆ

ಕುಂದಾಪುರ: ವಿಶ್ವವಿಖ್ಯಾತ ತ್ರಾಸಿ ಅರಬ್ಬಿ ಸಮುದ್ರದಲ್ಲಿ ಟೂರಿಸ್ಟ್ ಬೋಟ್ ಒಂದು ಪಲ್ಟಿಯಾದ ಪರಿಣಾಮ ಬೋಟ್ ರೈಡರ್ ನಾಪತ್ತೆಯಾಗಿದ್ದು, ಪ್ರವಾಸಿಗ ಪವಾಡಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಶನಿವಾರ ಸಂಜೆ ತ್ರಾಸಿಯಲ್ಲಿ ನಡೆದಿದೆ.

ಘಟನೆ ವೇಳೆ ಲೈಫ್ ಜಾಕೆಟ್ ಧರಿಸಿದ್ದರಿಂದ ಪ್ರವಾಸಿಗ ಪ್ರಶಾಂತ್ ಬಚಾವ್ ಆಗಿದ್ದಾರೆ. ಬೋಟ್ ರೈಡ್ ನಡೆಸುತ್ತಿದ್ದ ರೈಡರ್ ಪ್ರಸ್ತುತ ತ್ರಾಸಿಯಲ್ಲಿ ನೆಲೆಸಿದ್ದು ಮೂಲತಃ ಕಾರವಾರ ಜಿಲ್ಲೆಯ ಮುರ್ಡೇಶ್ವರದ ರೋಹಿದಾಸ್ (41) ನಾಪತ್ತೆಯಾಗಿದ್ದಾರೆ.

ತ್ರಾಸಿ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರ ಸಮೀಪದ ಅನುಗ್ರಹ ಬಾರ್ ಸಮೀಪ ಅರಬ್ಬಿ ಸಮುದ್ರದ ಕಡಲ ಕಿನಾರೆಯ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಸಮುದ್ರದ ಮೋಜನ್ನು ತೋರಿಸಲು ಖಾಸಗಿ ಟೂರಿಸ್ಟ್ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿಥತು. ಶನಿವಾರ ಸಂಜೆ ಬೆಂಗಳೂರು ಮೂಲದ ಪ್ರಶಾಂತ್ (25 ) ಎನ್ನುವ ಪ್ರವಾಸಿಗ ಟೂರಿಸ್ಟ್ ಬೋಟಿನಲ್ಲಿ ಬೋಟಿಂಗ್ ನಡೆಸುತ್ತಿರುವಾಗ ಆಕಸ್ಮಿಕವಾಗಿ ಬಂದ ಭಾರಿ ಗಾತ್ರದ ಅಲೆಯಲ್ಲಿ ಬೋಟ್ ಆಯಾ ತಪ್ಪಿ ಪಲ್ಟಿ ಆಗಿದೆ. ಪರಿಣಾಮ ಪ್ರವಾಸಿಗ ಹಾಗೂ ರೈಡರ್ ಇಬ್ಬರೂ ನೀರಿಗೆ ಬಿದ್ದಿದ್ದಾರೆ .

ನಾಪತ್ತೆಯಾದ ರವಿದಾಸ್ ಅವರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಗಂಗೊಳ್ಳಿ ಪೊಲೀಸ್ ಠಾಣೆ, ಕರಾವಳಿ ಪೊಲೀಸ್ ಕಾವಲು ಪಡೆಯ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments