ವಿಶ್ವಸಂಸ್ಥೆಯ ಯುವ ಕಾರ್ಯಕ್ರಮ ಕ್ಕೆ ಮಂಗಳೂರು ಮೂಲದ ರಘುವೀರ್ ಸೂಟರ್‌ಪೇಟೆ ಭಾಗಿ
ಮಂಗಳೂರು: ಇಂಡೋನೇಶ್ಯದಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ವತಿಯಿಂದ ಆಯೋಜಿಸಲ್ಪಡುವ ಯುವ ಕಾರ್ಯಕ್ರಮ ಕ್ಕೆ ಮಂಗಳೂರು ಮೂಲದ ರಘುವೀರ್ ಸೂಟರ್‌ಪೇಟೆಯವರು ಭಾಗವಹಿಸಿದ್ದಾರೆ. ಇವರ ಆಯ್ಕೆಯು ಕರ್ನಾಟಕ ಮಾತ್ರವಲ್ಲದೆ ಮಂಗಳೂರಿನ ಜನತೆಯೂ ಹೆಮ್ಮೆಪಡುವಂತಹ ಸಂತಸದ ವಿಷಯವಾಗಿದೆ.
ಅಂತರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮ ದಲ್ಲಿ ಭಾಗವಹಿಸಲು ಭಾರತ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ಭಾರತ ಸರಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿರುವ ನೆಹರು ಯುವ ಕೇಂದ್ರವು ಭಾರತದಿಂದ ಯುವಕರನ್ನು ಆಯ್ಕೆಮಾಡಿರುವುದು.17-11-2017 to 18-12-2017ಈ ಒಂದು ತಿಂಗಳ ಅವಧಿಯ ಕಾರ್ಯಕ್ರಮ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಇಂಡೋನೇಶ್ಯ, ನೇತೃತ್ವದಲ್ಲಿ ಹಮ್ಮಿಕೊಂಡಿರುವುದು. ಯುವ ಸಬಲೀಕರಣ ಹಾಗು ಸ್ವಯಂ ಸೇವಕತ್ವದ ಬಗ್ಗೆ ವಿಚಾರ ವಿನಿಮಯದ ಬಗ್ಗೆ ಪ್ರೋತ್ಸಾಹಿಸಲು ಈ ಸಮ್ಮೇಳನವನ್ನು ಹಮ್ಮಿಕೊಂಡಿರಿರುವುದರ ಮೂಲ ಉದ್ದೇಶ. ಪ್ರಸ್ತುತ ಕಾರ್ಯಕ್ರಮ ಇಂಡೋನೇಶ್ಯದ ಜಕಾರ್ತದಲ್ಲಿ ನಡೆಯಲಿರುವುದು.
- ಈಯುವವಿನಿಮಯಸಮ್ಮೇಳನದಲ್ಲಿಭಾರತೀಯಮತ್ತುಇಂಡೋನೇಷ್ಯಾದಲ್ಲಿನಯುವಮತ್ತುಸ್ವಯಂಸೇವಕತೆಯಸಮಾನಮತ್ತುವಿಭಿನ್ನಭೂದೃಶ್ಯಗಳನ್ನುಪರಿಚಯಿಸುತ್ತಿದೆ.
- ಇಂಡೋನೇಷ್ಯಾದಲ್ಲಿನಸ್ವಯಂಸೇವಕರಸಾಂಪ್ರದಾಯಿಕ ಸ್ವರೂಪಮತ್ತುಇತ್ತೀಚಿನಯುವ-ನೇತೃತ್ವದಸ್ವಯಂಸೇವಕತೆಯ ವಿವಿಧನಾವೀನ್ಯತೆಗಳ ಬಗ್ಗೆ ಮಾಹಿತಿ ಪಡೆಯುವುದು.
- ಎರಡೂ ದೇಶಗಳಲ್ಲಿನ ಸ್ವಯಂಸೇವಕತೆಯ ಉತ್ತಮ ಆಚಾರಗಳನ್ನು ಮತ್ತು ಮೂಲಭೂತ ಸೌಕರ್ಯವನ್ನು ಸುಧಾರಿಸಲು ಶಿಫಾರಸುಗಳ ಬಗ್ಗೆ ಹಂಚಿಕೊಳ್ಳುವುದು.
ರಘುವೀರ್ ಸೂಟರ್‌ಪೇಟೆ ಯವರು ಸಾಮಾಜಿಕ ಕಾರ್ಯಕರ್ತ ಹಾಗು ಸಕ್ರಿಯ ಯುವ ನಾಯಕನಾಗಿದ್ದು, ದೀನ ಜನರ ಧ್ವನಿಯೂ ಆಗಿರುವರು. ಕಳೆದ 9 ವರ್ಷಗಳಿಂದಲೂ ಇವರು ಯುವ ಸಂಘಟನೆಯನ್ನು ಬಲಪಡಿಸುವ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಇದೀಗ ಅವರ ಸಂಪೂರ್ಣ ಶ್ರಮದಾಯಕ ಕೆಲಸವು ಈ ಅಂತರಾಷ್ಟ್ರೀಯ ಕಾರ್ಯಕ್ರಮ ಅರ್ಹತೆಯನ್ನು ಪಡೆಯಲು ಅವರಿಗೆ ಸಹಕಾರಿಯಾಗಿರುವುದು.
ಸಾಧನೆ ಮತ್ತು ಪ್ರಶಂಸೆಗಳು:
ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕದೊಂದಿಗೆ ಉತ್ತಮ ಎನ್.ಸಿ.ಸಿ ಕ್ಯಾಡೆಟ್ ಪ್ರಶಸ್ತಿಯನ್ನು ಪಡೆದಿರುವರು.
ಮಂಗಳೂರಿನ ಎನ್.ವೈ.ಸಿ (ನ್ಯಾಷನಲ್ ಯೂತ್ ಕಾರ್ಪ್) ಆಗಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರದ. ನೆಹರೂ ಯುವ ಕೇಂದ್ರದೊಂದಿಗೆ ಸೇವೆಯನ್ನು ನಿರ್ವಹಿಸಿರುವರು.