Home Mangalorean News Kannada News ವಿಶ್ವಾಸ್ ಮಣಿಪಾಲ ಮಾರಕ ಸ್ಪಿನ್ ಧಾಳಿಗೆ ನಲುಗಿದ ಮ್ಯಾಸ್ಟ್ರೋ–ಕೋಸ್ಟಲ್ ಡೈಜೆಸ್ಟ್ ಎಂಪಿಎಲ್ ಚಾಂಪಿಯನ್

ವಿಶ್ವಾಸ್ ಮಣಿಪಾಲ ಮಾರಕ ಸ್ಪಿನ್ ಧಾಳಿಗೆ ನಲುಗಿದ ಮ್ಯಾಸ್ಟ್ರೋ–ಕೋಸ್ಟಲ್ ಡೈಜೆಸ್ಟ್ ಎಂಪಿಎಲ್ ಚಾಂಪಿಯನ್

Spread the love

ವಿಶ್ವಾಸ್ ಮಣಿಪಾಲ ಮಾರಕ ಸ್ಪಿನ್ ಧಾಳಿಗೆ ನಲುಗಿದ ಮ್ಯಾಸ್ಟ್ರೋ–ಕೋಸ್ಟಲ್ ಡೈಜೆಸ್ಟ್ ಎಂಪಿಎಲ್ ಚಾಂಪಿಯನ್
ಮಂಗಳೂರು: ಇಲ್ಲಿನ ಬಿ.ಆರ್. ಆಂಬೇಡ್ಕರ್ ಕ್ರೀಡಾಂಗಣದಲ್ಲಿ ಜರಗುತ್ತಿರುವ ಅಲ್ಮುಝೈನ್ ವೈಟ್‍ಸ್ಟೋನ್ ಮಂಗಳೂರು ಪ್ರೀಮಿಯರ್ ಲೀಗಿನ ಶುಕ್ರವಾರದಂದು ಜರಗಿದ ಅಂತಿಮ ಪಂದ್ಯದಲ್ಲಿ ನಾಣ್ಯ ಚಿಮ್ಮುಗೆಯನ್ನು ಜಯಿಸಿದ ಮ್ಯಾಸ್ಟ್ರೋ ತಂಡವು ಬ್ಯಾಟಿಂಗಿಗಿಳಿಯಿತು. ಮ್ಯಾಸ್ಟ್ರೋತಂಡದಆರಂಭಕಾರರಾದರೋಹನ್‍ಕದಂ ಮತ್ತು ವಿಶ್ವನಾಥನ್‍ರವರು ಮುಕ್ಕ ಎಕ್ಸ್‍ಪ್ರೆಸ್‍ಅರಿಫ್ ಮುಕ್ಕರವರ ಪ್ರಥಮ ಓವರಿನಲ್ಲಿಯೇ ವಿಕೇಟುಗಳನ್ನು ಒಪ್ಪಿಸಿದಾಗ ತಂಡವು 8 ರನ್‍ಗಳಿಗೆ ಎರಡು ವಿಕೇಟುಗಳನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಯಿತು.

mpl-cricket-final

ಈ ಹಂತದಲ್ಲಿ ತಂಡದ ನಾಯಕ ಅಕ್ಷಯ್ ಬಲ್ಲಾಳ್ ತನ್ನ ಎಂದಿನ ಬಿರುಸಿನ ಆಟವನ್ನು ಪ್ರದರ್ಶಿಸಿ 20 ಚೆಂಡುಗಳಲ್ಲಿ 3 ಭರ್ಜರಿ ಸಿಕ್ಸರ್ ಮತ್ತು ಮೂರು ಬೌಂಡರಿಗಳುಳ್ಳ 41 ರನ್ ಗಳಿಸಿ ತಂಡಕ್ಕೆ ಆಧಾರವಾಗಿ ನಿಂತರು. ಈ ಹಂತದಲ್ಲಿ ಕೋಸ್ಟಲ್ ನಾಯಕ ಜಾಣ್ಮೆಯಿಂದ ಎಡಗೈ ಸ್ಪಿನ್ನರ್ ವಿಶ್ವಾಸ್ ಮಣಿಪಾಲರವರನ್ನು ಬೌಲಿಂಗಿಗೆ ತಂದರು. ತನ್ನ ಮೇಲಿನ ವಿಶ್ವಾಸವನ್ನು ಸುಳ್ಳು ಮಾಡದ ವಿಶ್ವಾಸ್‍ರವರು ಮೂರನೆ ಚೆಂಡಿನಲ್ಲಿ ಮ್ಯಾಸ್ಟ್ರೋ ತಂಡದ ಬೆನ್ನೆಲುಬು ಅಕ್ಷಯ್ ಬಲ್ಲಾಳ್‍ರವರನ್ನು ಕ್ಲೀನ್ ಬೌಲ್ಡ್ ಮೂಡಿ ಪಂದ್ಯಕ್ಕೆ ಮುಖ್ಯತಿರುವನ್ನು ನೀಡಿದರು.

ಆ ನಂತರ 11ನೆಯ ಓವರಿನಲ್ಲಿ ರಜತ್ ಹೆಗ್ಡೆ 7 ರನ್‍ಗಳಿಸಿ ರನ್ ಔಟ್‍ಗೆ ಬಲಿಯಾದರು. ವಿಶ್ವಾಸ್‍ರವರ ಸ್ಪಿನ್ ಮೋಡಿಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾದ ಕಾರ್ತಿಕ್‍ರವರು ಖಾತೆಯನ್ನು ತೆರೆಯುವ ಮೊದಲೇ ಅವರಿಗೆ ಎಲ್ ಬಿ ಡಬ್ಲ್ಯು ಆಗಿ ಮರಳಿದರು. ವಿಶ್ವಾಸ್‍ರವರು 4 ಓವರುಗಳಲ್ಲಿ 17 ರನ್‍ಗಳ ವೆಚ್ಚಕ್ಕೆ 3 ವಿಕೇಟುಗಳನ್ನು ಪಡೆದರು. ಹನ್ನೆರಡನೆಯ ಓವರಿನಲ್ಲಿ ವಿಶ್ವಾಸ್‍ತನ್ನ ಮಾರಕ ಬೌಲಿಂಗನ್ನು ಮುಂದುವರಿಸಿ ಅಶ್ವಿನ್‍ರವರನ್ನು ಕ್ಲೀನ್ ಬೌಲ್ಡ್ ಮೂಡಿದಾಗ ತಂಡ ಗಳಿಸಿದ ಮೊತ್ತ 82 ಮಾತ್ರ. ತಂಡ 14ನೆಯ ಓವರಿನಲ್ಲಿ 100ರ ಗಡಿ ಮುಟ್ಟಿದಾಗ 8 ವಿಕೇಟುಗಳು ಪತನ ಹೊಂದಿದ್ದವು. ಇನ್ನೊಂದೆಡೆಯಲ್ಲಿ ತನ್ನ ಬೌಲಿಂಗ್ ಧಾಳಿಯನ್ನು ನಡೆಸಿದ ಶ್ರೀಷರವರು ಮ್ಯಾಸ್ಟ್ರೋ ತಂಡದ ಎರಡು ವಿಕೇಟುಗಳನ್ನು ಕಿತ್ತು ಹೊಡೆತ ನೀಡಿದರು. ಮ್ಯಾಸ್ಟ್ರೋ ತಂಡವು 17.5 ಓವರುಗಳಲ್ಲಿ 119 ರನ್‍ಗಳಿಗೆ ಸರ್ವ ಪತನವನ್ನು ಕಂಡಿತು.

ಬಲಿಷ್ಟ ಬ್ಯಾಟಿಂಗ್ ಪಡೆಯನ್ನು ಹೊಂದಿರುವಕೋಸ್ಟಲ್‍ತಂಡವು ಪಡೆದ ವಿಜಯದಗುರಿ ಸುಲಭಸಾಧ್ಯವೆಂದುಕಂಡಿತಾದರೂ, ಮಹಮ್ಮದ್‍ತಾಹ, ಸತ್ಯ ಸ್ವರೂಪ್ ಮತ್ತುಆದಿತ್ಯ ಸೋಮಣ್ಣರವರ ಮೂರು ವಿಕೇಟುಗಳು ತಂಡದ ಮೊತ್ತ 25 ರನ್‍ಗಳಾಗುವಷ್ಷರಲ್ಲಿ ಧರೆಗುಳಿದಾಗ ಕೋಸ್ಟಲ್‍ತಂಡದ ಪಾಳಯದಲ್ಲಿ ತಳಮಳ ಉಂಟಾಯಿತು. ಆಪಾಯವನ್ನರಿತರಿಷಬ್‍ರಕ್ಷಣಾತ್ಮಕಆಟಕ್ಕೆತೊಡಗಿ ವಿಕೇಟ್ ಪತನಕ್ಕೆತಡೆಒಡ್ಡಿದಾಗತಂಡ 8 ಓವರುಗಳಲ್ಲಿ 42 ಓಟಗಳನ್ನು ಗಳಿಸಿತ್ತು. ರನ್ನಿನ ಓಘಕ್ಕೆ ವೇಗವನ್ನು ನೀಡಬೇಕಾದಅಗತ್ಯವನ್ನು ಮನಗಂಡರಿಷಬ್ ಮತ್ತುರಿತೇಶ್ ಭಟ್ಕಳ ಜೋಡಿಯು ಪ್ರತಿಯೊಂದುಎಸೆತವನ್ನುತೂಗಿ ನೋಡಿಜವಾಬ್ದಾರಿಯುತವಾಗಿಆಡುತ್ತಾಮೊತ್ತವನ್ನು 83ಕ್ಕೆ ತಂದಾಗರನ್‍ಔಟ್‍ಗಾಗಿನ ಮನವಿಯೊಂದುತೃತೀಯತೀರ್ಪುಗಾರರ ಬಳಿಗೆ ಹೋಗಿ ನಾಟೌಟ್‍ಎಂದುಘೋಷಣೆಯಾಗಿಕೋಸ್ಟಲ್ ಪಾಳಯ ನಿರಾಳತೆಯನ್ನು ಹೊಂದಿತು. ಕೋಸ್ಟಲ್‍ತಂಡಕ್ಕೆಕೊನೆಯ 30 ಚೆಂಡುಗಳಲ್ಲಿ 25 ಓಟಗಳನ್ನು ಗಳಿಸಬೇಕಾದ ಅವಶ್ಯಕತೆಎದುರಾಗಿತ್ತು.ತಂಡದ ಮೊತ್ತ 100ರಲ್ಲಿ 37 ರನ್‍ಗಳಿಸಿದ ರಿತೇಶ್ ಭಟ್ಕಳ್‍ರವರು ವಿಕೇಟ್‍ಕೀಪರ್‍ಗೆಕ್ಯಾಚ್ ನೀಡಿಅಭಿಲಾಷ್‍ರವರಿಗೆ ವಿಕೇಟ್ ಒಪ್ಪಿಸಿದರು. ರಿಷಬ್‍ರವರದಾಂಡಿನಿಂದಅರ್ಧ ಶತಕ ಮೂಡಿಬಂದಾಗಕ್ರೀಡಾಂಗಣದಲ್ಲಿ ನೆರೆದಿದ್ದ ಸುಮಾರು 20000 ಮಂದಿ ಪ್ರೇಕ್ಷಕರಿಂದ ಹರ್ಷೋದ್ಗಾರ ಕೇಳಿ ಬಂತು. ತಂಡವು 9 ಚೆಂಡುಗಳು ಬಾಕಿ ಇರುವಂತೆರಜತ್‍ರವರದಾಂಡಿನಿಂದ ಮೂಡಿಬಂದ ವಿಜಯದ ಹೊಡೆತದಿಂದ 6 ವಿಕೇಟುಗಳ ಅಂತರದಜಯವನ್ನು ದಾಖಲಿಸಿತು.
ಪಂದ್ಯದಆರಂಭದಲ್ಲಿ ಪಂದ್ಯಕೂಟದ ಪ್ರಾಯೋಜಕರುಗಳಾದ ಅಲ್ಮುಝೈನ್‍ಕಂಪನಿಯಝಾಖಾರಿಯಾಜೋಕಟ್ಟೆ, ರಿಯಲ್‍ಟೆಕ್‍ಕಂಪನಿಯಇಸ್ಮಾಯಿಲ್, ಶುಕೂರು ಸಾಹೇಬ್ ಶಂಕರಪುರ, ಕರ್ನಾಟಕರಾಜ್ಯಕ್ರಿಕೆಟ್ ಸಂಸ್ಥೆಯ ಮನೋಹರ್‍ಅಮೀನ್, ಚೆಯರ್‍ಮ್ಯಾನ್ ಸಿರಾಜುದ್ಧೀನ್, ಕನ್ವೀನರ್‍ಇಮ್ತಿಯಾಝ್ ಮೊದಲಾದವರುಎರಡು ತಂಡಗಳ ಆಟಗಾರರನ್ನು ಪರಿಚಯಿಸಿಕೊಂಡರು.

ಸ್ಕೋರ್ ವಿವರ: ಮ್ಯಾಸ್ಟ್ರೋಟೈಟಾನ್ 119 ಆಲೌಟ್ (17.5 ಓವರುಗಳು) ಅಕ್ಷಯ್ ಬಲ್ಲಾಳ್ 41, ಲೋಕೇಶ್ 20, ಸಿನಾನ್ 10, ಅರಿಫ್ ಮುಕ್ಕ 2-0-30-2, ವಿಶ್ವಾಸ್ 4-0-17-3, ಶ್ರೀಷ 2-0-14-1, ರಿತೇಶ್ ಭಟ್ಕಳ್ 4-0-25-1

ಕೋಸ್ಟಲ್‍ಡೈಜೆಸ್ಟ್ : 120ಕ್ಕೆ 4,ರಿಷಬ್‍ಅಜೇಯ 52ರಿತೇಶ್ ಭಟ್ಕಳ್ 37,ಅಕ್ಷಯ್ ಬಲ್ಲಾಳ 4-0-18-2, ರಜತ್ ಹೆಗ್ಡೆ 2-0-14-1


Spread the love

Exit mobile version