ವಿಶ್ವ ಕೊಂಕಣಿ ಕೇಂದ್ರಕ್ಕೆ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಭೇಟಿ

Spread the love

ವಿಶ್ವ ಕೊಂಕಣಿ ಕೇಂದ್ರಕ್ಕೆ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಭೇಟಿ

ಮಂಗಳೂರು: ಶ್ರೀ ಧಾಬೊಲಿ ಮಠದ ಕಿರಿಯ ಸ್ವಾಮೀಜಿ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರು ವಿಶ್ವ ಕೊಂಕಣಿ ಕೇಂದ್ರ ಶಕ್ತಿನಗರ ಮಂಗಳೂರು ಇಲ್ಲಿ ಭೇಟಿ ನೀಡಿದರು. ವಿಶ್ವ ಕೊಂಕಣಿ ಕೇಂದ್ರ ಗ್ರಂಥಾಲಯ, ಕೀರ್ತಿ ಮಂದಿರ (ಹಾಲ್ ಆಫ್ ಪೇಮ್), ವಸ್ತು ಸಂಗ್ರಹಾಲಯ (ಮ್ಯೂಸಿಯಮ್), ಆಡಿಟೋರಿಯಮ್, ಸೆಮಿನಾರ್ ಹಾಲ್, ಡಿಜಿಟೈಜೇಶನ್, ಲ್ಯಾಂಗವೇಜ್ ಲ್ಯಾಬ್, ಹಾಸ್ಟೇಲ್ ಬ್ಲಾಕ್ ಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತು ವಿಶ್ವ ಕೊಂಕಣಿ ಕೇಂದ್ರವು ಹಮ್ಮಿಕೊಂಡಿರುವ ಅಭಿವೃದ್ಧಿ ಬಗ್ಗೆ ಹಾಗೂ ಕೈಗೊಂಡ ಕಾರ್ಯಗಳ ಬಗ್ಗೆ ಮತ್ತು “ವಿಶ್ವ ಕೊಂಕಣಿ ಕೇಂದ್ರವು ರೂಪಿಸಿರುವ “ವಿಶನ್ ಕೊಂಕಣಿ -2030” ಕುರಿತಾಗಿ ಹಾಗೂ ಮಾತೃಭಾಷೆ ರಕ್ಷಣೆಮಾಡುವಲ್ಲಿ ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈಯವರ ಕಾರ್ಯ ಚಟುವಟಿಕೆ ಹಾಗೂ ಕೊಡುಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರವಚನ ನೀಡಿ ಆಶೀರ್ವದಿಸಿದರು.

ಶ್ರೀ ಬಸ್ತಿ ವಾಮನ ಶೆಣೈಯವರು ಸ್ವಾಗತಿಸಿ ವಿಶ್ವ ಕೊಂಕಣಿ ಕೇಂದ್ರ ಸ್ಥಾಪಸಿದ ಮಹತ್ವದ ಉದ್ದೇಶಗಳ ಬಗ್ಗೆ ವಿವರಣೆ ನೀಡಿದರು. ವಿಶ್ವ ಕೊಂಕಣಿ ಕೇಂದ್ರ ಉಪಾಧ್ಯಕ್ಷ ಶ್ರೀ ಎಲೆನ್ ಸಿ. ಎ. ಪಿರೇರಾ ಮತ್ತು ಶ್ರೀ ವೆಂಕಟೇಶ ಎನ್. ಬಾಳಿಗಾ, ಕೋಶಾಧ್ಯಕ್ಷ ಶ್ರೀ ಬಿ. ಆರ್. ಭಟ್, ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ಅಧ್ಯಕ್ಷ ಶ್ರೀ ಕೆ. ಬಿ. ಖಾರ್ವಿ, ಕೊಂಕಣಿ ಭಾಷಾ ಮಂಡಳದ ಅಧ್ಯಕ್ಷೆ ಶ್ರೀಮತಿ ಗೀತಾ ಸಿ. ಕಿಣಿ, ಕಾರ್ಯದರ್ಶಿ ಶ್ರೀಮತಿ ಮೀನಾಕ್ಷಿ ಎನ್. ಪೈ, ಶ್ರೀ ದಿನೇಶ್ ಶೇಟ್, ಶ್ರೀ ಎಂ. ಆರ್. ಕಾಮತ್, ಶ್ರೀ ಧಾಬೋಲಿ ಮಠದ ಟ್ರಸ್ಟಿ ಶ್ರೀ ಎಮ್. ಎಮ್. ಪ್ರಭು, ಕುಡಾಲ ದೇಶಸ್ಥ ಆದ್ಯಗೌಡ ಬ್ರಾಹ್ಮಣ ಸಂಘ ಪೂರ್ಣಾನಂದ ಪ್ರತಿಷ್ಠಾನ ಅಧ್ಯಕ್ಷ ಶ್ರೀ ಡಿ. ರಮೇಶ್ ನಾಯಕ್, ಕಾರ್ಯದರ್ಶಿ ಶ್ರೀಮತಿ ವಿಜಯಲಕ್ಷ್ಮಿ, ಹಿರಿಯರಾದ ವಗ್ಗ ಮಾಧವ ಪ್ರಭು, ಸಿ. ಎ. ಶ್ರೀ ಗಿರಿಧರ ಕಾಮತ್, ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಶ್ರೀ ಬಿ. ಪ್ರಭಾಕರ ಪ್ರಭು, ವಿಶ್ವ ಕೊಂಕಣಿ ಕೇಂದ್ರ ಭಾಷಾ ಸಂಸ್ಥಾನ ಸಹಾಯಕ ನಿರ್ದೇಶಕ ಶ್ರೀ ಗುರುದತ್ತ ಬಂಟ್ವಾಳಕರ ಹಾಗೂ ಮತ್ತಿತರ ಗಣ್ಯರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ಹಾಗೂ ನೆರೆದ ಸಭಿಕರು ಶ್ರೀ ಶ್ರೀ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಕುಡಾಲ್ ದೇಶಸ್ಥ ನೇತಾರ ಶ್ರೀ ಸಂಜಯ್ ಪ್ರಭು ಧನ್ಯವಾದ ಸಮರ್ಪಿಸಿದರು.


Spread the love