ವಿಶ್ವ ಕೊಂಕಣಿ ಕೇಂದ್ರ : ‘ಕ್ಷಮತಾ ಯು ಗೆಟ್ ಇನ್’ 5 ನೇ ಶಿಬಿರ ಸಮಾರೋಪ ಸಮಾರಂಭ
ವಿಶ್ವ ಕೊಂಕಣಿ ಕೇಂದ್ರ ವತಿಯಿಂದ ಕ್ಷಮತಾ ವಿದ್ಯಾರ್ಥಿ ಮಾರ್ಗದರ್ಶಿ ಯೋಜನೆಯಡಿಯಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಹಾಗೂ ಪದವೀಧರರಿಗೆ ಉದ್ಯೋಗ ಸಾಮಥ್ರ್ಯಕ್ಕೆ ಸಹಾಯವಾಗುವಂತೆ ಮುಂಬಯಿ ಜ್ಯೋತಿ ಲ್ಯಾಬೊರೆಟರೀಸ ಸಂಸ್ಥೆ (ಉಜಾಲಾ) ಜಂಟಿ ಆಡಳಿತ ನಿರ್ದೇಶಕ ಹಾಗೂ ಸಿ. ಇ. ಒ. ಶ್ರೀ ಉಲ್ಲಾಸ ಕಾಮತ್ ಇವರ ಸಹಕಾರದಿಂದ ಜರುಗುವ ‘ಕ್ಷಮತಾ ಯು ಗೆಟ್ ಇನ್’ 2018 ನೇ ಸಾಲಿನ 5 ನೇ ಶಿಬಿರದ ಸಮಾರೋಪ ಸಮಾರಂಭ ದಿ. 08-12-2018 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.
ಈ ಕಾರ್ಯಕ್ರಮವು ‘ವಿಶನ್ ಟಿ. ವಿ. ಎಮ್ 2030’ ಪೂರಕವಾಗಿದ್ದು ದ.ಕ ಜಿಲ್ಲೆ ಯ ಬೇರೆ ಬೇರೆ ಕಾಲೇಜುಗಳಿಂದ 65 ವಿದ್ಯಾರ್ಥಿಗಳು ದಾಖಲಾಗಿದ್ದರು. ವಿಶ್ವ ಕೊಂಕಣಿ ಕೇಂದ್ರ ಸ್ಥಾಪಕ ಅಧ್ಯಕ್ಷ ಶ್ರೀ ಬಸ್ತಿ ವಾಮನ ಶೆಣೈ ಕಾರ್ಯಕ್ರಮದ ಅಧ್ಯಕತೆ ವಹಿಸಿದ್ದರು, ಒಟ್ಟು 6 ದಿನಗಳು ಜರುಗುವ ಈ ತರಬೇತಿ ಶಿಬಿರ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನದಲ್ಲಿ ತುಂಬಾ ಉಪಯೊಗವಾಗಲಿದೆ ಎಂದರು. ಮುಖ್ಯ ಅತಿಥಿಗಳಾಗಿ ಹೆಸರಾಂತ ಕನ್ನಡ- ಕೊಂಕಣಿ ಲೇಖಕ ಶ್ರೀ ಜಯಂತ ಕಾಯ್ಕಿಣಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಕಳ ಶ್ರೀ ಭುವನೇಂದ್ರ ವಿದ್ಯಾಶಾಲಾ ಕರೆಸ್ಪಾಂಡೆಂಟ್ ಶ್ರೀ ನಿತ್ಯಾನಂದ ಪೈ, ‘ಕ್ಷಮತಾ ಅಕಾಡೆಮಿ’ ಸಂಚಾಲಕ ಸಿ. ಎ. ಶ್ರೀ ಗಿರಿಧರ ಕಾಮತ, ವಿಶ್ವ ಕೊಂಕಣಿ ಭಾಷಾ ಸಂಸ್ಥಾನ ನಿರ್ದೇಶಕ ಶ್ರೀ ಗುರುದತ್ತ ಬಂಟ್ವಾಳಕಾರ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಶಿಬಿರದಲ್ಲಿ ಜರುಗಿದ ವಿವಿಧ ಚಟುವಟಿಕೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಣೆ ಮಾಡಿದರು.