Home Mangalorean News Kannada News ವಿಶ್ವ ಕೊಂಕಣಿ ಕೇಂದ್ರ ‘ಕ್ಷಮತಾ ಅಕಾಡೆಮಿ’125ನೇ ಶಿಬಿರದ ಸಮಾರೋಪ

ವಿಶ್ವ ಕೊಂಕಣಿ ಕೇಂದ್ರ ‘ಕ್ಷಮತಾ ಅಕಾಡೆಮಿ’125ನೇ ಶಿಬಿರದ ಸಮಾರೋಪ

Spread the love

ವಿಶ್ವ ಕೊಂಕಣಿ ಕೇಂದ್ರ ‘ಕ್ಷಮತಾ ಅಕಾಡೆಮಿ’125ನೇ ಶಿಬಿರದ ಸಮಾರೋಪ

ಮಂಗಳೂರು: ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿ ವತಿಯಿಂದ ಇಂಜಿನಿಯರಿಂಗ ಮತ್ತು ಮೆಡಿಕಲ್ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ಪಡೆಯುವ ವಿದ್ಯಾರ್ಥಿಗಳಿಗೆ “ಕ್ಷಮತಾ ಅಕಾಡೆಮಿ” ಯೋಜನೆಯಡಿಯಲ್ಲಿ ತರಬೇತಿ ಶಿಬಿರಗಳನ್ನು ಏರ್ಪಡಿಸುತ್ತದೆ. ದಿ. 25-12-2016 ರಂದು “ಕ್ಷಮತಾ ಅಕಾಡೆಮಿ” 125 ನೇ ಶಿಬಿರದ ಸಮಾರೋಪ ಸಮಾರಂಭ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.

ವಿಶ್ವ ಕೊಂಕಣಿ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವಿಸ್ ಚೆಯರ್‍ಮೆನ  ಟಿ. ವಿ. ಮೋಹನದಾಸ ಪೈ ಶಿಬಿರಾರ್ಥಿಗಳನ್ನು ಕುರಿತು “ಜಗತ್ತು ಯಾಂತ್ರಿಕತೆಯತ್ತ ವೇಗದಿಂದ ಸಾಗುತ್ತಲಿದೆ. ಇದರಿಂದಾಗಿ ಹಲವಾರು ಮುಂದಿನ ದಿನಗಳಲ್ಲಿ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ನಾವು ಈಗಲೇ ಬೇಕಾಗುವ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಮತ್ತು ತಾಂತ್ರಿಕ ಮತ್ತು ವೈದ್ಯಕೀಯ ಪದವೀಧರರು ಅಮೇರಿಕಾದಂತಹ ಉಚ್ಛ ಶಿಕ್ಷಣದ ಸೌಲಭ್ಯಗಳುಳ್ಳ ದೇಶಗಳತ್ತ ದೃಷ್ಟಿ ಹರಿಸಬೇಕು ಅಲ್ಲಿ 50% ವಿದ್ಯಾರ್ಥಿವೇತನ ಸಿಗುವ ಸೌಲಭ್ಯಗಳೂ ಇವೆ. ಅಷ್ಟಲ್ಲದೇ ಇತರ ಅತ್ಯಾಧುನಿಕ ತಾಂತ್ರಿಕ ವಿಷಯಗಳ ಮತ್ತು ಸೌಲಭ್ಯಗಳನ್ನು ಕೈಗೂಡಿಸಿಕೊಳ್ಳಲು ನಾವು ಸನ್ನದ್ಧರಾಗುವ ಅಭ್ಯಾಸವನ್ನೂ ಮಾಡಬೇಕು”ಎಂದು ಕಿವಿಮಾತು ಹೇಳಿದರು.

ಮುಂಬಯಿ ಜ್ಯೋತಿ ಲ್ಯಾಬೊರೆಟರೀಸ ಸಂಸ್ಥೆ (ಉಜಾಲಾ) ಜಂಟಿ ಆಡಳಿತ ನಿರ್ದೇಶಕ ಹಾಗೂ ಸಿ. ಇ. ಒ. ಉಲ್ಲಾಸ ಕಾಮತ್ ಇವರು ವಿದ್ಯಾರ್ಥಿಗಳು ಸರಳ ಜೀವನ ಕ್ರಮವನ್ನು ಮೈಗೂಡಿಸಿಕೊಳ್ಳಬೇಕು. ಹೊರಗಡೆ ಏನಾಗುತ್ತದೆ ಎಂದು ಚಿಂತಿಸುವ ಬದಲಿಗೆ ನೀವು ಇವತ್ತು ಏನಾಗಿದ್ದೀರಿ ಎಂಬುವುದನ್ನು ಮನನ ಮಾಡುತ್ತಾ ಮುಂದುವರೆದರೆ ನಾಳೆಗಳನ್ನು ಎದುರಿಸುವ ಸಾಮಥ್ರ್ಯವನ್ನು ಪಡೆಯುವಿರಿ. ಮತ್ತು ಜೀವನವನ್ನು ಆನಂದದಿಂದ ಕಳೆಯುವಿರಿ. ಜೀವನದಲ್ಲಿ ಬದ್ಧತೆ ಮತ್ತು ಸಮರ್ಪಣಾಭಾವವುಳ್ಳವರನ್ನೇ ಕೆಲಸಕ್ಕಾಗಿ ನೇಮಕಮಾಡಿಕೊಳ್ಳುತ್ತಾರಲ್ಲದೇ ಬರೇ ಬುದ್ಧಿವಂತರೆನಿಸಿಕೊಂಡವರನ್ನಲ್ಲ ಇದನ್ನು ನೆನಪಿನಲ್ಲಿಟ್ಟು ಮುಂದುವರೆಯಬೇಕು ಎಂದು ಭೋಧಿಸಿದರು.

ಮುಂಬಯಿ “ಆನಂದರತಿ” ಸಂಸ್ಥೆಯ  ಸಂದೀಪ್ ಶೆಣೈ, ಶಿಬಿರ ಸಂಚಾಲಕ ಸಿ. ಎ. ಗಿರಿಧರ ಕಾಮತ್ ಮತ್ತು ಎಮ್. ಎನ್. ಪೈ, ಪ್ರದೀಪ್ ಶೆಣೈ ಕಾಪು, ಬಸ್ತಿ ಮಾಧವ ಶೆಣೈ, ವಿಶ್ವ ಕೊಂಕಣಿ ಭಾಷಾ ಸಂಸ್ಥಾನ ಸಹಾಯಕ ನಿರ್ದೇಶಕ ಗುರುದತ್ತ ಬಂಟ್ವಾಳಕಾರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಶಿಬಿರದಲ್ಲಿ ಪಡೆದ ಅನುಭವಗಳನ್ನು ಜರುಗಿದ ವಿವಿಧ ಚಟುವಟಿಕೆಗಳ ಬಗ್ಗೆ ತಿಳಿಸಿದರು.


Spread the love

Exit mobile version