ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್ ಹೊಲಿಗೆ ತರಬೇತಿ ಸಮಾಪನ ಹಾಗೂ ಹೊಲಿಗೆ ಯಂತ್ರ ವಿತರಣೆ
ಮಂಗಳೂರು : ಕೊಂಕಣಿ ಭಾಸ ಆನಿ ಸಂಸ್ಕøತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು ವತಿಯಿಂದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗುವ “ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್” 6 ನೇ ಪಂಗಡದ “ಹೊಲಿಗೆ ತರಬೇತಿ ಸಮಾಪನಗೊಂಡಿತು.
ವಿಶ್ವ ಕೊಂಕಣಿ ಕೇಂದ್ರ ಸ್ಥಾಪಕ ಅಧ್ಯಕ್ಷ ಶ್ರೀ ಬಸ್ತಿ ವಾಮನ ಶೆಣೈ ಮಾತನಾಡಿ ಶಿಬಿರಾರ್ಥಿಗಳಾದ ಎಲ್ಲಾ ಮಹಿಳೆಯರು ಹೊಲಿಗೆ ತರಬೇತಿ ಶಿಬಿರದಲ್ಲಿ ಕಲಿತ ವಿದ್ಯೆಯನ್ನು ಮುಂದುವರೆಸಿಕೊಂಡು ಹೋಗಿ ಮುಂದೆ ತಾನೇ ಸ್ವತಃ ತಮ್ಮ ಜೀವನದಲ್ಲಿ ಸ್ವ ಉದ್ಯೋಗ ಪ್ರಾರಂಭಿಸಿ ಆರ್ಥಿಕವಾಗಿ ಮುಂದೆ ಬಂದು ಸಬಲರಾಗಬೇಕು ಎಂದು ಹೇಳಿದರು.
ಬಳಿಕ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹೊಲಿಗೆ ಯಂತ್ರ ಹಸ್ತಾಂತರಿಸಲಾಯಿತು. ದಾನಿ ಎಂ. ಪಿ. ಭಟ್, ನಿವೃತ್ತ ಮುಖ್ಯ ಆಡಳಿತ ಅಧಿಕಾರಿ, ಕಾರ್ಪೊರೇಶನ್ ಬ್ಯಾಂಕ ಇವರು ತಮ್ಮ ಉದಾರ ಕೊಡುಗೆ ನೀಡಿದ್ದಾರೆ.
ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಿಬಿರದಲ್ಲಿ ಜರುಗಿದ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು. ‘ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್’ ಸಂಚಾಲಕಿ ಗೀತಾ ಸಿ. ಕಿಣಿ ಯವರು ಕಾರ್ಯಾಗಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.