ವಿಶ್ವ ಬಂಟರ ಸಮ್ಮೇಳನ: ಹಸಿರು ಹೊರೆಕಾಣಿಕೆ ಸಮರ್ಪಣೆ
ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅ.28-29 ರಂದು ಜರುಗುವ ವಿಶ್ವ ಬಂಟರ ಸಮ್ಮೇಳನ-2023 ರ ಪೂರ್ವಭಾವಿಯಾಗಿ ಹಸುರು ಹೊರೆಕಾಣಿಕೆ ಸಮರ್ಪಣೆ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ 48 ಬಂಟರ ಸಂಘಟನೆಯ ಪ್ರತಿನಿಧಿಗಳು ಈ ಹಸಿರು ಹೊರೆಕಾಣಿಕೆಯಲ್ಲಿ ಭಾಗವಹಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನಗರದ ಜೋಡುಕಟ್ಟೆಯಲ್ಲಿ ಹೊರೆಕಾಣಿಕೆ ಸಮರ್ಪಣೆಗೆ ಚಾಲನೆ ನೀಡಿದರು.
ಜೋಡುಕಟ್ಟೆಯಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದವರೆಗೆ ಹಸಿರು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಸಾಗಿತು. ಮೂರು ಜಿಲ್ಲೆಗಳಿಂದ ಸಾವಿರಾರು ಮಂದಿ ಬಂಟ ಸಮುದಾಯದ ಬಂಧುಗಳು ಭಾಗವಹಿಸದ್ದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜತೆ ಕಾರ್ಯದರ್ಶಿ ಚಂದ್ರಹಾಸ್ ಡಿ ಶೆಟ್ಟಿ, ವಿಶ್ವ ಬಂಟರ ಕ್ರೀಡಾಕೂಟದ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರು, ಸಹಸಂಚಾಲಕ ಡಾ ರೋಶನ್ ಕುಮಾರ್ ಶೆಟ್ಟಿ, ಹೊರೆಕಾಣಿಕೆ ಸಮಿತಿಯ ಸಾಯಿಣಾಥ ಶೆಟ್ಟಿ ಶಿರ್ವ, ಕಾಪು ವಾಸುದೇವ ಶೆಟ್ಟಿ, ಉದ್ಯಮಿ ಪುರುಷೋತ್ತಮ್ ಪಿ ಶೆಟ್ಟಿ, ಜಯರಾಜ್ ಹೆಗ್ಡೆ, ಶಿವಪ್ರಸಾದ್ ಹೆಗ್ಡೆ ಹಿರೇಬೆಟ್ಟು, ಮನೋಹರ್ ಶೆಟ್ಟಿ ತೋನ್ಸೆ, ಬೈಕಾಡಿ ಸುಪ್ರಸಾದ್ ಶೆಟ್ಟಿ, ನಾಗೇಶ್ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು