Home Mangalorean News Kannada News ವಿಶ್ವ ಮಲ್ಲಕಂಬ ಚಾಂಪಿಯನ್‍ಶಿಪ್: ಆಳ್ವಾಸ್‍ನ ವೀರಭದ್ರ ಮುದೋಳ್ ಆಯ್ಕೆ ಕರ್ನಾಟಕದಿಂದ ಮೊದಲ ಬಾರಿ ಆಯ್ಕೆಯಾದ ಏಕೈಕ...

ವಿಶ್ವ ಮಲ್ಲಕಂಬ ಚಾಂಪಿಯನ್‍ಶಿಪ್: ಆಳ್ವಾಸ್‍ನ ವೀರಭದ್ರ ಮುದೋಳ್ ಆಯ್ಕೆ ಕರ್ನಾಟಕದಿಂದ ಮೊದಲ ಬಾರಿ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಹೆಗ್ಗಳಿಕೆ

Spread the love

ವಿಶ್ವ ಮಲ್ಲಕಂಬ ಚಾಂಪಿಯನ್‍ಶಿಪ್: ಆಳ್ವಾಸ್‍ನ ವೀರಭದ್ರ ಮುದೋಳ್ ಆಯ್ಕೆ ಕರ್ನಾಟಕದಿಂದ ಮೊದಲ ಬಾರಿ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಹೆಗ್ಗಳಿಕೆ

ಮೂಡುಬಿದಿರೆ: ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ವಿಶ್ವ ಮಲ್ಲಕಂಬ ಚಾಂಪಿಯನ್‍ಶಿಪ್‍ಗೆ ಭಾರತದಿಂದ 6 ಮಂದಿ ಆಯ್ಕೆಯಾಗಿದ್ದು, ಕರ್ನಾಟಕದಿಂದ ಆಳ್ವಾಸ್ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿ ವೀರಭದ್ರ ಮುದೋಳ್ ಆಯ್ಕೆಯಾಗಿದ್ದಾರೆ. ಕರ್ನಾಟಕದಿಂದ ಮೊತ್ತಮೊದಲ ಬಾರಿ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಫೆಬ್ರವರಿ 16 ಮತ್ತು 17 ರಂದು ಮುಂಬೈಯ ದಾದರ್‍ನಲ್ಲಿ ನಡೆಯಲಿರುವ ಚಾಂಪಿಯನ್‍ಶಿಪ್‍ನಲ್ಲಿ ಒಟ್ಟು 12 ರಾಷ್ಟ್ರಗಳು ್ಲ ಪಾಲ್ಗೊಳ್ಳಲಿದ್ದು, ಭಾರತೀಯ ಮಲ್ಲಕಂಬಪಟುಗಳಿಗೆ ಫೆಬ್ರವರಿ 11ರಿಂದ 15ರವರೆಗೆ ಹೈದರಬಾದ್‍ನಲ್ಲಿ ವಿಶೇಷ ತರಬೇತಿ ಶಿಬಿರ ನಡೆಯಲಿದೆ. ಕರ್ನಾಟಕದಿಂದ ವೀರಭದ್ರ ಸೇರಿ ಮಧ್ಯ ಪ್ರದೇಶದಿಂದ ಇಬ್ಬರು, ಮಹಾರಾಷ್ಟ್ರದಿಂದ ಇಬ್ಬರು ಹಾಗೂ ತಮಿಳುನಾಡಿನಿಂದ ಓರ್ವ ಮಲ್ಲಕಂಬಪಟು ಆಯ್ಕಾಯಾಗಿದ್ದಾರೆ.

ಕರ್ನಾಟಕದಿಂದ ಆಯ್ಕೆಯಾಗಿರುವ  ವೀರಭದ್ರ ಅವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ. ಮಲ್ಲಕಂಬ ವಿಭಾಗದಲ್ಲಿ ಒಟ್ಟು 75 ಮಂದಿ ವಿದ್ಯಾರ್ಥಿಗಳು ಉಚಿತವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ ವೀರಭದ್ರ ಕೂಡ ಒಬ್ಬರು.

ಆಳ್ವಾಸ್ ಹೋಮಿಯೋಪತಿ ಕಾಲೇಜಿನಲ್ಲಿ ಕಾನ್ಸರ್ ಜಾಗೃತಿ ಕಾರ್ಯಾಗಾರ

ಮೂಡುಬಿದಿರೆ: ಹಿಂದೆ ಔಷದಿ ಇಲ್ಲದ ಮಾರಣಾಂತಿಕ ಕಾಯಿಲೆ ಎಂದು ಕುಖ್ಯಾತಿಯನ್ನು ಪಡೆದಿದ್ದ ಕಾನ್ಯರ್‍ಗೆ ಹೋಮಿಯೋಪತಿ ಔಷದಿ ಸಹಿತ ಆಧುನಿಕ ಆರೋಗ್ಯ ಸೇವೆಯಲ್ಲಿ ಔಷಧಿಗಳು ಲಭ್ಯವಾಗುತ್ತಿವೆ. ಕಾನ್ಸರ್‍ಗೆ ನಿವಾರಣೆಗೆ ಇರುವ ಹೋಮಿಯೋಪತಿ ಔಷದಿ ಬಗ್ಗೆ ಜಾಗೃತಿ ಮೂಡಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಎಂದು ಆಳ್ವಾಸ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಅಸಿಸ್ಟೆಂಟ್ ಅಡ್ಮಿಸ್ರೆಟಿವ್ ಅಧಿಕಾರಿ ಡಾ. ಪ್ರಜ್ಞಾ ಆಳ್ವ ತಿಳಿಸಿದರು.

ಆಳ್ವಾಸ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಮೆಡಿಕಲ್ ವಿಭಾಗ ಮತ್ತು ತೃತೀಯ ವರ್ಷದ ಬಿ.ಹೆಚ್.ಎಮ್.ಎಸ್ ವಿಧ್ಯಾರ್ಥಿಗಳ ಜಂಟಿ ಆಶ್ರಯದಲ್ಲಿ ಹೋಮಿಯೋಪತಿ ಮಹತ್ವ ಮತ್ತು ಕ್ಯಾನ್ಸರ್ ಎಂಬ ಕಾರ್ಯಾಗಾರದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸ್ತನ ಕ್ಯಾನ್ಸರ್, ಜಠರದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಮೆದೋಜೀರಕ ಕ್ಯಾನ್ಸರ್, ವಿಷಯದ ಮೇಲೆ ಸೆಮಿನಾರ್ ಮತ್ತು ಐ ಆಮ್ ಐ ವಿಲ್ ಎಂಬ ವಿಷಯದ ಮೇಲೆ ಫೈಟ್ ಕ್ಯಾನ್ಸರ್, ಯು ಆರ್ ಫೂಲ್ ಇಫ್ ಯು ತಿಂಕ್,ನೆವರ್ ಬಿ ಆಸ್ನೆನ್‍ಮೆಡ್ ಎಂಬ ವಿಭಿನ್ನ ಥೀಮ್ ಮೇಲೆ ಪೋಸ್ಟರ್ ಮೇಕಿಂಗ್ ಸ್ಪಧೆಗಳು ನಡೆದವು.


Spread the love

Exit mobile version