ವಿಹಿಂಪ ವತಿಯಿಂದ ಜನಾಗ್ರಹ ಸಭೆ ಪ್ರಚಾರಾರ್ಥ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಬಿಡುಗಡೆ
ಉಡುಪಿ: ವಿಶ್ವ ಹಿಂದೂ ಪರಿಷತ್ ವತಿಯಿಂದ ಡಿಸೆಂಬರ್ 2 ರಂದು ಜನಾಗ್ರಹ ಸಭೆ ನಡೆಯಲಿದೆ. ಅದರ ಪ್ರಚಾರಾರ್ಥ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಬಿಡುಗಡೆ ಸಮಾರಂಭ ಬುಧವಾರ ಶ್ರೀ ಕೃಷ್ಣ ಮಠದ ಯಾತ್ರಿ ನಿವಾಸದಲ್ಲಿ ನಡೆಯಿತು.
ಪ್ರಾಂತ ಸಂಚಾಲಕ ಕೆ.ಆರ್.ಸುನೀಲ್ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಬದುಕುತ್ತಿರುವ ನಾವು ಹೊಂದಿಕೊಳ್ಳುವುದು ಅನಿವಾರ್ಯ ವಾಗಿದೆ ಎಂದರು.
ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಡಿ.2 ರಂದು ನಡೆಯುವ ಜನಾಗ್ರಹ ಸಭೆಗೆ ಯುವ ಜನತೆ ಆಕರ್ಷಿಸುವ ನಿಟ್ಟಿನಲ್ಲಿ ವಿಡಿಯೊ ಸಿದ್ಧಪಡಿಸಲಾಗಿದೆ. ವಿಡಿಯೊ ಹೆಚ್ಚು ಜನರನ್ನು ತಲುಪಲಿ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣ ಬಳಸಿಕೊಳ್ಳಲಾಗಿದೆ ಎಂದರು.
ನ. 21ರಿಂದ ಡಿ.2 ರವರೆಗೆ ನಿರಂತರವಾಗಿ ಹನುಮಾನ ಚಾಲಿಸ್ ಕಾರ್ಯಕ್ರಮ ನಡೆಯಲಿದೆ ಎಂದರು.
ಉದ್ಯಮಿ ಸಂಜಯ ಉಡುಪ ಅವರು ಜನಾಗ್ರಹ ಸಭೆಯ ಪ್ರಚಾರರ್ಥ ವಿಡಿಯೊವನ್ನು ಬಿಡುಗಡೆ ಮಾಡಿದರು.
ಉದ್ಯಮಿ ಕೃಷ್ಣ ರಾಜ್ ಹೆಗ್ಡೆ ಉಪಸ್ಥಿತರಿದ್ದರು. ಬಜರಂಗದಳದ ಪ್ರಮೋದ್ ಶೆಟ್ಟಿ ಸ್ವಾಗತಿಸಿದರು. ಭಾಗ್ಯಶ್ರೀ ಐತಾಳ್ ಕಾರ್ಯಕ್ರಮ ನಿರೂಪಿಸಿದರು.