ವಿ ಒನ್ ಅಕ್ವಾ ಸೆಂಟರ್ ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮ
ಮಂಗಳೂರಿನ ಸೇಂಟ್ ಎಲೊಶಿಯಸ್ ಕಾಲೇಜಿನ ಈಜುಕೊಳದಲ್ಲಿ ಕಾರ್ಯಾಚರಿಸುತ್ತಿರುವ ವಿ ಒನ್ ಅಕ್ವಾ ಸೆಂಟರ್ ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮವನ್ನು ಆಚರಿಸಲಾಯಿತು.
ಐರನ್ ಮ್ಯಾನ್ ಖ್ಯಾತಿಯ ಕೆ ಎಂ ಸಿ ಕಾಲೇಜಿನ ಕ್ಯಾನ್ಸರ್ ತಜ್ಞ ಡಾ ಗುರುಪ್ರಸಾದ್ ಭಟ್ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಮೂರು ವರ್ಷಗಳ ಹಿಂದೆ ನಾನು ಈಜುಕಲಿತು ಇದೀಗ ಹಲವಾರು ಕಡೆ ಸ್ಪರ್ಧೆಯಲ್ಲಿ ಈಜಿ ನಿಗದಿತ ಸಮಯದಲ್ಲಿ ಗುರಿ ತಲುಪಿ ಯಶಸ್ವಿಯಾಗಿದ್ದೇನೆ ಎಂದರು ಇದಕ್ಕಾಗಿ ನನಗೆ ತರಬೇತಿ ನೀಡಿದ ತರಬೇತುದಾರರಿಗೆ ಧನ್ಯವಾದಗಳು… ಫ್ಯಾಮಿಲಿಗೆ ಹಾಗೂ ವೃತ್ತಿ ಜೀವನಕ್ಕೆ ಸಮಯ ನೀಡಿ ಉಳಿದ ಸಮಯವನ್ನು ಜೀವನದಲ್ಲಿ ಏನಾದರೂ ಸಾಧಿಸಲು ಮೀಸಲಿಡಿ ಎಂದು ಕರೆ ನೀಡಿದರು
ಮುಖ್ಯ ಅತಿಥಿಯಾಗಿ ಭಾಷಣ ಮಾಡಿದ ಅಶೋಕನಗರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀಮತಿ ಭಾರತಿ ಇವರು ಈಜು ಎನ್ನುವುದು ಕೇವಲ ಕ್ರೀಡೆಯಲ್ಲ ಅದೊಂದು ಜೀವ ರಕ್ಷಕ ಕಲೆ…. ಪೊಲೀಸರಿಗೆ ಇದು ಅತ್ಯಗತ್ಯ ವಿಶೇಷ ಸಂದರ್ಭದಲ್ಲಿ ತನ್ನನ್ನು ರಕ್ಷಣೆ ಮಾಡಿಕೊಂಡು ಬೇರೆಯವರಿಗೆ ರಕ್ಷಣೆ ನೀಡಲು ಈಜು ಅತ್ಯಗತ್ಯ ಎಂದು ಹೇಳಿದರು
ಅಧ್ಯಕ್ಷತೆಯನ್ನು ವಹಿಸಿದ್ದ ರೆಕ್ಟರ್ ರೆವರೆಂಡ್ ಫಾದರ್ ಮೆಲ್ವಿನ್ ಜೋಸೆಫ್ ಪಿಂಟೊ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಪದಕ ವಿಜೇತರಾದ 30 ಈಜು ಪಟುಗಳನ್ನುನಗದು ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಿದರು ಇನ್ನಷ್ಟು ಹೆಚ್ಚಿನ ಸಾಧನೆಯನ್ನು ಮಾಡಿ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರಿಗೂ ಹಾಗೂ ಸಂಸ್ಥೆಗು ಖ್ಯಾತಿ ಬರುವಂತೆ ಪರಿಶ್ರಮ ಪಡಿ ಎಂದು ಕರೆ ನೀಡಿದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಶ್ರೀ ಪ್ರದೀಪ್ ಡಿಸೋಜಾ ಹಾಗೂ ವಿ ವನ್ ಅಕ್ವಾ ಸೆಂಟರ್ ನ ನಿರ್ದೇಶಕ ಶ್ರೀ ನವೀನ್ ಉಪಸ್ಥಿತರಿದ್ದರು
ರೂಪ ಜಿ ಪ್ರಭು ಸ್ವಾಗತಿಸಿದರು. ಮುಖ್ಯ ತರಬೇತುದಾರ ಲೋಕರಾಜ್ ವಿಟ್ಲ ಪ್ರಸ್ತಾವನೆ ಗೈದರು, ಶ್ರೀಮತಿ ಐವಿ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಅಕ್ಷತಾ ಶೋಧನ್ ಕಾರ್ಯಕ್ರಮ ನಿರೂಪಿಸಿದರು
ಈ ಸಂದರ್ಭದಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಮಕ್ಕಳು ಹಾಗೂ ಪೋಷಕರಿಂದ ಮನೋರಂಜನ ಕಾರ್ಯಕ್ರಮ ನಡೆಸಲಾಯಿತು.