Home Mangalorean News Kannada News ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳಬೆಟ್ಟು ವತಿಯಿಂದ ಅದ್ದೂರಿ ಹನುಮ ಜಯಂತಿ

ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳಬೆಟ್ಟು ವತಿಯಿಂದ ಅದ್ದೂರಿ ಹನುಮ ಜಯಂತಿ

Spread the love

ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳಬೆಟ್ಟು ವತಿಯಿಂದ ಅದ್ದೂರಿ ಹನುಮ ಜಯಂತಿ

ಉಡುಪಿ: ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ವಿಷ್ಣುಮೂರ್ತಿ ನಗರ, ಕೆಳಾರ್ಕಳಬೆಟ್ಟು ಇದರ 9 ನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವ, ಹನುಮ ಜಯಂತಿ ಹಾಗೂ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ಏಪ್ರಿಲ್ 18 ಮತ್ತು 19 ರಂದು ಜರುಗಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕರಾವಳಿಯಲ್ಲಿ ಹಲವಾರು ವ್ಯಾಯಾಮ ಶಾಲೆಗಳಿದ್ದರೂ ಸಹ ವೀರಮಾರುತಿ ವ್ಯಾಯಾಮ ಶಾಲೆಯ ವರ್ಷವಿಡೀ ವಿವಿಧ ಚಟುವಟಿಕೆಗಳಾದ ತಾಲೀಮು, ಹುಲಿವೇಷ, ಕೆಸರು ಗದ್ದೆ ಆಟೋಟ ಸ್ಪರ್ಧೆಗಳು, ನಾಟಕ, ಯಕ್ಷಗಾನ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತನ್ನದೇ ಆದ ಸೇವೆಯನ್ನು ನೀಡಿ ಮಂಚೂಣಿಯಲ್ಲಿದೆ. ಸತ್ಯ ಆತ್ಮವಿಶ್ವಾಸ ಹನುಮನ ಪ್ರಮುಖ ವಿಚಾರಧಾರೆಯಾಗಿದ್ದು ಅದರ ಆಧಾರದಲ್ಲಿ ವೀರಮಾರುತಿ ವ್ಯಾಯಾಮ ಶಾಲೆ ಬೆಳೆದುಕೊಂಡು ಬಂದಿದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ಕಲೆ ಮಹಾಲೀಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ್ ಭಟ್ ಅವರು ನೆರವೇರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ದಕ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಇದರ ಅಧ್ಯಕ್ಷರಾದ ಯಶಪಾಲ್ ಸುವರ್ಣ, ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಧನಂಜಯ ಕುಂದರ್, ಮುಂಬಯಿ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಎಲ್ ಎಮ್ ತೋನ್ಸೆ, ಡಿಕೆ ಸೌಂಡ್ಸ್ ಲಕ್ಷ್ಮೀನಗರ ಇದರ ದೀಪಕ್ ಕೊಪ್ಪಲತೋಟ, ನೇಜಾರ್ ಭಗವತಿ ತಿಯಾ ಸಮಾಜದ ಅಧ್ಯಕ್ಷರಾದ ಪ್ರಶಾಂತ್ ಸಾಲ್ಯಾನ್, ಮಲ್ಪೆಯ ಮತ್ಸ್ಯೋದ್ಯಮಿ ಶೇಖರ್ ಜಿ ಕೋಟ್ಯಾನ್, ತೆಂಕನಿಡಿಯೂರು ಕಿರಣ್ ಮಿಲ್ಕ್ ಡೈರಿ ಇದರ ಗೋಪಾಲಕೃಷ್ಣ ಶೆಟ್ಟಿ, ಕೇಳಾರ್ಕಳಬೆಟ್ಟು ಶ್ರೀ ದೇವೆಇ ಭೂದೇವಿ ವಿಷ್ಟುಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ಸದಾನಂದ ನಾಯಕ್, ಯುವ ಉದ್ಯಮಿ ಜೀವನ್ ಪಾಲೆಕಟ್ಟೆ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದರು.

ವ್ಯಾಯಾಮ ಶಾಲೆಯ ಗೌರವಾಧ್ಯಕ್ಷರಾದ ದಯಾನಂದ ಶೆಟ್ಟಿ ಕೊಜಕುಳಿ, ಉಪಾಧ್ಯಕ್ಷರಾದ ಅನಿಲ್ ಪಾಲನ್, ಪ್ರಧಾನ ಕಾರ್ಯದರ್ಶಿ ಮಧುಸೂದನ್, ಜೊತೆ ಕಾರ್ಯದರ್ಶಿ ಅಜಿತ್, ಕೋಶಾಧಿಕಾರಿಗಳಾದ ರಕ್ಷಿತ್ ಮತ್ತು ಸುಮಿತ್ ಪಾಲನ್, ಕ್ರೀಡಾ ಕಾರ್ಯದರ್ಶಿ ಚೇತನ್ ರಾವ್ ಮತ್ತು ನಾಗೇಶ್ ಪಾಲನ್, ಅರ್ಚಕರಾದ ಅಶೋಕ್ ಕೋಟ್ಯಾನ್, ಧನರಾಜ್, ಉದಯ್, ಪ್ರಣವ್, ವ್ಯಾಯಾಮ ಶಾಲಾ ಶಿಕ್ಷರಾದ ಕೃಷ್ಣಪ್ಪ ತಿಂಗಳಾಯ, ಪದಾಧಿಕಾರಿ ಸುಭಾಶ್ ಕೊಳ, ಗೌರವ ಸಲಹೆಗಾರರಾದ ಅಣ್ಣಯ್ಯ ಪಾಲನ್, ಬಾಬು ಸಾಲಿಯನ್, ಭವಾನಿ ಶಂಕರ ಲಾಡ್, ಅಂಜನಾ ಮಾತೃ ಮಂಡಳಿ ಅಧ್ಯಕ್ಷರಾದ ಜಯಂತಿ ಎಸ್ ಉಪಸ್ಥಿತರಿದ್ದರು.

ಉಪಾಧ್ಯಕ್ಷರಾದ ಅನಿಲ್ ಪಾಲನ್ ವಂದಿಸಿ, ಸುಚೇತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತರಿಗೆ ಗೌರವಾರ್ಪಣೆ ನಡೆಯಿತು. ಸಂಘದ ಸದಸ್ಯರಿಂದ ಈ ದಾಯೆ ಪಾತೆರುಜ ತುಳು ನಾಟಕವನ್ನು ಪ್ರದರ್ಶಿಸಲಾಯಿತು.


Spread the love

Exit mobile version