ವೀರರಾಣಿ ಅಬ್ಬಕ್ಕ ಉತ್ಸವ – ಆಹ್ವಾನಪತ್ರಿಕೆ ಬಿಡುಗಡೆ
ಮಂಗಳೂರು : ಈ ವರ್ಷದ ವೀರರಾಣಿ ಅಬ್ಬಕ್ಕ ಉತ್ಸವ 2018ರ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಚಪ್ಪರ ಮುಹೂರ್ತ ಕಾರ್ಯಕ್ರಮವು ಸೋಮೇಶ್ವರ ಗ್ರಾಮದ ಕೊಲ್ಯ ಮೈದಾನದಲ್ಲಿ ಆಹಾರ ಮತ್ತು ನಾಗರಿಕ ಸಚಿವರಾದ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಅಬ್ಬಕ್ಕಳ ಸೌಹಾರ್ದ, ಸಾಹಸ, ಶೌರ್ಯವನ್ನು ಬಿಂಬಿಸುವ ಅಬ್ಬಕ್ಕ ಉತ್ಸವವನ್ನು ನಾಡಹಬ್ಬದಂತೆ ಆಚರಿಸಲು ಕರ್ನಾಟಕ ಸರಕಾರವು ರೂ.30 ಲಕ್ಷ ಅನುದಾನ ನೀಡಿದೆ. ಅಬ್ಬಕ್ಕಳ ಸ್ಮರಣೆಯೊಂದಿಗೆ ನಾಡಹಬ್ಬವನ್ನು ವಿಜೃಂಭಣೆಯೊಂದಿಗೆ ನಡೆಸಲು ಸರ್ವರ ಪಾಲ್ಗೊಳ್ಳುವಿಕೆಯು ಅತ್ಯವಶ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯರಾದ ರಾಮಚಂದ್ರ ಕುಂಪಲ, ಗಣ್ಯರಾದ ಇಬ್ರಾಹಿಂ ಕೋಡಿಜಾಲ್, ಸದಾಶಿವ ಉಳ್ಳಾಲ್, ಸೀತರಾಮ ಬಂಗೇರ, ಲ.ಡಾ.ಶಿವಕುಮಾರ್ ಮಗದ, ಶ್ರೀ ಎಂ.ಸುರೇಶ್ಚಂದ್ರ ಶೆಟ್ಟಿ, ಭಾಸ್ಕರ್ ಐತಾಳ್, ಕ್ಲೇರಾ ಕುವೆಲ್ಲೊ, ಜಯಂತಿ, ಪ್ರಕಾಶ್ ಕರ್ಕೆರ, ಸುಂದರ ಕುಂಪಲ, ರೋಹಿದಾಸ್ ಭಟ್ನಗರ, ದಮಯಂತಿ ಉಳ್ಳಾಲ, ಸದನಾಂದ ಬಂಗೇರ, ಯು.ಪಿ.ಆಲಿಯಬ್ಬ, ಅಬ್ದುಲ್ ಅಜೀಜ್ ಹಕ್, ತಾರನಾಥ ರೈ, ತೋನ್ಸೆ ಪುಷ್ಕಳ್ ಕುಮಾರ್, ಡಿ.ಎನ್.ರಾಘವ, ನಿರ್ಮಲ್ ಕುಮಾರ್, ಪ್ರಭಾಕರ್ ಜೋಗಿ, ಸತೀಶ್ ಭಂಡಾರಿ, ಬಾದ್ಷಾಹ ಸಾಂಬಾರ್ ತೋಟ, ಶ್ರೀಮತಿ ಪದ್ಮಾವತಿ ಅಮೀನ್, ನಮಿತಾ ಶ್ಯಾಂ, ವಿಜಯಲಕ್ಷ್ಮಿ ಬಿ.ಶೆಟ್ಟಿ, ದೇವಕಿ ಆರ್.ಉಳ್ಳಾಲ್, ಧನಲಕ್ಷ್ಮಿ, ಶಶಿಕಲಾ ಗಟ್ಟಿ, ಮಲ್ಲಿಕಾ ಭಂಡಾರಿ, ಅನುಪಮ ಸಿ.ಬಬ್ಬುಕಟ್ಟೆ, ಹೇಮಾ ಯು, ವಾಣಿ ಲೋಕಯ್ಯ , ಗೀತಾ ಸಲ್ಡಾನಾ, ದೇವಕಿ ಯು.ಬೋಳಾರ್ ಮುಂತಾದವರು ಉಪಸ್ಧಿತರಿದ್ದರು.
ಅಬ್ಬಕ್ಕ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್ ಸ್ವಾಗತಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಪ್ರಸ್ತಾವನೆಗೈದರು. ಆನಂದ ಕೆ. ಅಸೈಗೋಳಿ ವಂದಿಸಿದರು.