ವೆನ್‍ಲಾಕ್ ಆಸ್ಪತ್ರೆಯಲ್ಲಿ ಮೊಟ್ಟ ಮೊದಲ ಶುಶ್ರೂಷರ ನೋಂದಣಿ ನವೀಕರಣ ಕಾರ್ಯಕ್ರಮ

Spread the love

ವೆನ್‍ಲಾಕ್ ಆಸ್ಪತ್ರೆಯಲ್ಲಿ ಮೊಟ್ಟ ಮೊದಲ ಶುಶ್ರೂಷರ ನೋಂದಣಿ ನವೀಕರಣ ಕಾರ್ಯಕ್ರಮ

ಮಂಗಳೂರು :ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಶುಶ್ರೂಷ ಶಾಲೆಯಲ್ಲಿ ದ.ಕ. ಶುಶ್ರೂಷಕರ ಸಂಘ ಮತ್ತು ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್‍ನ ಸಹಯೋಗದೊಂದಿಗೆ ಮಂಗಳೂರಿನಲ್ಲಿ ಮೊಟ್ಟ ಮೊದಲ ಶುಶ್ರೂಷರ ನೋಂದಣಿ ನವೀಕರಣ ಕಾರ್ಯಕ್ರಮವನ್ನು ನೇರವೇರಿಸಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಜಂಟಿ ನಿರ್ದೇಶಕಿ ಡಾ. ದಮಯಂತಿ ಇವರು ನೇರವೆರಿಸಿದರು.

ಈವರೆಗೆ ಶುಶ್ರೂಷರ ನೋಂದಣಿ ನವೀಕರಣ ಮಾಡಲು ಬೆಂಗಳೂರಿನಲ್ಲಿ ಮಾತ್ರ ಅವಕಾಶವಿತ್ತು. ಈ ಕಾರ್ಯಕ್ರಮವು ಮಂಗಳೂರಿನಲ್ಲಿ ಎರಡು ತಿಂಗಳ ಕಾಲ ನಡೆಯಲ್ಲಿದ್ದು, ಹೆಚ್ಚಿನ ಮಾಹಿತಿಯನ್ನು ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಶುಶ್ರೂಷ ಶಾಲೆಯಲ್ಲಿ ಪಡೆಯಬಹುದಾಗಿದ್ದು, ದ.ಕ. ಜಿಲ್ಲೆಯ ಎಲ್ಲಾ ಶುಶ್ರೂಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.

ಉದ್ಘಾಟನೆಯ ಸಂಧರ್ಭದಲ್ಲಿ ಡಾ. ಜ್ಯೂಲಿಯಾನಾ ಸಲ್ಡಾನ್ಹಾ, ಆರ್.ಎಂ.ಓ., ಶ್ರೀಮತಿ ಶ್ರೀವಿದ್ಯಾ, ಕಾರ್ಯದರ್ಶಿ, ಮೇಟ್ರನ್ ಶ್ರೀಮತಿ ಹರಿಣಿ ಶೆಟ್ಟಿ, ದ.ಕ. ಶುಶ್ರೂಷಕರ ಸಂಘದ ಅಧ್ಯಕ್ಷರಾದ ಶ್ರೀಮತಿ. ದೇವಕಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಜಂಟಿ ನಿರ್ದೇಶಕಿ ಡಾ. ದಮಯಂತಿ ಇವರು ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ದ.ಕ. ಜಿಲ್ಲೆಯ ಶುಶ್ರೂಷಕರು ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.


Spread the love