ಮ0ಗಳೂರು : ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಭಾರತ ಸರಕಾರ ನೀಡುವ ಕಾಯಕಲ್ಪ ಪ್ರಶಸ್ತಿ ಲಭಿಸಿದೆ.
ಸ್ವಚ್ಛ ಭಾರತ ಅಭಿಯಾನದಡಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕಾಯಕಲ್ಪ ಯೋಜನೆಯು ಅನುಷ್ಠಾನಗೊಂಡಿರುತ್ತದೆ. ಅದರಂತೆ ಕರ್ನಾಟಕ ರಾಜ್ಯದ 20 ಜಿಲ್ಲಾ ಆಸ್ಪತ್ರೆಗಳಲ್ಲಿ 2015-2016ನೇ ಸಾಲಿನ ಯೋಜನೆಯು ಅನುಷ್ಟಾನಗೊಂಡಿದ್ದು ಈ ನಿಟ್ಟಿನಲ್ಲಿ ವೆನ್ಲಾಕ್ ಸರಕಾರಿ ಜಿಲ್ಲಾ ಆಸ್ಪತ್ರೆದ.ಕ ಮಂಗಳೂರು ಇಲ್ಲಿನ ಜಿಲ್ಲಾ ಮಟ್ಟದ ಕಾಯಕಲ್ಪ ಅವಾರ್ಡ್ ನಾಮಿನೇಶನ್ ಸಮಿತಿಯನ್ನು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು.
ಅದರಂತೆ ವೆನ್ಲಾಕ್ ಆಸ್ಪತ್ರೆಯ ಆಡಳಿತ ಮತ್ತು ವೈದ್ಯರ ಹಾಗೂ ಇತರಎಲ್ಲಾ ವಿಭಾಗದ ಸಿಬ್ಬಂಧಿಗಳನ್ನೊಳಗೊಂಡ ಆಂತರಿಕ ಕಾಯಕಲ್ಪ ಸಮಿತಿಯನ್ನು ರಚಿಸಿ, ಇಡೀ ಆಸ್ಪತ್ರೆ ತೊಡಗಿಸಿಕೊಂಡಿತ್ತು. ರಾಷ್ಟ್ರೀಯ ಆರೋಗ್ಯ ಅಭಿಯಾನದ ಯೋಜನಾ ಸಮಿತಿಯ ಮೌಲ್ಯ ಮಾಪನಾ ಸ್ಕೋರ್ಕಾರ್ಡಿನ ನಿಯಮಾನುಸಾರದಂತೆ ಆಸ್ಪತ್ರೆಯ ಆಂತರಿಕ ಸಮಿತಿಯು ಪ್ರಥಮವಾಗಿ ಯೋಜನೆಯಲ್ಲಿ ಭಾಗವಹಿಸಲು ಸಿದ್ದಗೊಂಡು ಆಸ್ಪತ್ರೆಯಎಲ್ಲಾ ವಿಭಾಗಗಳನ್ನು ಪರಿಶೀಲಿಸಿ ಕಾರ್ಯಕಲ್ಪ ಪ್ರಶಸ್ತಿಗಾಗಿ ಸ್ಪರ್ಧಿಸಲು ಅರ್ಹತೆಯನ್ನು ಕಂಡುಕೊಂಡಿತ್ತು. ಅದರಂತೆ ಆಸ್ಪತ್ರೆಯ ಆಂತರಿಕ ಸಮಿತಿಯು ಪ್ರಥಮವಾಗಿ ಮೌಲ್ಯಮಾಪನದಲ್ಲಿ ಮೊದಲ ಸ್ಥಾನ ಪಡೆಯುವ ಪ್ರಯತ್ನ ನಡೆಸಲಾಯಿತು.
ದ್ವಿತೀಯ ಹಂತದಲಿ ್ಲರಾಷ್ಟ್ರೀಯ ಯೋಜನಾ ಸಮಿತಿಯು ನಿಗದಿಪಡಿಸಿದ ಅಂತರ್ಜಿಲ್ಲಾ ಮೌಲ್ಯಮಾಪನ ಸಮಿತಿಯು ಗುಪ್ತವಾಗಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು, ಈ ಹಂತದಲ್ಲೂ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಪ್ರಥಮ ಸ್ಥಾನವನ್ನೇ ಕಾಯ್ದುಕೊಂಡಿತ್ತು.
ಈ ವರದಿಯ ಆಧಾರದಲ್ಲಿ ದಿನಾಂಕ 28-09-2015 ರಾಜ್ಯ ಮಟ್ಟದ ಬಾಹ್ಯ ಮೌಲ್ಯ ಮಾಪನ ಸಮಿತಿಯು ದಿಢೀರನೆ ಭೇಟಿ ನೀಡಿ ಆಸ್ಪತ್ರೆಯ ಪ್ರತೀ ವಿಭಾಗಳನ್ನು ಪರಿಶೀಲನೆ ನಡೆಸಿ ರಾಷ್ಠ್ರೀಯ ಆರೋಗ್ಯಅಭಿಯಾನ ಸಮಿತಿಗೆ ವರದಿಯನ್ನು ಸಲ್ಲಿಸಿತು. ಅದರಂತೆ ಕರ್ನಾಟಕ ರಾಜ್ಯಮಟ್ಟದಲ್ಲಿರುವ ಎಲ್ಲಾ 20 ಜಿಲ್ಲಾ ಆಸ್ಪತ್ರೆಗಳ ಪೈಕಿ ಸುಮಾರು 167 ವರ್ಷಗಳಷ್ಟು ಇತಿಹಾಸ ಇರುವ ಹಾಗೂ ರಾಜ್ಯದಲ್ಲೇ ಸ್ವಚ್ಛತೆ ಮತ್ತು ರೋಗಿಗಳ ಸೇವಾ ಕಾರ್ಯದಲ್ಲಿ ಪ್ರಾರಂಭದಿಂದಲೇ ಗುಣಮಟ್ಟವನ್ನು ಪ್ರಥಮ ಸ್ಥಾನದಲ್ಲೇ ಕಾಯ್ದುಕೊಂಡು ಬಂದಿರುವ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯು ಹಳೇ ಕಟ್ಟಡದಲ್ಲಿದೆ ಎಂಬ ಕಾರಣ ನೀಡಿ ರಾಜ್ಯಮಟ್ಟದ ಮೌಲ್ಯ ಮಾಪನ ಸಮಿಯು ಕೇವಲ 2 ಅಂಕಗಳನ್ನು ಕಡಿತಗೊಳಿಸಿದ ಪರಿಣಾಮವಾಗಿ ದ್ವಿತೀಯ ಸ್ಥಾನ ಪಡೆಯಬೇಕಾಯಿತು.
ರಾಷ್ಟ್ರೀಯ ಆರೋಗ್ಯಅಭಿಯಾನದಡಿಯಲ್ಲಿ ರನ್ನರ್ ಅಪ್ಆಗಿ ಕಾಯಕಲ್ಪ ಪ್ರಶಸ್ತಿಯನ್ನು ವೆನ್ಲಾಕ್ ಅಧೀಕ್ಷಕಿ ಡಾ. ರಾಜೇಶ್ವರೀದೇವಿ ಹೆಚ್.ಆರ್ನ ಅವರು ಮಾರ್ಚ್ 16 ರಂದು ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವರಿಂದ ಕಾಯಕಲ್ಪ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.