Home Mangalorean News Kannada News ವೆನ್‍ ಲಾಕ್ ಆಸ್ಪತ್ರೆಯ ಸಿಬ್ಬಂದಿ ಬಿ. ಶೇಷಪ್ಪ ಬಂಬಿಲ ಗೆ ಸನ್ಮಾನ

ವೆನ್‍ ಲಾಕ್ ಆಸ್ಪತ್ರೆಯ ಸಿಬ್ಬಂದಿ ಬಿ. ಶೇಷಪ್ಪ ಬಂಬಿಲ ಗೆ ಸನ್ಮಾನ

Spread the love

ವೆನ್‍ಲಾಕ್ ಆಸ್ಪತ್ರೆಯ ಸಿಬ್ಬಂದಿ ಬಿ. ಶೇಷಪ್ಪ ಬಂಬಿಲ ಗೆ ಸನ್ಮಾನ

ಮಂಗಳೂರು :ನಾಡೋಜ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ ವತಿಯಿಂದ ವೆನ್‍ಲಾಕ್ ಆಸ್ಪತ್ರೆಯ ಸಿಬ್ಬಂದಿ ಬಿ. ಶೇಷಪ್ಪ ಬಂಬಿಲ ಅವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು.

ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಆಡಳಿತ ವಿಭಾಗದಲ್ಲಿ ವಿಷಯ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಸಮಾಜಮುಖಿ ಸೇವಾ ಮನೋಭಾವದ ಬಿ. ಶೇಷಪ್ಪ ಬಂಬಿಲ ಇವರು ರೋಗಿಗಳ ಪಟ್ಟಿ ತಯಾರಿಸಿ ಕ್ಲಪ್ತ ಸಮಯಕ್ಕೆ ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯದಲ್ಲಿ ಪ್ರತಿವರ್ಷ ಸಫಲರಾಗಿದ್ದಾರೆ. ಇವರ ಸೇವೆಗೆ ಸಂಸ್ಥೆಯ ಸಾಧನಾ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಜಿ. ಶಂಕರ್, ಸಂಸ್ಥೆಯ ಟ್ರಸ್ಟಿಗಳಾದ, ಎಸ್. ಕೆ. ಆನಂದ, ಹಾಗೂ ಶಂಕರ್ ಸಾಲಿಯಾನ್, ಮಾನವ ಹಕ್ಕು ಫೆಡರೇಶನ್ ಆಫ್ ಇಂಡಿಯಾದ ಕೊಲ್ಲಾಡಿ ಬಾಲಕೃಷ್ಣ ರೈ, ದ.ಕ ಮಾನವ ಹಕ್ಕು ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ವಸಂತ ಶೆಟ್ಟಿ, ವೆನ್ಲಾಕ್ ಆಸ್ಪತ್ರೆಯ ಡಾ. ರಾಜೇಶ್ವರಿ ದೇವಿ,ಡಾ. ಜುಲಿಯಾನ ಸಲ್ಡಾನ ಆರ್.ಎಂ.ಓ. ಹಾಗೂ ಹಲವಾರು ಹಿರಿಯ ವೈದ್ಯಾಧಿಕಾರಿ ಮತ್ತು ನರ್ಸಿಂಗ್ ಸೂಪರಿಂಟೆಂಡೆಂಟ್ ಉಪಸ್ಥಿತರಿದ್ದರು. ಹಿರಿಯ ತಜ್ಞರಾದ ಡಾ. ಶಿವಪ್ರಕಾಶ್ ಸಂದರ್ಭೊಚಿತವಾಗಿ ಡಾ .ಜಿ ಶಂಕರ್‍ರವರ ಕುರಿತು ಮಾತಾಡಿದರು.

ಬಿ ಶೇಷಪ್ಪ ಇವರು ಈಗಾಗಲೇ ಮಾನವ ಹಕ್ಕು ಫೆಡರೇಶನ್ ಆಪ್ ಇಂಡಿಯಾದವರಿಂದ 2014 ರಲ್ಲಿ ‘ಸಾಧನಾ ಪ್ರಶಸ್ತಿ’ 2016 ರಲ್ಲಿ ಸರಕಾರಿ ಸೇವೆಯಲ್ಲಿ ‘ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ,’ ಕರ್ನಾಟಕ ರಾಜ್ಯ ಡಿ. ದರ್ಜೆ ನೌಕರರ ಜಿಲ್ಲಾ ಸಂಘ, ದ.ಕ. ಇವರಿಂದ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಜಿಲ್ಲಾ ಸಂಘದಿಂದ ಸನ್ಮಾನ ಹಾಗೂ ಸರಕಾರಿ ಅಧಿಕಾರಿಗಳ ಬ್ಯಾಂಕಿನ 100ನೇ ವಾರ್ಷಿಕೋತ್ಸವದಲ್ಲಿ ‘ಸಾಹಿತ್ಯ ಪ್ರಶಸ್ತಿ’ ಹೀಗೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿರುತ್ತಾರೆ.


Spread the love

Exit mobile version